Holiday: ಜುಲೈ 6, 7ರಂದು ಎಲ್ಲಾ ಶಾಲಾ-ಕಾಲೇಜು, ಬ್ಯಾಂಕ್‌ಗಳು ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ?
Holiday: ಈಗಾಗಲೇ ದೇಶದ ಹಲವೆಡೆ ಕಾರಣಾಂತಗಳಿಂದ ಶಾಲಾ-ಕಾಲೇಜು ಸೇರಿದಂತೆ ಬ್ಯಾಂಕ್‌ಗಳಿಗೂ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ಜುಲೈ 6 ಹಾಗೂ 7ರಂದು ಕೂಡ ಮೊಹರಾಂ ಹಿನ್ನೆಲೆ ರಜೆ ಸಿಗಲಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದ ತಿಳಿಯಿರಿ.
ಕರ್ನಾಟಕದಲ್ಲಿ ಬೇಸಿಗೆ ರಜೆಗಳು ಮುಗಿದು ಶಾಲೆಗಳು ಕೂಡ ಆರಂಭವಾಗಿವೆ. ಇದಕ್ಕೂ ಮುಂಚೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಹಲವು ಕಾರಣಗಳಿಂದ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಈ ನಡವೆಯೇ ಇದೀಗ ಮತ್ತೆ ಮೊಹರಾಂ ಹಬ್ಬಕ್ಕೂ ರಜೆ ಸಿಗಲಿದೆ. ಈ ಬಾರಿ ಮೊಹರಾಂ ಎರಡು ದಿನ ಬಂದಿದ್ದು, ಯಾವ ದಿನ ರಾಜ್ಯದಲ್ಲಿ ರಜೆ ಎಂಬ ಗೊಂದಲಕ್ಕೆ ಉತ್ತರ ಇಲ್ಲಿದೆ.

ಇಸ್ಲಾಮಿಕ್ ಹೊಸ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ಅನ್ನು ದೇಶದಲ್ಲಿ ಜುಲೈ 6 ಅಥವಾ 7 ರಂದು ಆಚರಣೆ ಮಾಡಲಾಗುತ್ತದೆ. ಮೊಹರಂ ಚಂದ್ರನ ದರ್ಶನದ ಮೇಲೆ ನಿರ್ಧಾರವಾಗಲಿದೆ. ಪ್ರಸ್ತುತ ಜುಲೈ 6ರಂದು ಮೊಹರಂ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಜೂನ್ 6ರಂದು ಚಂದ್ರ ದರ್ಶನ ಆಗದಿದ್ದರೆ, ರಜಾ ದಿನವು ಜುಲೈ 7ಕ್ಕೆ ಮುಂದೂಡಿಕೆ ಆಗುವ ಸಾಧ್ಯತೆಯಿದೆ. ಮೊಹರಂ ಆಚರಣೆ ದಿನ ದೇಶಾದ್ಯಂತ ಶಾಲಾ-ಕಾಲೇಜು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ.
ಮೊಹರಂ ಹಬ್ಬ ಹಿನ್ನೆಲೆ ದೇಶಾದ್ಯಂತ ಶಾಲಾ ಕಾಲೇಜು-ಸರ್ಕಾರಿ ಕಚೇರಿ, ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ದರಿಂದ ಈ ಬಾರಿ ಮೊಹರಂ ಜುಲೈ 6ರ ಬದಲು 7ರಂದು ನಡೆದರೆ ಅಂದು ಸಾರ್ವಜನಿಕ ರಜೆ ಇರಲಿದೆ.
ಮೊಹರಂ ಹಬ್ಬದ ದಿನದಂದು ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ ಮುಚ್ಚಲ್ಪಡಲಿವೆ. ಇದರಲ್ಲಿ ಷೇರು, ಷೇರು ಉತ್ಪನ್ನಗಳು, SLB, ಕರೆನ್ಸಿ ಉತ್ಪನ್ನಗಳು ಮತ್ತು ಬಡ್ಡಿದರ ಉತ್ಪನ್ನಗಳ ವ್ಯಾಪಾರ ಸಹ ಸೇರಿವೆ.
ಮೊಹರಂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಇದು ಪವಿತ್ರ ತಿಂಗಳುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮೊಹರಂನ 10ನೇ ದಿನದಂದು ಬರುವ ಅಶುರಾ ದಿನವು ವಿಶೇಷ ಮಹತ್ವವನ್ನು ಹೊಂದಿದೆ.
ಹಲವು ಮುಸ್ಲಿಮರಿಗೆ ವಿಶೇಷವಾಗಿ ಶಿಯಾ ಪಂಥದವರಿಗೆ, ಅಶುರಾ ಶೋಕಾಚರಣೆಯ ದಿನ ಆಗಿದೆ. ಇದು ಕ್ರಿ.ಶ. 680ರಲ್ಲಿ ಕರ್ಬಲಾ ಕದನದಲ್ಲಿ ಕೊಲ್ಲಲ್ಪಟ್ಟ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಇಬ್ನ್ ಅಲಿ ಅವರ ಹುತಾತ್ಮತೆಯನ್ನ ಸ್ಮರಿಸಲಿದೆ.
ಇನ್ನೂ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ವೈಪರಿತ್ಯ ಕಾರಣ ರಜೆ ಘೋಷಣೆ ಮಾಡಲಾಗಿದೆ. ರಣಬಿಸಿಲು ಮುಂದುವರೆದ ಕಾರಣ ಹಲವೆಡೆ ತಿಂಗಳುಗಟ್ಟಲೇ ರಜೆಯನ್ನು ಮುಂದೂಡಿಕೆ ಮಾಡಲಾಗಿದೆ. ಇನ್ನೂ ಕೆಲವೆಡೆ ಭಾರೀ ಮಳೆ ಮುಂದುವರೆದ ಹಿನ್ನೆ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆಗಾಗ ಶಾಲೆಗಳಿಗೆ ರಜೆಗಳನ್ನು ನೀಡಲಾಗುತ್ತಿದೆ. ಈ ನಡುವೆ ಇದೀಗ ಮೊಹರಂ ರಜೆ ಕೂಡ ಸಿಗಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಸಿಹಿಯೂಟವನ್ನೇ ಬಡಿಸಿದಂತಾಗಿದೆ.












Click it and Unblock the Notifications