Salary Cut: ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ವೇತನ ಕಡಿತದ ಬಿಸಿ: ಈಗ ಮುಖ್ಯ ಕಾರ್ಯದರ್ಶಿ, ಡಿಜಿಪಿ ಸರದಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಶಾಸಕರ ವೇತನ ಕಡಿತದ ಬೆನ್ನಲ್ಲೇ, ಈಗ ರಾಜ್ಯದ ಹಿರಿಯ ಅಧಿಕಾರಿಗಳಿಗೂ ಆರ್ಥಿಕ ಮಿತವ್ಯಯದ ಬಿಸಿ ತಟ್ಟಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಭಾನುವಾರ ಮಹತ್ವದ ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಸಂಜಯ್ ಗುಪ್ತಾ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ತಿವಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ವೇತನದಲ್ಲಿ ಶೇಕಡಾ 30ರಷ್ಟು ತಾತ್ಕಾಲಿಕ ಕಡಿತ ಮಾಡಲಾಗಿದೆ.

ಯಾರಿಗೆ ಎಷ್ಟು ಕಡಿತ?

ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಸ್ವಂತ ವೇತನದಲ್ಲಿ ಶೇ.50ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಉಳಿದಂತೆ ಸಂಪುಟ ಸಚಿವರು ಮತ್ತು ಉಪ ಸಭಾಪತಿಗಳ ವೇತನದಲ್ಲಿ ಶೇ 30ರಷ್ಟು ಹಾಗೂ ಶಾಸಕರು ಮತ್ತು ಹಿರಿಯ ಅಧಿಕಾರಿಗಳ ವೇತನದಲ್ಲಿ ಶೇ 20ರಷ್ಟು ಕಡಿತವನ್ನು ಮುಂದಿನ ಆರು ತಿಂಗಳ ಅವಧಿಗೆ ಜಾರಿಗೆ ತರಲಾಗಿದೆ.

Himachal Pradesh

ಬಜೆಟ್ ಭಾಷಣದ ವೇಳೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು, "ರಾಜ್ಯವು ಪ್ರಸ್ತುತ ಎದುರಿಸುತ್ತಿರುವ ಕಂದಾಯ ಕೊರತೆಯನ್ನು ನೀಗಿಸಲು ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕಿದೆ. ನಾವು ಕೇವಲ ಚುನಾವಣೆಗಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ರಾಜ್ಯದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಲು ಈ ಕ್ರಮ ಕೈಗೊಂಡಿದ್ದೇವೆ," ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ಉಂಟಾಗಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ರಾಜ್ಯವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ.

ಈ ಯೋಜನೆಯ ಮೂಲಕ ಉಳಿತಾಯವಾಗುವ ಹಣವನ್ನು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಈ ಕಡಿತಗೊಳಿಸಲಾದ ಮೊತ್ತವನ್ನು ಮರುಪಾವತಿಸುವ ಕುರಿತು ಸರ್ಕಾರ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಸರ್ಕಾರದ ಈ ದಿಟ್ಟ ನಡೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತಾತ್ಮಕ ವೆಚ್ಚ ಕಡಿತಕ್ಕೆ ಹೊಸ ದಿಕ್ಸೂಚಿಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಮೊತ್ತದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2025-26ನೇ ಸಾಲಿನಲ್ಲಿ 58,514 ಕೋಟಿ ರೂಪಾಯಿ ಇದ್ದ ಒಟ್ಟಾರೆ ಬಜೆಟ್ ವೆಚ್ಚವನ್ನು, ಈ ಬಾರಿ 54,928 ಕೋಟಿ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. ಅಂದರೆ, ರಾಜ್ಯದ ಒಟ್ಟು ಬಜೆಟ್‌ನಲ್ಲಿ ಸುಮಾರು 3,586 ಕೋಟಿ ರೂಪಾಯಿಗಳಷ್ಟು ಕಡಿತ ಮಾಡಲಾಗಿದ್ದು, ಆರ್ಥಿಕ ಮಿತವ್ಯಯಕ್ಕೆ ಸರ್ಕಾರ ಆದ್ಯತೆ ನೀಡಿದೆ.

ಬಜೆಟ್ ಮಂಡನೆಯ ವೇಳೆ ರಾಜ್ಯದ ಸ್ವಾವಲಂಬನೆಯ ಬಗ್ಗೆ ಒತ್ತು ನೀಡಿದ ಮುಖ್ಯಮಂತ್ರಿಯವರು, "ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸಲು ಎಲ್ಲಾ ವಲಯಗಳ ಸಹಕಾರ ಅತ್ಯಗತ್ಯ. ಕೇವಲ ಸಾಲದ ಮೇಲೆ ಅವಲಂಬಿತವಾಗದೆ, ಸ್ವಯಂ ಸಂಪನ್ಮೂಲ ಕ್ರೋಢೀಕರಣದ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನಮ್ಮ ಗುರಿ" ಎಂದು ತಿಳಿಸಿದರು.

