ರೈಲು ಪ್ರಯಾಣಿಕರಿಗಿನ್ನು ಒಂದೇ ಆ್ಯಪ್: 'RailOne' ನಲ್ಲೇ ಸಿಗಲಿದೆ ಟಿಕೆಟ್‌ನಿಂದ PNR ವರೆಗಿನ ಎಲ್ಲಾ ಮಾಹಿತಿ
ರೈಲು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ತನ್ನ ಹೊಸ 'ರೈಲ್‌ಒನ್ (RailOne)' ಸೂಪರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ರೈಲ್ವೆಗೆ ಸಂಬಂಧಿಸಿದ ಎಲ್ಲ ಪ್ರಮುಖ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಈ ಆ್ಯಪ್, ಪ್ರಯಾಣಿಕರ ಸಮಯವನ್ನು ಉಳಿಸುವುದರ ಜೊತೆಗೆ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಗುರಿಯನ್ನು ಹೊಂದಿದೆ.
ಇಲ್ಲಿಯವರೆಗೆ ರೈಲು ಟಿಕೆಟ್ ಬುಕ್ ಮಾಡಲು, ರೈಲುಗಳ ಲೈವ್ ಸ್ಥಿತಿ ಪರಿಶೀಲಿಸಲು, ಪಿಎನ್‌ಆರ್ (PNR) ಮಾಹಿತಿ ತಿಳಿದುಕೊಳ್ಳಲು, ಆಹಾರ ಆರ್ಡರ್ ಮಾಡಲು ಅಥವಾ ದೂರು ದಾಖಲಿಸಲು ಪ್ರತ್ಯೇಕ ಆ್ಯಪ್‌ಗಳನ್ನು ಬಳಸಬೇಕಾಗುತ್ತಿತ್ತು. ಆದರೆ ಇದೀಗ ರೈಲ್‌ಒನ್ ಆ್ಯಪ್ ಮೂಲಕ ಈ ಎಲ್ಲ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗಲಿವೆ.

ರೈಲ್‌ಒನ್ ಆ್ಯಪ್‌ನಲ್ಲಿ ಯಾವೆಲ್ಲ ಸೇವೆಗಳಿವೆ?
ಭಾರತೀಯ ರೈಲ್ವೆಯ ಈ ಹೊಸ ಸೂಪರ್ ಆ್ಯಪ್‌ನಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಬಹುತೇಕ ಸೇವೆಗಳನ್ನು ಒಟ್ಟುಗೂಡಿಸಲಾಗಿದೆ. ಅವುಗಳೆಂದರೆ:
ರೈಲು ಟಿಕೆಟ್ ಬುಕ್ಕಿಂಗ್
ತತ್ಕಾಲ್ (Tatkal) ಟಿಕೆಟ್ ಕಾಯ್ದಿರಿಸುವಿಕೆ: ತತ್ಕಾಲ್ (Tatkal) ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನು ಈಗ ಇನ್ನಷ್ಟು ಸರಳ ಮತ್ತು ಸುಲಭಗೊಳಿಸಲಾಗಿದೆ.
ಲೈವ್ ಟ್ರ್ಯಾಕಿಂಗ್ (Live Train Status): ನಿಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಲು 'ಲೈವ್ ರೈಲು ಸ್ಥಿತಿ' (Live Train Status) ಮತ್ತು ನಿಮ್ಮ ಸೀಟಿನ ದೃಢೀಕರಣಕ್ಕಾಗಿ 'ಪಿಎನ್‌ಆರ್ (PNR) ಸ್ಥಿತಿ'ಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ಪಿಎನ್‌ಆರ್ (PNR)ಟ್ರ್ಯಾಕಿಂಗ್: ನಿಮ್ಮ ರೈಲು ಟಿಕೆಟ್‌ನ ಸೀಟು ದೃಢೀಕರಣ (Confirmation Status) ಮತ್ತು ಪ್ರಯಾಣದ ವಿವರಗಳನ್ನು ಕ್ಷಣಾರ್ಧದಲ್ಲಿ ಪರಿಶೀಲಿಸಬಹುದು.
