ಹಿಮಾಚಲ ಪ್ರದೇಶದಲ್ಲಿ ಶೇ. 74 ಮತದಾನ, ಬಿಜೆಪಿಗೆ ಲಾಭ ಸಾಧ್ಯತೆ
ಶಿಮ್ಲಾ, ನವೆಂಬರ್ 9: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆದಿದ್ದು ಬರೋಬ್ಬರಿ ಶೇಕಡಾ 74ರಷ್ಟು ಜನರು ಮತದಾನ ಮಾಡಿದ್ದಾರೆ. ಇದು ಸದ್ಯದ ಚಿತ್ರಣವಾಗಿದ್ದು ಮತದಾನದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ.
ಸಾಮಾನ್ಯವಾಗಿ ಹೆಚ್ಚಿನ ಮತದಾನವಾದಾಗ ಆಡಳಿತರೂಢ ಪಕ್ಷಗಳಿಗೆ ನಷ್ಟವಾಗುವುದೇ ಹೆಚ್ಚು. ಹೀಗಾಗಿ ಹೆಚ್ಚಿನ ಮತದಾನ ಬಿಜೆಪಿಗೆ ಲಾಭವಾಗಬಹುದು ಎಂದುಕೊಳ್ಳಲಾಗಿದೆ.
ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿದೆ. ಒಟ್ಟು 68 ವಿಧಾನಸಭೆ ಕ್ಷೇತ್ರಗಳಿಗೆ ಏಕ ಹಂತದ ಮತದಾನ ನಡೆದಿದ್ದು 337 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಡಿಸೆಂಬರ್ 18ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿವೆ...
ಮಧ್ಯಾಹ್ನ 2.30: ಶೇ.54.09ರಷ್ಟು ಮತದಾನದ ದಾಖಲೆ
ಮಧ್ಯಾಹ್ನ 2.15: ಕಾಂಗ್ರೆಸ್ ಹಿರಿಯ ನಾಯಕಿ ವಿದ್ಯಾ ಸ್ಟೋಕ್ ರಿಂದ ಮತಚಲಾವಣೆ
ಮಧ್ಯಾಹ್ನ 12.00: ಶೇ.28.6ರಷ್ಟು ಮತದಾನದ ದಾಖಲೆ.
ಬೆಳಿಗ್ಗೆ 11.30: ಮತಚಲಾಯಿಸಿದ ಕೇಂದ್ರ ಸಚಿವ ಜೆ.ಪಿ.ನಡ್ಡಾ
ಬೆಳಿಗ್ಗೆ 11.00: ಹಮಿರ್ಪುರದ ಸುಜನ್ಪುರ ಮತಗಟ್ಟೆಯಲ್ಲಿ ಕೈಕೊಟ್ಟ ವಿವಿಪ್ಯಾಟ್ ಯಂತ್ರ.
ಬೆಳಿಗ್ಗೆ 10.15: ಇದುವರೆಗೂ ಶೇ.13.72ರಷ್ಟು ಮತದಾನದ ದಾಖಲೆ
ಬೆಳಿಗ್ಗೆ 10.05: ಶಿಮ್ಲಾ ಮತಗಟ್ಟೆಯಲ್ಲಿ ಮತಚಲಾಯಿಸಿದ ವೀರಭದ್ರ ಸಿಂಗ್ ಮತ್ತು ಪುತ್ರ ವಿಕ್ರಮಾದಿತ್ಯ
ಬೆಳಿಗ್ಗೆ 10.00: ಹಮಿರ್ಪುರ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಮತ್ತು ಅವರ ಪುತ್ರ, ಸಂಸದ ಅನುರಾಗ್ ಠಾಕೂರ್.
ಬೆಳಿಗ್ಗೆ 9.45: ನಾವು ಮತ್ತೆ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ಮುಂದಿನ ಸರ್ಕಾರವೂ ಕಾಂಗ್ರೆಸ್ ನದ್ದೇ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್
ಬೆಳಿಗ್ಗೆ 9.25: ಹಿಮಾಚಲಪ್ರದೇಶವನ್ನು ಕೊಳ್ಳಹೊಡೆದಿರುವ ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಆದ್ದರಿಂದ ಬಿಜೆಪಿಗೆ ಬೆಂಬಲಿಸುವ ಮನಸ್ಸು ಮಾಡಿದ್ದಾರೆ: ಅನುರಾಗ್ ಠಾಕೂರ್
ಬೆಳಿಗ್ಗೆ 9.15: ನಮಗೆ 60 ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬ ನಿರೀಕ್ಷೆ ನಮಗಿದೆ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್
ಬೆಳಿಗ್ಗೆ 8.45: ಕಿನ್ನೌರ್ ಮತಗಟ್ಟೆಯಲ್ಲಿ ತಾಂತ್ರಿಕ ದೋಷದ ಕಾರಣ ಮತದಾನ ವಿಳಂಬ.