ಕೇಂದ್ರದ ಅನುದಾನದಲ್ಲಿನ ಕಡಿತ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಈ ವಿತ್ತೀಯ ಕ್ರಮಗಳನ್ನು ಕೈಗೊಂಡಿದೆ. ವೇತನ ತಡೆಹಿಡಿಯುವಿಕೆ ಮತ್ತು ಬಜೆಟ್ ಗಾತ್ರದ ಕಡಿತದ ಮೂಲಕ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಸಿಎಂ ಸುಖು ಅವರ ಉದ್ದೇಶವಾಗಿದೆ. ಇದು ದೇಶದ ಇತರೆ ರಾಜ್ಯಗಳಿಗೂ ಆಡಳಿತಾತ್ಮಕ ವೆಚ್ಚ ಕಡಿತದ ನಿಟ್ಟಿನಲ್ಲಿ ಮಹತ್ವದ ಸಂದೇಶ ರವಾನಿಸಿದೆ.

ಪೊಲೀಸರ ವೇತನವೂ ಕಡಿತ

ಈ ವೆಚ್ಚ ಕಡಿತದ ಭಾಗವಾಗಿ ಮುಖ್ಯಮಂತ್ರಿಯವರು ತಮ್ಮ ಸ್ವಂತ ವೇತನದಲ್ಲಿ ಶೇಕಡಾ 50ರಷ್ಟು ಭಾಗವನ್ನು ತಡೆಹಿಡಿಯಲಿದ್ದಾರೆ. ಸಚಿವರು ಶೇಕಡಾ 30ರಷ್ಟು ಮತ್ತು ಶಾಸಕರು ಶೇಕಡಾ 20ರಷ್ಟು ವೇತನ ಕಡಿತವನ್ನು ಎದುರಿಸಲಿದ್ದಾರೆ. ಆಡಳಿತದ ಉನ್ನತ ಮಟ್ಟದ ಅಧಿಕಾರಿಗಳಾದ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಡಿಜಿಪಿ ಹಂತದ ಅಧಿಕಾರಿಗಳ ವೇತನದಲ್ಲಿ ಶೇಕಡಾ 30ರಷ್ಟು ಹಾಗೂ ಇತರ ಹಿರಿಯ ಸಿಬ್ಬಂದಿಯ ವೇತನದಲ್ಲಿ ಶೇಕಡಾ 20ರಷ್ಟು ಹಣವನ್ನು ತಡೆಹಿಡಿಯಲು ಸರ್ಕಾರ ಆದೇಶಿಸಿದೆ.

ಇದಲ್ಲದೆ, ಪೊಲೀಸ್ ಇಲಾಖೆಯ ಮೇಲೆಯೂ ಈ ನಿರ್ಧಾರದ ಪ್ರಭಾವ ಬೀರಿದ್ದು, ಎಡಿಜಿಪಿಯಿಂದ ಡಿಐಜಿ ಶ್ರೇಣಿಯ ಅಧಿಕಾರಿಗಳು ಶೇಕಡಾ 30ರಷ್ಟು ಮತ್ತು ಎಸ್‌ಪಿ ಮಟ್ಟದ ಅಧಿಕಾರಿಗಳು ಹಾಗೂ ಸಾಮಾನ್ಯ ಸಿಬ್ಬಂದಿ ಶೇಕಡಾ 20ರಷ್ಟು ವೇತನವನ್ನು ಆರು ತಿಂಗಳ ಕಾಲ ಪಡೆಯುವುದಿಲ್ಲ. ಇದೇ ವೇಳೆ ಸರ್ಕಾರಿ ನೌಕರರಿಗೆ ನೀಡಲಾಗುವ ವಾರ್ಷಿಕ ಶೇಕಡಾ 3ರಷ್ಟು ವೇತನ ಏರಿಕೆಯನ್ನು ಅರ್ಧ ವರ್ಷದವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ, ಕಡಿಮೆ ವೇತನ ಪಡೆಯುವ 'ಗ್ರೂಪ್ ಡಿ' ನೌಕರರಿಗೆ ಈ ವೇತನ ಏರಿಕೆ ಸ್ಥಗಿತದಿಂದ ವಿನಾಯಿತಿ ನೀಡಲಾಗಿದ್ದು, ನ್ಯಾಯಾಂಗ ವ್ಯವಸ್ಥೆಯೂ ಇಂತಹದ್ದೇ ಸ್ವಯಂಪ್ರೇರಿತ ಮಿತವ್ಯಯ ಕ್ರಮಗಳನ್ನು ಅನುಸರಿಸುವಂತೆ ಸರ್ಕಾರ ಮನವಿ ಮಾಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+