Get Updates
Get notified of breaking news, exclusive insights, and must-see stories!

'ಹಿಂದಿ-ಚೀನೀ ಭಾಯಿ ಭಾಯಿ': ಭಾರತ, ಚೀನಾಕ್ಕೆ ದಲೈಲಾಮ ಕಿವಿಮಾತು

ಭಾರತ-ಚೀನಾ ದೇಶಗಳು ಪರಸ್ಪರ ಹಿಂದಿ-ಚೀನಿ ಭಾಯಿ ಭಾಯಿ ಎಂಬ ರೀತಿಯಲ್ಲಿ ಇರಬೇಕು. ಎರಡೂ ದೇಶಗಳಿಗೆ ಕಿವಿಮಾತು ಹೇಳಿದ ಟಿಬೆಟ್ ನ ಧರ್ಮಗುರು ದಲೈಲಾಮ.

ನವದೆಹಲಿ, ಆಗಸ್ಟ್ 9: ಭಾರತ ಹಾಗೂ ಚೀನಾ ನಡುವೆ ಎದ್ದಿರುವ ಗಡಿ ವಿವಾದದ ಹಿನ್ನೆಲೆಯಲ್ಲಿ ಎರಡೂ ದೇಶಗಳಿಗೆ ಟಿಬೆಟ್ ನ ಬೌದ್ಧಗುರು ಹಾಗೂ ಭಾರತ ಸರ್ಕಾರದ ಬೆಂಬಲ ಹೊಂದಿರುವ ದಲೈಲಾಮಾ ಅವರು ಕಿವಿಮಾತು ಹೇಳಿದ್ದಾರೆ.

ಎರಡೂ ದೇಶಗಳು ಭಾತೃತ್ವದಿಂದ ಇರಬೇಕೆಂದು ಸಲಹೆ ನೀಡಿರುವ ಅವರು, 'ಹಿಂದಿ- ಚೀನಿ ಭಾಯಿ ಭಾಯಿ' ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ನಡುವಿನ ಸಮಸ್ಯೆಗಳಿಗೆ ಪರಿಹಾಕ ಕಂಡುಕೊಳ್ಳಲು ಇದೊಂದೇ ದಾರಿ ಎಂದೂ ಅದು ಹೇಳಿದೆ.

'Hindi-Chini- Bhai Bhai' only way: Dalai Lama on Indo-China crisis

ಭಾರತ ಹಾಗೂ ಚೀನಾ ರಾಷ್ಟ್ರಗಳು ಅಕ್ಕಪಕ್ಕದ ದೇಶಗಳಾಗಿರುವುದರಿಂದ ಎರಡೂ ರಾಷ್ಟ್ರಗಳು ಸಹಬಾಳ್ವೆಗೆ ಒತ್ತು ಕೊಡಬೇಕಿದೆ. ಹಾಗಾಗಿ, 'ಹಿಂದಿ-ಚೀನೀ ಭಾಯಿ ಭಾಯಿ' ಎಂಬ ವಾಕ್ಯವನ್ನು ಇಬ್ಬರೂ ಪಾಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ಚೀನಾದಲ್ಲಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ''ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಕೂಲಕರ ವಾತಾವರಣವಿದೆ. ಹಾಗಾಗಿ, ನಾನು ಅಲ್ಲಿ (ಭಾರತ) ಹೆಚ್ಚು ನನ್ನ ಭಾವನೆಗಳನ್ನು ವ್ಯಕ್ತಪಡಿಸಬಲ್ಲೆ. ಇಂಥ ಸ್ವಾತಂತ್ರ್ಯ ಇಲ್ಲದ ದೇಶಗಳನ್ನು ನಾನು ಇಷ್ಟಪಡುವುದಿಲ್ಲ'' ಎಂದಿದ್ದಾರೆ.

ಆದರೆ, ದಲೈಲಾಮಾ ಅವರ ಈ ಕಿವಿಮಾತನ್ನು ಚೀನಾ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕುವುದು ನಿರೀಕ್ಷಿತ ಎಂದೆನಿಸಿದೆ. ಇದೇ ವರ್ಷದ ಆರಂಭದಲ್ಲಿ ದಲೈಲಾಮಾ ಅವರು ಅರುಣಾಚಲಕ್ಕೆ ಭೇಟಿ ನೀಡಿದ್ದರು. ಆದರೆ, ಅವರ ಆ ಭೇಟಿಯನ್ನು ತಡೆಯಬೇಕೆಂದು ಚೀನಾ ಸರ್ಕಾರ, ಭಾರತ ಸರ್ಕಾರವನ್ನು ಆಗ್ರಹಿಸಿತ್ತು.

ಆದರೆ, ಚೀನಾದ ಆಗ್ರಹಕ್ಕೆ ಭಾರತ ಸೊಪ್ಪು ಹಾಕಿರಲಿಲ್ಲ. ಇದು ಚೀನಾವು ಭಾರತದ ಮೇಲೆ ಮುನಿಸಿಕೊಳ್ಳಲು ಮತ್ತೊಂದು ಕಾರಣ. ಹಾಗಾಗಿ, ಚೀನಾದ ಶತ್ರವಾದ ದಲೈಲಾಮಾ ಅವರ ಹಿತನುಡಿಗಳು ಚೀನಾಕ್ಕೆ ಬಿರುನುಡಿಗಳಂತೆ ಕೇಳಿಸಿದರೆ ಅಚ್ಚರಿಯೇನಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+