'ಹಿಂದಿ ಹೇರಿಕೆ' ಕದನ, ಕೇಂದ್ರದ ವಿರುದ್ಧ ಎಂಕೆ ಸ್ಟಾಲಿನ್ ವಾಗ್ದಾಳಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಲು ಒಕ್ಕೂಟಗಳು ಮತ್ತು ಡೈರಿ ಉತ್ಪಾದಕರನ್ನು ಉತ್ಪನ್ನಗಳಿಗೆ ಮರುಹೆಸರಿಸಲು ನಿರ್ದೇಶನ ನೀಡಿದ ನಂತರ ತಮಿಳುನಾಡಿನಲ್ಲಿ ಸಿಎಂ ಎಂಕೆ ಸ್ಟಾಲಿನ್ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.
FSSAI ನಿರ್ದೇಶನದ ಪ್ರಕಾರ, 'ಮೊಸರು' (ಇಂಗ್ಲಿಷ್) ಅಥವಾ 'ತಯ್ಯಿರ್' (ತಮಿಳು) ಅನ್ನು ಈಗ 'ದಹಿ' (ಹಿಂದಿ) ಎಂದು ಮರುನಾಮಕರಣ ಮಾಡಲಾಗುತ್ತದೆ. ಈ ಬದಲಾವಣೆಯು ಚೀಸ್ ಮತ್ತು ಬೆಣ್ಣೆಯಂತಹ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಹೀಗಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಷ್ಟ್ರೀಯ ಆಹಾರ ಸುರಕ್ಷತಾ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಹಿಂದಿ ಹೇರಿಕೆಯ ನಾಚಿಕೆಗೇಡಿನ ಒತ್ತಾಯದ' ಬಗ್ಗೆ ಮುಖ್ಯಮಂತ್ರಿಗಳು ಕೆರಳಿದ್ದಾರೆ. ಬುಧವಾರ ಸಂಜೆ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಸ್ಟಾಲಿನ್ ಹೀಗೆ ಬರೆದಿದ್ದಾರೆ: "(ನಮ್ಮಲ್ಲೂ ಹಿಂದಿ ಹೇರಿಕೆ ಇದೆ) ... ಮೊಸರು ಪ್ಯಾಕೆಟ್‌ಗೂ ಹಿಂದಿಯಲ್ಲಿ ಮರುನಾಮಕರಣ ಮಾಡಲು ನಮಗೆ ನಿರ್ದೇಶಿಸುವ ಮಟ್ಟಕ್ಕೆ ಬಂದಿದ್ದಾರೆ. ನಮ್ಮ ಸ್ವಂತ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುವುದು ಎಷ್ಟು ಸರಿ" ಎಂದು ಸ್ಟಾಲಿನ್ ಪ್ರಶ್ನೆ ಮಾಡಿದ್ದಾರೆ.
ಹಿಂದೆ ಹೇರಿಕೆಗೆ ವಿರೋಧ
ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವುದರಿಂದ ಕಾರಣಕರ್ತರನ್ನು ದಕ್ಷಿಣದಿಂದ ಶಾಶ್ವತವಾಗಿ ಗಡಿಪಾರು ಮಾಡಲಾಗುವುದು ಎಂದು ಸ್ಟಾಲಿನ್ ಅವರು ಹೇಳಿದರು. ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಅವರು, ತಮಿಳುನಾಡು ಮತ್ತು ಕರ್ನಾಟಕ ಹಾಲು ಒಕ್ಕೂಟಗಳು ಮೊಸರಿಗೆ 'ದಹಿ' ಎಂದು ಲೇಬಲ್ ಮಾಡಬೇಕೆಂದಿದೆ. ಆದರೆ ಇನ್ನು ಇದನ್ನು ನಾವು ಒಪ್ಪುವುದಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಜೊತೆಗೆ ತಮಿಳುನಾಡಿನಲ್ಲಿರುವ ಆವಿನ್ ಹಾಲು ಉತ್ಪಾದಕರ ಸಹಕಾರ ಸಂಘವು ತನ್ನ ಪ್ಯಾಕೆಟ್‌ಗಳಲ್ಲಿ 'ದಹಿ' ಪದವನ್ನು ಬಳಸುವುದಿಲ್ಲ ಮತ್ತು 'ತಯ್ಯಿರ್' ಪದವನ್ನು ಮಾತ್ರ ಬಳಸುವುದಾಗಿ ದೃಢವಾಗಿ ಹೇಳಿದೆ.

