ಹನಿಪ್ರೀತ್ ಗೆ 6 ದಿನ ಪೊಲೀಸ್ ಕಸ್ಟಡಿ: ಪಂಚಕುಲ ನ್ಯಾಯಾಲಯ ಆದೇಶ

ಪಂಚಕುಲ(ಹರ್ಯಾಣ), ಅಕ್ಟೋಬರ್ 4: 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ ರಾಮ್ ರಹೀಮ್ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಅವರನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ, ಪಂಚಕುಲ ನ್ಯಾಯಾಲಯ ಆದೇಶ ಹೊರಡಿಸಿದೆ.

ರಾಮ್ ರಹೀಮ್ ಬಂಧನದ ನಂತರ ಹರ್ಯಾಣದಾದ್ಯಂತ ಹೊತ್ತಿ ಉರಿದ ಗಲಭೆಗೆ ಸಂಬಂಧಿಸಿದಂತೆ ಹನಿಪ್ರೀತ್ ಇನ್ಸಾನ್ ಸೇರಿದಂತೆ ರಾಮ್ ರಹೀಮ್ ನ ಹಲವು ಆಪ್ತರನ್ನು ಬಂಧಿಸಲು ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ ಹನಿಪ್ರೀತ್ ನಿನ್ನೆಯವರೆಗೂ ಪೊಲೀಸರಿಗೆ ಕಾಣಿಸಿಕೊಂದಿರಲಿಲ್ಲ. ಅಕ್ಟೋಬರ್ 3 ರಂದು ತಾವೇ ಪೊಲೀಸರಿಗೆ ಶರಣಾಗಿದ್ದರು.

Honeypreet Insan sent to six days police remand by Panchkula Cour

ನಿನ್ನೆ ರಾತ್ರಿ ನಾಲ್ಕೂವರೆ ಗಂಟೆಯ ಕಾಲ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದ ಹನಿಪ್ರೀತ್ ನಂತರ ಎದೆನೋವು ಎಂದು ಆಸ್ಪತ್ರೆಗೆ ತೆರಳಿದ್ದರು. ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಹನಿಪ್ರೀತ್ ಅವರನ್ನು ನ್ಯಾಯಾಲಯ ಆರು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+