ಶಾಲೆಗಳಿಗೆ ರಜೆ ಘೋಷಣೆ: ಫೆಬ್ರವರಿ 5ರ ವರೆಗೂ ಆನ್‌ಲೈನ್‌ ಕ್ಲಾಸ್‌

ಸಾಮಾನ್ಯವಾಗಿ ಹಬ್ಬಗಳು, ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪದಿಂದ ತೊಂದರೆ ಆಗುವಂತಹ ಮುನ್ಸೂಚನೆ ಸಮಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದರೆ, ಈ ವೇಳೆ ರಜೆ ಕೊಡುವ ಸಮಯವಂತೂ ಅಲ್ಲ. ಆದರೂ ಈ ಭಾಗದಲ್ಲಿ ಶಿಕ್ಷಣ ಇಲಾಖೆಯು ಫೆಬ್ರವರಿ 5ರ ವರೆಗೂ ಶಾಲೆಗಳನ್ನು ಬಂದ್‌ ಮಾಡಿ ಆನ್‌ಲೈನ್‌ ಕ್ಲಾಸ್‌ ನಡೆಸಲು ಮುಂದಾಗಿದೆ. ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಆದೇಶ 1ರಿಂದ 12ನೇ ತರಗತಿಯವರೆಗೆ ಅನ್ವಯಿಸುತ್ತವೆ. ಈ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಮಾತ್ರ ನಡೆಸಬೇಕೆಂದು ಶಿಕ್ಷಣ ಇಲಾಖೆ ಹೇಳಿದೆ. ಮೌನಿ ಅಮಾವಾಸ್ಯೆಯಂದು ನಡೆಯುವ ಮಹಾ ಕುಂಭಮೇಳಕ್ಕೆ 1.74 ಕೋಟಿ ಜನರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಕಾಶಿಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಫೆಬ್ರವರಿ 5ರ ವರೆಗೆ ಆನ್‌ಲೈನ್ ತರಗತಿಗಳು ಮಾತ್ರ ನಡೆಯಲಿವೆ ಎಂದು ತಿಳಿದುಬಂದಿದೆ.

Holiday Announced for Schools Online Classes Until February 5

ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜನವರಿ 27ರಿಂದ ಫೆಬ್ರವರಿ 5, 2025ರ ವರೆಗೆ, 1ರಿಂದ 12ನೇ ತರಗತಿಯವರೆಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಆದೇಶಿಸಿದ್ದರು. ಯುಪಿ ಬೋರ್ಡ್, ಸಿಬಿಎಸ್ಇ ಮತ್ತು ಐಸಿಎಸ್ಇಯ ಎಲ್ಲಾ ಶಾಲೆಗಳಿಗೆ ಈ ಆದೇಶ ಅನ್ವಯಿಸುತ್ತದೆ. ವಾರಣಾಸಿ ಮಹಾ ಕುಂಭಮೇಳಕ್ಕೆ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ. ವಿಐಪಿ ಪ್ರೋಟೋಕಾಲ್ ಗೋಡೌಲ್ಯ ಮತ್ತು ಮಡಗಿನ್ ಮಹಾಕುಂಭಮೇಳದ ನಡುವೆ ಹೆಚ್ಚಿನ ಸಂಚಾರ ದಟ್ಟಣೆ ಇರುವ ಹಿನ್ನೆಲೆ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಪೊಲೀಸ್ ಆಯುಕ್ತರು, 7 ಎಡಿಸಿಪಿಗಳು, 10 ಎಸಿಪಿಗಳು, 8 ಐಪಿಎಸ್ ಅಧಿಕಾರಿಗಳು ಮತ್ತು 500 ಕೇಂದ್ರ ಭದ್ರತಾ ಪಡೆಗಳ ಸಿಬ್ಬಂದಿ ಈ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದಾರೆ.

ಈ ನಡುವೆ ನಿನ್ನೆ ಬೆಳಿಗ್ಗೆ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ದಂಭವಿಸಿದ್ದು, 30 ಜನ ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಅಲ್ಲಿನ ಪರಿಸ್ಥಿತಿ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಭಾರೀ ಚಳಿ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತರ ಭಾರತದ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನು ಇದೀಗ ದಿನದಿಂದ ದಿನಕ್ಕೆ ಚಳಿ ಪ್ರಮಾಣ ಕಡಿಮೆಯಾಗುತ್ತಿದ್ದು, ಶಾಲೆಗಳು ಕೂಡ ಓಪನ್‌ ಆಗಿವೆ. ತರಗತಿಗಳು ಎಂದಿನಂತೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಸಹ ಹಾಜಲಾರುತ್ತಿದ್ದಾರೆ. ಇನ್ನು ಇದೀಗ ಮಹಾ ಕುಂಭಮೇಳಕ್ಕೆ ಭಾರೀ ಜನಸಂಖ್ಯೆ ಸೇರಿರುವ ಹಿನ್ನೆಲೆ ಉತ್ತರ ಭಾರತದ ಹಲವೆಡೆ ಶಾಲೆಗಳಿಗೆ ರಜೆ ನೀಡಿ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ಏರ್ಪಾಡು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+