School-Colleges Holiday: ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
School-Colleges Holiday: ಈ ಬಾರಿ 2025ರ ಜನವರಿ ಆರಂಭದಿಂದಲೂ ಇಲ್ಲಿವರೆಗೂ ದೇಶದ ಕೆಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಹಾಗೆಯೇ ಇಂದು (ಜನವರಿ 19) ಈ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎನ್ನುವ ಮಾಹಿತಿ ಇದೆ. ಹಾಗಾದರೆ ಎಲ್ಲಿ ಹಾಗೂ ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಈಗಾಗಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲವು ಕಾರಣಾಂತರಗಳಿಂದ ಅಂದರೆ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ನಿಮಿತ್ತ ಶಾಲಾ-ಕಾಲೇಜುಗಳು ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದೀಗ ಮತ್ತೆ ಈ ಭಾಗದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಯ ಹಬ್ಬದೂಟ ಸಿಕ್ಕಂತಾಗಿದೆ.

ಇಂದು (ಫೆಬ್ರವರಿ 19) ಛತ್ರಪತಿ ಶಿವಾಜಿ ಜಯಂತಿ ಹಿನ್ನೆಲೆ ದೇಶದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ. ಇನ್ನೂ ಕೆಲವೆಡೆ ಈ ಜಯಂತಿ ಆಚರಣೆ ಮಾಡಿ ಎಂದಿನಂತೆ ತರಗತಿಗಳನ್ನು ಮುಂದುವರೆಸಲಾಗುತ್ತದೆ. ಹಾಗಾದರೆ ಎಲ್ಲೆಲ್ಲಿ ರಜೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಛತ್ರಪತಿ ಶಿವಾಜಿ ಜಯಂತಿ ಹಿನ್ನೆಲೆ ಇಂದು ಮಹಾರಾಷ್ಟ್ರದಲ್ಲಿ ಸರ್ಕಾರವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೆ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿಯೂ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಂಬರುವ ರಜಾ ದಿನಗಳ ಪಟ್ಟಿ ಇಲ್ಲಿದೆ
* ಫೆಬ್ರವರಿ 26, 2025: ಮಹಾ ಶಿವರಾತ್ರಿ
* ಫೆಬ್ರವರಿ 27, 2025: ಎಂಎಲ್‌ಸಿ ಚುನಾವಣೆ
* ಮಾರ್ಚ್ 14, 2025: ಹೋಳಿ
* ಮಾರ್ಚ್ 30, 2025: ಯುಗಾದಿ
* ಮಾರ್ಚ್ 31, 2025: ರಂಜಾನ್
* ಏಪ್ರಿಲ್ 1, 2025: ರಂಜಾನ್
* ಏಪ್ರಿಲ್ 5, ಬಾಬು ಜಗನ್‌ಜೀವನ್ ರಾಮ್ ಜಯಂತಿ
* ಏಪ್ರಿಲ್ 6, 2025: ಶ್ರೀ ರಾಮನಮಿ ಜಯಂತಿ
* ಏಪ್ರಿಲ್ 18, 2025: ಗುಡ್ ಫ್ರೈಡೇ
* ಜೂನ್ 7, 2025: ಬಕ್ರೀದ್
* ಜುಲೈ 6, 2025: ಮೊಹರಂ
* ಆಗಸ್ಟ್ 15, 2025: ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 16, 2025: ಕೃಷ್ಣ ಜನ್ಮಾಷ್ಟಮಿ
* ಆಗಸ್ಟ್ 27, 2025: ಗಣೇಶ ಚತುರ್ಥಿ
* ಸೆಪ್ಟೆಂಬರ್ 5, 2025: ಮಿಲಾದ್-ಉನ್-ನಬಿ
* ಅಕ್ಟೋಬರ್ 2, 2025: ಗಾಧಿ ಜಯಂತಿ
* ಅಕ್ಟೋಬರ್ 3, 2025: ವಿಜಯದಶಮಿ
* ಅಕ್ಟೋಬರ್ 20, 2025: ದೀಪಾವಳಿ
* ನವೆಂಬರ್ 2, 2025: ಕಾರ್ತಿಕ ಪೂರ್ಣಿಮಾ/ಗುರುನಾನಕ್ ಜಯಂತಿ
* ಡಿಸೆಂಬರ್ 25, 2025: ಕ್ರಿಸ್‌ಮಸ್
ಫೆಬ್ರವರಿ 26ರಂದು ರಜೆ: ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಮೂರು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ಈ ದಿನವನ್ನು ಸಾರ್ವಜನಿಕ ರಜೆ ಎಂದು ಘೋಷಿಸಿವೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿನ ಶಾಲಾ-ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಶಿವರಾತ್ರಿಯ ಒಂದು ದಿನದ ರಜೆಯನ್ನು ಘೋಷಿಸಿವೆ.
ಫೆಬ್ರವರಿ 15 ರಂದು ಬಂಜಾರರು ಪೂಜಿಸುವ ಸಂತ ಸೇವಾಲಾಲ್ ಮಹಾರಾಜರ ಜಯಂತಿಯ ಹಿನ್ನೆಲೆ ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಬಂಜಾರ ಜನರು ಸೇರುತ್ತಾರೆ. ಹಿಂದಿನಿಂದಲೂ ಸಹ ಬಂಜಾರ ಸಮುದಾಯದವರು ಈ ದಿನವನ್ನು ಸರ್ಕಾರಿ ರಜಾ ದಿನವೆಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದ್ದರು. ಇನ್ನು ಕಳೆದ ವರ್ಷ ಸರ್ಕಾರವು ಸೇವಾಲಾಲ್ ಜಯಂತಿಯನ್ನು ಐಚ್ಛಿಕ ರಜಾದಿನ ಎಂದು ಘೋಷಣೆ ಮಾಡಿತು. ಈಗ ಸಹ ಅದೇ ರಜೆ ನೀಡುವಂತೆ ಇಲ್ಲಿನ ಸಮುದಾಯದವರು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications