ಕೇದಾರನಾಥ ಪ್ರವಾಹದ ಕಾರಣ ಕಂಡುಹಿಡಿದ ಸ್ವಾಮೀಜಿ!

Subscribe to Oneindia Kannada

ನವದೆಹಲಿ, ಏಪ್ರಿಲ್. 13: ಸಾಯಿಬಾಬಾ, ಶನಿಸಿಂಗಣಾಪುರದಲ್ಲಿ ಮಹಿಳೆಯರ ಪೂಜೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ವಾರಕಾನಾಥ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ

2013ರಲ್ಲಿ ಐದು ಸಾವಿರ ಯಾತ್ರಾರ್ಥಿಗಳನ್ನು ಬಲಿತೆಗೆದುಕೊಂಡ ಕೇದಾರನಾಥದ ಮೇಘ ಸ್ಫೋಟಕ್ಕೆ ಕಾರಣವನ್ನು ಸ್ವಾಮೀಜಿ ಪತ್ತೆ ಹಚ್ಚಿದ್ದಾರೆ. "ಮಧುಚಂದ್ರಕ್ಕೆ ತೆರಳಿದ್ದ ಜೋಡಿಗಳು, ಪಿಕ್‌ನಿಕ್‌ ಪ್ರಿಯರು "ದೇವಭೂಮಿ'ಯಲ್ಲಿ ಮಜಾ ಮಾಡಿದ್ದೆ ನಿಸರ್ಗದ ಮುನಿಸಿಗೆ ಕಾರಣ" ಎಂದು ಹೇಳಿಕೆ ನೀಡಿದ್ದಾರೆ.["ಫಕೀರ ಸಾಯಿಬಾಬಾ ಪೂಜೆ ಮಾಡಿದ್ದಕ್ಕೆ ಬರಗಾಲ ಬಂತು"]

ಹಿಂದೂ ಪುಣ್ಯಕ್ಷೇತ್ರಗಳ ಪರಿಸರವನ್ನು ಹಾಳು ಮಾಡುತ್ತಿರುವುದ್ನು ತಡೆಯದೇ ಹೋದಲ್ಲಿ ಕೇದಾರನಾಥದಲ್ಲಿ ಮಾತ್ರವಲ್ಲದೇ ಇನ್ನೂ ಅನೇಕ ಪವಿತ್ರ ಕ್ಷೇತ್ರಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಸಾವು-ನೋವು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಸ್ವಾಮೀಜಿ ಇಂಥ ಹೇಳಿಕೆ ನೀಡುತ್ತಿರುವುದು ಇದು ಮೋದಲೇನೂ ಅಲ್ಲ.

ಹನಿಮೂನ್ ಕಾರಣ

ಹನಿಮೂನ್ ಕಾರಣ

ಯುವ ಜೋಡಿಗಳು ಇಂಥ ಕ್ಷೇತ್ರಕ್ಕೆ ಹನಿಮೂನ್ ಗೆಂದು ಬರುವುದನ್ನು ನಿಸರ್ಗ ಸಹಿಸಿಕೊಳ್ಳುವುದಿಲ್ಲ. ಜನ ಮತ್ತು ಸಮಾಜದ ಮೇಲೆ ಮುನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಸಾಯಿಬಾಬಾ ಪೂಜಿಸಿದ್ದೆ ಬರಕ್ಕೆ ಕಾರಣ

ಸಾಯಿಬಾಬಾ ಪೂಜಿಸಿದ್ದೆ ಬರಕ್ಕೆ ಕಾರಣ

ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದೆ ಮಹಾರಾಷ್ಟ್ರಕ್ಕೆ ಬರ ಪರಿಸ್ಥಿತಿ ಬರಲು ಕಾರಣ, ಬಾಬಾಗೆ ದೇವಾಲಯ ಕಟ್ಟುವುದರಲ್ಲಿ ಅರ್ಥವಿಲ್ಲ" ಎಂದು ಸ್ವಾಮೀಜಿ ಮಾತು ಹರಿಯಬಿಟ್ಟಿದ್ದರು.

ಪೂಜೆ ಮಾಡಿದರೆ ಅತ್ಯಾಚಾರ

ಪೂಜೆ ಮಾಡಿದರೆ ಅತ್ಯಾಚಾರ

ಶನಿ ಸಿಂಗಣಾಪುರ ದೇಗುಲಕ್ಕೆ ಮಹಿಳೆಯರಿಂದ ಪೂಜೆ ಬಗ್ಗೆ ಮಾತನಾಡಿದ್ದ ಸ್ವಾಮೀಜಿ, ಅತ್ಯಾಚಾರ ಹೆಚ್ಚಲು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಇಂಥ ಘಟನಾವಳಿಗಳು ಕಾರಣವಾಗುತ್ತವೆ ಎಂಬ ಹೇಳಿಕೆ ನೀಡಿದ್ದರು.

ಇನ್ನು ಹೆಚ್ಚುತ್ತದೆ

ಇನ್ನು ಹೆಚ್ಚುತ್ತದೆ

ಪವಿತ್ರ ಸ್ಥಳಗಳಲ್ಲಿ ನಡೆಯುತ್ತಿರುವ ಮೋಜು-ಮಸ್ತಿಯನ್ನು ತಡೆಯದೆ ಹೋದರೆ ಮುಂದೆ ಮತ್ತಷ್ಟು ಅವಘಡ ಸಂಭವಿಸಿ ಅಪಾರ ಸಾವು-ನೋವು ಸಂಭವಿಸುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Swami Swaroopanand Saraswati, the Shankaracharya of Dwaraka-Sharda Peeth, on Tuesday blamed honeymooners and picnic-goers for the 2013 Kedarnath flash floods that killed over 5,000 pilgrims.
Please Wait while comments are loading...