School Holiday: ಶಾಲೆಗಳಿಗೆ 51 ದಿನ ರಜೆ ಘೋಷಣೆ

School Holiday: ಈಗಾಗಲೇ ಕರ್ನಾಟಕದಲ್ಲಿ ಶಾಲೆಗಳ ಪರೀಕ್ಷೆಗಳೆಲ್ಲ ಮುಕ್ತಾಯ ಆಗಿದ್ದು, ಬೇಸಿಗೆ ರಜೆಯನ್ನು ಕೂಡ ಘೋಷಣೆ ಮಾಡಲಾಗಿದೆ. ಇದೀಗ ನವದೆಹಲಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಷ್ಟು ದಿನ ಹಾಗೂ ಯಾವೆಲ್ಲಾ ತರಗತಿಗಳಿಗೆ ಅನ್ವಯ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ದೆಹಲಿಯ ಶಿಕ್ಷಣ ಇಲಾಖೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಿದೆ. ಈ ಆದೇಶದ ಪ್ರಕಾರ, ದೆಹಲಿಯಲ್ಲಿ 1-8ನೇ ತರಗತಿ ಸರ್ಕಾರಿ ಶಾಲೆಗಳಿಗೆ ಮೇ 11ರಿಂದ ಜೂನ್ 30, 2025ರ ವರೆಗೆ 51 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 9, 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಿದೆ.

Holiday announcement To All Government Schools for 51 Days

ಮೇ 13ರಿಂದ ಮೇ 31ರ ವರೆಗೆ ಬೋರ್ಡ್ ತರಗತಿಗಳು ಮತ್ತು ಪ್ರಮುಖ ಶ್ರೇಣಿಗಳ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ ಎಂದು ಇಲ್ಲಿನ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ರಣಭೀಕರ ಬಿಸಿಲು ಹಿನ್ನೆಲೆ ವಿದ್ಯಾರ್ಥಿಗಳಿಗೆ ಬೆಳಗ್ಗೆ 7:30ರಿಂದ 10:30ರ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಈ ತರಗತಿಗಳಲ್ಲಿ ವಿಜ್ಞಾನ ಮತ್ತು ಗಣಿತವನ್ನು ಕಡ್ಡಾಯ ವಿಷಯಗಳಾಗಿ ಕಲಿಸಲಾಗುತ್ತದೆ. ಆದರೆ, ಮೂರನೇ ವಿಷಯವನ್ನು ಶಾಲೆಯ ಪ್ರಾಂಶುಪಾಲರು ನಿರ್ಧರಿಸುತ್ತಾರೆ.

ಎರಡು ಪಾಳಿಯಲ್ಲಿ ತರಗತಿಗಳು ನಡೆಯುವ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ವಿಭಾಗಗಳಲ್ಲಿ ತರಗತಿಗಳನ್ನು ನಡೆಸಲಾಗುವುದು. ಇದರಿಂದ ತರಗತಿಗಳು ಉತ್ತಮ ರೀತಿಯಲ್ಲಿ ನಡೆಯಲು ಅನುಕೂಲ ಆದಂತಾಗಲಿದೆ.

ತಾಪಾಮಾನ ಹೆಚ್ಚಿದ್ದರೆ, 1-8ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೆ, ಅಂತಹ ಪರಿಸ್ಥಿತಿಯಲ್ಲಿ, ಆನ್‌ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಸೂಚನೆಗಳು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸುತ್ತವೆ.

ಇನ್ನು ಭಾರತ-ಪಾಕಿಸ್ತಾನ ಯುದ್ಧ ಬಿಕ್ಕಟ್ಟು ಹಿನ್ನೆಲೆ ಅನೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ 2-3 ದಿನಗಳವರೆಗೆ ರಜೆ ಘೋಷಣೆ ಮಾಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬೇಸಿಗೆ ರಜೆಗಳು ಮೇ 16, 2025ರಿಂದ ಪ್ರಾರಂಭ ಆಗಬೇಕಿತ್ತು. ಆದರೆ ಈಗ ಮಮತಾ ಸರ್ಕಾರ ಬೇಸಿಗೆ ರಜೆಗಳ ದಿನಾಂಕವನ್ನು ಬದಲಾವಣೆ ಮಾಡಿದ್ದು, ಮೇ 9, 2025ರಿಂದ ಪ್ರಾರಂಭ ಆಗಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗಾಗಲೇ ಚಳಿಗಾಲದ ಸಂದರ್ಭದಲ್ಲೂ ಸಹ ಕೆಲವು ಉತ್ತರ ಭಾರತದ ರಾಜ್ಯದಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ತಿಂಗಳುಗಟ್ಟಲೇ ರಜೆಗಳನ್ನು ಘೋಷಣೆ ಮಾಡಲಾಗಿತ್ತು. ಹಾಗೆಯೇ ಇದೀಗ ರಣಬಿಸಿಲು ಮುಂದುವರೆದ ಕಾರಣ 1-8ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿ ದೆಹಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಒಟ್ಟಿನಲ್ಲಿ ಶಾಲೆಗಳಿಗೆ ರಜೆ ಯಾವಾಗ ಘೋಷಣೆ ಮಾಡುತ್ತಾರೆ ಎಂದು ಕಾಯುತ್ತಿದ್ದ ಮಕ್ಕಳ ಪೋಷಕರಿಗೆ ಇದು ಸಂತಸದ ಸುದ್ದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+