ನ್ಯೂಸ್ ನೇಷನ್ ಸಮೀಕ್ಷೆ: ಹಿ.ಪ್ರದೇಶ, ಗುಜರಾತ್ ನಲ್ಲಿ ಕೇಸರಿ ಹಿಡಿತ
ಪ್ರತಿಷ್ಠೆ ಹಾಗೂ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತದೆ? ಈ ಸಮೀಕ್ಷೆ ನ್ಯೂಸ್ ನೇಷನ್ ನಿಂದ ಹೊರಬಂದಿರುವುದು. ಆ ಪ್ರಕಾರ ಏನು ಹೇಳುತ್ತದೆ ಎಂಬ ಸಂಖ್ಯೆಯನ್ನು ಇಲ್ಲಿ ಕೊಡಲಾಗಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (ಚುನಾವಣೋತ್ತರ ಸಮೀಕ್ಷೆ)

ಒಟ್ಟು ಸ್ಥಾನಗಳು 68
ಸರಕಾರ ರಚಿಸಲು ಅಗತ್ಯ ಸಂಖ್ಯೆ 35
ಬಿಜೆಪಿ 43- 47
ಕಾಂಗ್ರೆಸ್ 19-23
ಇತರೆ 1-3
ಗುಜರಾತ್ ವಿಧಾನಸಭೆ ಚುನಾವಣೆ (ಚುನಾವಣೋತ್ತರ ಸಮೀಕ್ಷೆ)
ಒಟ್ಟು ಸ್ಥಾನಗಳು 182
ಸರಕಾರ ರಚಿಸಲು ಅಗತ್ಯ ಸಂಖ್ಯೆ 92
ಬಿಜೆಪಿ 124-128
ಕಾಂಗ್ರೆಸ್ 52-56
ಇತರೆ 1-3

ಎರಡೂ ರಾಜ್ಯಗಳಲ್ಲಿ ಕೇಸರಿ ಪಕ್ಷ ಪ್ರಾಬಲ್ಯ ಮೆರೆಯುತ್ತದೆ ಎಂಬುದು ನ್ಯೂಸ್ ನೇಷನ್ ನ ಚುನಾವಣೋತ್ತರ ಸಮೀಕ್ಷೆಗಳು ಸಾರುತ್ತಿದೆ. ಒಂದು ವೇಳೆ ಹೀಗಾದಲ್ಲಿ ಕಾಂಗ್ರೆಸ್ ತನ್ನ ಅಧಿಕಾರದಲ್ಲಿರುವ ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ. ಮತ್ತು ಗುಜರಾತ್ ನಲ್ಲಿ ನಡೆಸಿದ ಎಲ್ಲ ಪ್ರಯತ್ನವೂ ವಿಫಲವಾದಂತಾಗುತ್ತದೆ.
ಜಿಎಸ್ ಟಿ ಜಾರಿ, ಅಪನಗದೀಕರಣ, ಗುಜರಾತ್ ನಲ್ಲಿನ ಆಡಳಿತ ವಿರೋಧಿ ಅಲೆ ಇಂಥ ಯಾವುದೇ ಅಂಶವೂ ಕೆಲಸ ಮಾಡಿಲ್ಲ ಅಂತಲೂ ಗೊತ್ತಾಗುತ್ತದೆ. ಇದೆಲ್ಲ ಏನೇ ಇರಲಿ ಅಂತಿಮವಾಗಿ ಚುನಾವಣೆ ಫಲಿತಾಂಶ ಹೊರಗೆ ಬರುವವರೆಗೆ ಕಾದು ನೋಡಬೇಕಾಗಿದೆ.











Click it and Unblock the Notifications