ಹಿಂದೆ ಹೇರಿಕೆಗೆ ಸ್ಟಾಲಿನ್ ವಾಗ್ದಾಳಿ
ಎಫ್‌ಎಸ್‌ಎಸ್‌ಎಐ ಕ್ರಮವನ್ನು ಎರಡೂ ರಾಜ್ಯಗಳಲ್ಲಿಯೂ ಸ್ವೀಕರಿಸಲ್ಪಟ್ಟಿಲ್ಲ. 1960ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ಬೃಹತ್ ಹಿಂದಿ ವಿರೋಧಿ ಆಂದೋಲನದ ನಂತರ ಹಿಂದಿ ಹೇರಿಕೆಯು ತೀವ್ರ ಭಾವನಾತ್ಮಕ ವಿಷಯವಾಗಿದೆ.
"ರಾಜ್ಯ-ಸಹಕಾರಿ ಸಂಘಗಳು ಉತ್ಪಾದಿಸುವ ಮೊಸರು ಸ್ಯಾಚೆಟ್‌ಗಳಲ್ಲಿ 'ದಹಿ' ಬಳಕೆಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆಯು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯೊಂದಿಗೆ ಹೊಂದಿಕೆಯಾಗುವುದಿಲ್ಲ. ನಾವು ತಕ್ಷಣದಿಂದ ಈ ಸೂಚನೆಯನ್ನು ಹಿಂಪಡೆಯಲು ಬಯಸುತ್ತೇವೆ'' ಎಂದು ಕೇಸರಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಕುಮಾರಸ್ವಾಮಿ ಕಿಡಿ
ಹಿಂದಿಹೇರಿಕೆ ವಿರುದ್ಧ ರಾಜ್ಯದಲ್ಲಿ ನಡೆದ ಹೋರಾಟದ ಬಗ್ಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಧ್ವನಿ ಎತ್ತಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ವಿಚಾರದ ಬಗ್ಗೆ ಮಾತನಾಡಲಿಲ್ಲ ಯಾಕೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

ಬಸವರಾಜ ಬೊಮ್ಮಾಯಿ ಅವರೇ ಈ ಸುದ್ದಿ ನಿಮಗಿನ್ನೂ ತಲುಪಿಲ್ಲವೇ ಅಥವಾ ಜಾಣಕುರುಡೆ? ನಾಡಿನ ಹೆಮ್ಮೆಯ ನಂದಿನಿಯನ್ನು ಗುಜರಾತಿನ ದೊರೆಗಳ ಪಾದತಲದಲ್ಲಿ ಇಡುವ ನಿಮ್ಮ ಪ್ರಯತ್ನ ನಡೆಯಲು ಬಿಡುವುದಿಲ್ಲ. ಎಚ್ಚರಿಕೆ!' ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಹಲವಾರು ಪ್ರಶ್ನೆಗಳನ್ನು ಕೇಳಿದೆ.
ರಾಜ್ಯದ ಹೆಮ್ಮೆಯ ನಂದಿನಿಯಲ್ಲಿ ಹಿಂದಿ ಪದ ಏಕೆ ಮುದ್ರಿಸಬೇಕು? ಬಿಜೆಪಿ ಸರ್ಕಾರಕ್ಕೆ 25 ಸಂಸದರು ಇದ್ದರೂ ಕೇಂದ್ರ ಸರ್ಕಾರದ ಈ ಸರ್ವಾಧಿಕಾರಿ ಆದೇಶದ ವಿರುದ್ಧ ಯಾಕೆ ತುಟಿ ಬಿಚ್ಚುತ್ತಿಲ್ಲ? ಸ್ವಾಭಿಮಾನ ಉಳಿಸಿಕೊಳ್ಳಿ, ದೆಹಲಿ ದೊರೆಗಳ ಗುಲಾಮರಾಗುವುದು ಬಿಡಿ. ನಾಡು-ನುಡಿಯ ವಿಚಾರ ಬಂದಾಗ ನಿಮ್ಮ ನಾಲಿಗೆಗೆ ಲಗಾಮು ಯಾಕೆ? ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
'ಕಾಮೆಡಿ ಕಿಂಗ್ ನಳಿನ್ ಕುಮಾರ್ ಕಟಿಲ್ ಅವರೇ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಅಧ್ಯಕ್ಷ ಅನ್ನಮಲೈ ಕೆ ಅವರು ಹಿಂದಿಹೇರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರಿಗೆ ಇರುವ ಸ್ವಾಭಿಮಾನವನ್ನು ನೋಡಿಯಾದರೂ ಕಲಿಯಿರಿ. ಚುನಾವಣೆ ಕಾಲದಲ್ಲೆ ಕನ್ನಡದ ಪರವಾಗಿ ನಿಲ್ಲದ ನೀವು, ಉಳಿದ ಸಮಯದಲ್ಲಿ ಎಷ್ಟು ನಿಲ್ಲಬಲ್ಲಿರಿ! ನಂದಿನಿ ನಮ್ಮದು. ಕೆಎಂಎಫ್ ಕನ್ನಡಿಗರದ್ದು' ಎಂದು ವಾಗ್ದಾಳಿ ಮಾಡಿದರು.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್












Click it and Unblock the Notifications