ರೈಲಿನಲ್ಲೇ ಆಹಾರ ಆರ್ಡರ್ ಮಾಡುವ ಸೌಲಭ್ಯ: ಸುದೀರ್ಘ ಪ್ರಯಾಣದ ವೇಳೆ ಇಷ್ಟವಾದ ಊಟವನ್ನು ನೇರವಾಗಿ ರೈಲಿನಲ್ಲೇ ಆರ್ಡರ್ ಮಾಡುವ ಸೌಲಭ್ಯವಿದೆ.
ದೂರು ಮತ್ತು ಸಮಸ್ಯೆ ದಾಖಲಿಸುವ ವ್ಯವಸ್ಥೆ: ಪ್ರಯಾಣದ ವೇಳೆ ಎದುರಾಗುವ ಯಾವುದೇ ತೊಂದರೆಗಳ ವಿರುದ್ಧ ತಕ್ಷಣವೇ ದೂರು ಮತ್ತು ಸಮಸ್ಯೆಗಳನ್ನು ದಾಖಲಿಸುವ ಅತ್ಯಾಧುನಿಕ ವ್ಯವಸ್ಥೆ ಇಲ್ಲಿದೆ.
ಸುರಕ್ಷಿತ ಡಿಜಿಟಲ್ ಪಾವತಿಗಾಗಿ ಆರ್-ವಾಲೆಟ್ (R-Wallet): ಟಿಕೆಟ್ ಹಣವನ್ನು ಕ್ಷಣಾರ್ಧದಲ್ಲಿ ಸುರಕ್ಷಿತವಾಗಿ ಪಾವತಿಸಲು 'ಆರ್-ವಾಲೆಟ್' (R-Wallet) ಡಿಜಿಟಲ್ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಒಂದೇ ಲಾಗಿನ್ ಮೂಲಕ ವಿವಿಧ ರೈಲ್ವೆ ಸೇವೆಗಳ ಬಳಕೆ: ಒಂದೇ ಬಾರಿ ಲಾಗಿನ್ ಆಗುವ ಮೂಲಕ ಟಿಕೆಟ್ ಬುಕಿಂಗ್, ಲೈವ್ ಟ್ರ್ಯಾಕಿಂಗ್ ಸೇರಿದಂತೆ ಎಲ್ಲಾ ಪ್ರಮುಖ ರೈಲ್ವೆ ಸೇವೆಗಳನ್ನು ಒಂದೇ ಸೂರಿನಡಿ ಬಳಸಬಹುದು.
ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಇನ್ನಷ್ಟು ಸುಲಭ
ರೈಲ್‌ಒನ್ ಆ್ಯಪ್‌ನ ಪ್ರಮುಖ ಆಕರ್ಷಣೆ ಎಂದರೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ. ಪ್ರಯಾಣಿಕರು ತಮ್ಮ IRCTC ಖಾತೆಯ ಮೂಲಕ ಲಾಗಿನ್ ಆಗಬಹುದು ಅಥವಾ OTP ಆಧಾರಿತ ಅತಿಥಿ (Guest) ಲಾಗಿನ್ ಬಳಸಿ ಆ್ಯಪ್‌ನ ಉಪಯೋಗಿಸಬಹುದು.