ಬೆಳಿಗ್ಗೆ 8.30: ಮತಗಟ್ಟೆಯೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿಕ್ಷಕಿಯೊಬ್ಬರ ಮೇಲೆ ದೂರು ದಾಖಲು
ಬೆಳಿಗ್ಗೆ 8.15: ಧರ್ಮಶಾಲ, ಸಮಿರ್ಪುರ, ರಾಮ್ಪುರಗಳಲ್ಲಿ ನಡೆಯುತ್ತಿರುವ ಶಾಂತಿಯುತ ಮತದಾನ.
ಬೆಳಿಗ್ಗೆ 8.00: ರಾಜ್ಯದಾದ್ಯಂತ ಮತದಾನ ಆರಂಭವಾಗಿದೆ. ಕೆಲವು ಮತಗಟ್ಟೆಗಳಲ್ಲಿ ಮಾತ್ರ ತಾಂತ್ರಿಕ ಕಾರಣಗಳಿಗಾಗಿ ಮತದಾನ ಆರಂಭವಾಗಿಲ್ಲ.
ಬೆಳಿಗ್ಗೆ 7.30: ಹಿಮಾಚಲ ಪ್ರದೇಶದಾದ್ಯಂತ ಮತದಾನಕ್ಕೆ ಸಿದ್ಧತೆ. ಕೆಲವು ಬೂತ್ ಗಳಲ್ಲಿ ತಾಂತ್ರಿಕ ದೋಷದಿಂದ ಮತದಾನ ವಿಳಂಬವಾಗುವ ಸಾಧ್ಯತೆ

ಈ ಬಾರಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಇರುವ ಮತಯಂತ್ರಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ. ಮತದಾರರು ಮತ ಚಲಾಯಿಸಿದ ನಂತರ ತಾವು ಮತಚಲಾಯಿಸಿದ ಪಕ್ಷಕ್ಕೆ ಸರಿಯಾಗಿ ಮತ ಬಿದ್ದಿದೆಯೇ ಎಂಬುದನ್ನು ವಿವಿಪ್ಯಾಟ್ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ.
ಒಟ್ಟು 50.2 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರಲ್ಲಿ 25.68 ಪುರುಷ ಮತದಾರರು ಹಾಗೂ 24.57 ಮಹಿಳಾ ಮತದಾರರು ಸೇರಿದ್ದಾರೆ. ಮತದಾನಕ್ಕಾಗಿ ಒಟ್ಟು 7,525 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಬೆಳಿಗ್ಗೆ 6.55: ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿಗಳು ಮತದಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಹಲವು ಮತಗಟ್ಟೆಗಳಲ್ಲಿ ಈಗಾಗಲೇ ಜನರು ಮತಚಲಾಯಿಸಲು ಬಂದು ಕಾಯುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಇನ್ನು 112 ಪಕ್ಷೇತರ ಅಭ್ಯರ್ಥಿಗಳೂ ಸ್ಪರ್ಧೆಯಲ್ಲಿದ್ದಾರೆ. ಬಿಎಸ್ಪಿ 42, ಸಿಪಿಐಎಂ 14, ಸಿಪಿಐ 3, ಎಸ್ಪಿ ಮತ್ತು ಎನ್ಸಿಪಿ ತಲಾ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಬೆಳಿಗ್ಗೆ 6.50: ಹಿಮಾಚಲ ಪ್ರದೇಶ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸ್ಪರ್ಧಾ ಕಣದಲ್ಲಿ 338 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ 19 ಮಹಿಳಾ ಅಭ್ಯರ್ಥಿಗಳೂ ಸೇರಿದ್ದಾರೆ. ಧರ್ಮಶಾಲಾದಲ್ಲಿ ಅತೀ ಹೆಚ್ಚಿನ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಝಂಡುಟಾ ಮೀಸಲು ಕ್ಷೇತ್ರದಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications