ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ವರೆ ಮಾಡಿ, ಶೇ 10-12 ರಿಯಾಯಿತಿ ದರದಲ್ಲಿ ವಾಹನ ಮಾರಾಟ!

ಏಪ್ರಿಲ್ 01ರಿಂದ ಬಿಎಸ್ 3 ವಾಹನಗಳ ಮಾರಾಟ ನಿಷೇಧ ಹೇರಿಕೆಯಿಂದಾಗಿ ವಾಹನ ಸಂಸ್ಥೆಗಳು, ಡೀಲರ್ ಗಳು ಕ್ಲಿಯರೆನ್ಸ್ ಸೇಲ್ ಆರಂಭಿಸಿದ್ದು, 10-12% ರಿಯಾಯಿತಿ ದರದಲ್ಲಿ ಮಾರಾಟ ಕಂಡು ಬಂದಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 30: ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಿ.ಎಸ್-4 (ಭಾರತ್ ಸ್ಟೇಜ್-4) ನಿಯಮಗಳನ್ನು ಜಾರಿಗೆ ತರಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದನ್ನು ಎಲ್ಲರೂ ಸ್ವಾಗತಿಸಿದ್ದಾರೆ.

ಜತೆಗೆ ಏಪ್ರಿಲ್ 01ರಿಂದ ಬಿಎಸ್ 3 ವಾಹನಗಳ ಮಾರಾಟ ನಿಷೇಧ ಹೇರಿಕೆಯಿಂದಾಗಿ ವಾಹನ ಸಂಸ್ಥೆಗಳು, ಡೀಲರ್ ಗಳು ಕ್ಲಿಯರೆನ್ಸ್ ಸೇಲ್ ಆರಂಭಿಸಿದ್ದು, 10-12% ರಿಯಾಯಿತಿ ದರದಲ್ಲಿ ಮಾರಾಟ ಕಂಡು ಬಂದಿದೆ.[ಬಿಎಸ್ III ವಾಹನ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ]

ಹೀರೋ ಸಂಸ್ಥೆ ಸ್ಕೋಟರ್ ಗಳ ಮಾರಾಟದ ಮೇಲೆ 12,500 ರಿಬೇಟ್ ಹಾಗೂ ಪ್ರೀಮಿಯಂ ಬೈಕುಗಳ ಮೇಲೆ 7,500 ರು ತನಕ ರಿಯಾಯಿತಿ ಹಾಗೂ ಎಂಟ್ರಿ ಲೆವೆಲ್ ವಾಹನಗಳ ಮೇಲೆ 5,000 ರು ರಿಯಾಯಿತಿ ನೀಡುತ್ತಿದೆ.

Honda, Hero Company and other Dealers offer BS3 two-wheelers at steep discount

ಹೋಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ (ಎಚ್ಎಂಎಸ್ ಐ) ಎಲ್ಲಾ ವಾಹನಗಳ ಮೇಲೆ 10,000 ರು ತನಕ ರಿಯಾಯಿತಿ ನೀಡುತ್ತಿದೆ.

ಏ.1ರ ಬಳಿಕ ಬಿ.ಎಸ್-III ಮಾದರಿಯ ಯಾವುದೇ ವಾಹನಗಳನ್ನು ನೋಂದಾಯಿಸುವಂತಿಲ್ಲವೆಂದೂ, ಅದಕ್ಕಿಂತ ಮುಂಚೆ ಮಾರಲ್ಪಟ್ಟ ವಾಹನಗಳಿಗೆ ಹೊಸ ನಿಯಮ ಅನ್ವಯಿಸುವುದಿಲ್ಲವೆಂದು ಕೋರ್ಟ್ ಹೇಳಿದೆ.

ಬಿ.ಎಸ್-III ವಾಹನಗಳಿಂದ ಅತೀಯಾದ ವಾಯ್ಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿರುವ ವರದಿ ಬಂದ ಹಿನ್ನಲೆಯಲ್ಲಿ ವ್ಯವಹಾರಕ್ಕಿಂತ ಜನರ ಆರೋಗ್ಯವೇ ಮುಖ್ಯ ಪರಿಗಣಿಸಿ ಕೋರ್ಟ್ ಆದೇಶ ಹೊರಡಿಸಿತ್ತು.

ಏಪ್ರಿಲ್ 01ಕ್ಕಿಂತ ಮುಂಚಿತವಾಗಿ ಕ್ಲಿಯರೆನ್ಸ್ ಸೇಲ್ ಮೂಲಕ ವಾಹನಗಳನ್ನು ಬಿಕರಿ ಮಾಡಲು ಹೋಂಡಾ ಮೋಟೋ ಕಾರ್ಪ್, ಹೀರೋ ಸೇರಿದಂತೆ ಹಲವು ಸಂಸ್ಥೆಗಳು ಮುಂದಾಗಿವೆ.

ಭಾರತದಲ್ಲಿ 8.2 ಲಕ್ಷ ಬಿ.ಎಸ್-III ಮಾದರಿಯ ವಾಹನಗಳ ದಾಸ್ತಾನು ಇದೆ. 6 ಲಕ್ಷಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 12 ಸಾವಿರ ಕೋಟಿ ರು ಎನ್ನಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಸುಮಾರು 20 ಸಾವಿರ ವರ್ತಕರಿಗೆ ಭಾರೀ ನಷ್ಟವಾಗಲಿದೆ ಎಂಬ ಮಾಹಿತಿ ಬಂದಿದೆ.

English summary
Two-wheeler dealers and companies rush to liquidate BS3 stock. ಣೊವ್been offering discounts ranging from 10-15% since mid-March but those are expected to go up sharply in the next two days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X