ಪ್ರಯಾಣದ ವಿವರಗಳನ್ನು ನಮೂದಿಸಿ, ತತ್ಕಾಲ್ ಟಿಕೆಟ್ ಕೋಟಾವನ್ನು ಆಯ್ಕೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ದೃಢೀಕೃತ ಟಿಕೆಟ್ ಬುಕ್ ಮಾಡುವ ಅವಕಾಶ ದೊರೆಯಲಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಆಗುತ್ತಿದ್ದ ತಾಂತ್ರಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ವೇಗದ ಸೇವೆ ನೀಡಲು ಹೊಸ ವ್ಯವಸ್ಥೆ ರೂಪಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಬಯೋಮೆಟ್ರಿಕ್ ಲಾಗಿನ್ ಮತ್ತು ಸಿಂಗಲ್ ಸೈನ್-ಆನ್ ಸೌಲಭ್ಯ
ಈ ಹೊಸ ಆ್ಯಪ್‌ನಲ್ಲಿ ಬಯೋಮೆಟ್ರಿಕ್ ಲಾಗಿನ್, ಸಿಂಗಲ್ ಸೈನ್-ಆನ್ ಮತ್ತು ಬಳಕೆದಾರ ಸ್ನೇಹಿ ವಿನ್ಯಾಸವನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಪದೇಪದೇ ಪ್ರತ್ಯೇಕ ಖಾತೆಗಳಿಗೆ ಲಾಗಿನ್ ಆಗುವ ಅಗತ್ಯವಿಲ್ಲ. ಹಿಂದಿನ ವ್ಯವಸ್ಥೆಗಳಿಗೆ ಹೋಲಿಸಿದರೆ ಈ ಆ್ಯಪ್ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಇನ್ನುಳಿದ ಆ್ಯಪ್‌ಗಳಿಗೆ ಗುಡ್‌ಬೈ
ಈವರೆಗೆ ರೈಲು ಪ್ರಯಾಣಕ್ಕೆ ಸಂಬಂಧಿಸಿದ ವಿವಿಧ ಸೇವೆಗಳಿಗಾಗಿ ಹಲವು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತಿತ್ತು. ಜೊತೆಗೆ ಕೆಲವೊಮ್ಮೆ ರೈಲು ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕೆಲಸಗಳನ್ನು ಮುಗಿಸಬೇಕಾಗುತ್ತಿತ್ತು. ಆದರೆ ರೈಲ್‌ಒನ್ ಆ್ಯಪ್‌ನೊಂದಿಗೆ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ದೂರು ದಾಖಲಿಸುವವರೆಗೆ ಎಲ್ಲವೂ ಮೊಬೈಲ್‌ನಲ್ಲೇ ಸಾಧ್ಯವಾಗಲಿದೆ.
ಪ್ರಯಾಣಿಕರಿಗೆ ಹೊಸ ಅನುಭವ
ಭಾರತೀಯ ರೈಲ್ವೆ ಇಲಾಖೆ ಈ ಮಹತ್ವಾಕಾಂಕ್ಷೆಯ ಹೆಜ್ಜೆ, ದೇಶದ ಕೋಟ್ಯಂತರ ರೈಲು ಪ್ರಯಾಣಿಕರಿಗೆ ಹೆಚ್ಚು ಸ್ಮಾರ್ಟ್, ವೇಗದ ಮತ್ತು ತೊಂದರೆ ರಹಿತ ಪ್ರಯಾಣ ಅನುಭವ ನೀಡುವ ನಿರೀಕ್ಷೆಯಿದೆ. ಒಂದೇ ಆ್ಯಪ್‌ನಲ್ಲಿ ಎಲ್ಲಾ ಅಗತ್ಯ ಸೇವೆಗಳು ಲಭ್ಯವಾಗುವುದರಿಂದ ಪ್ರಯಾಣಿಕರ ಸಮಯ ಉಳಿಯಲಿದ್ದು, ರೈಲ್ವೆ ಸೇವೆಗಳ ಬಳಕೆಯೂ ಇನ್ನಷ್ಟು ಸುಲಭವಾಗಲಿದೆ.
ಒಟ್ಟಾರೆ, ರೈಲ್‌ಒನ್ ಆ್ಯಪ್ ಭಾರತೀಯ ರೈಲ್ವೆಯ ಡಿಜಿಟಲ್ ಪರಿವರ್ತನೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಭವಿಷ್ಯದ ರೈಲು ಪ್ರಯಾಣವನ್ನು ಇನ್ನಷ್ಟು ಅನುಕೂಲಕರವಾಗಿಸಲು ನೆರವಾಗಲಿದೆ.














Click it and Unblock the Notifications