• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh Elections Result 2022: ಹಿಮಾಚಲ ಪ್ರದೇಶ : ಇತಿಹಾಸ ಬರೆಯುವುದೇ ಬಿಜೆಪಿ?

|
Google Oneindia Kannada News

ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 68 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಹೊಸ ಇತಿಹಾಸ ರಚನೆ ಮಾಡುವ ಉತ್ಸಾಹದಲ್ಲಿ ಬಿಜೆಪಿ ಪಕ್ಷವಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ 8 ಗಂಟೆಗೆ ಆರಂಭವಾಗಲಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 35. ನವೆಂಬರ್ 12ರಂದು ರಾಜ್ಯದಲ್ಲಿ ಶೇ 75.6ರಷ್ಟು ಮತದಾನವಾಗಿತ್ತು.

Recommended Video

   Himachal Pradesh Result 2022: ಸರ್ಕಾರ ರಚನೆ ವೇಳೆ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಕಂಡುಬರುತ್ತಿದೆ

   Himachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿ Himachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿ

   ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತೆ ಅಧಿಕಾರ ಪಡೆಯುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಲು ಬಿಜೆಪಿ ತೀರ್ಮಾನಿಸಿದೆ. ಅದಕ್ಕಾಗಿ ಪಕ್ಷ ಬಿರುಸಿನ ಪ್ರಚಾರವನ್ನು ಸಹ ನಡೆಸಿದೆ. ಕಾಂಗ್ರೆಸ್ ಮತ್ತು ಎಎಪಿ ಬಿಜೆಪಿಗೆ ಎದುರಾಳಿಗಳು.

   Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು? Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು?

   ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸರಳ ಬಹುಮತದ ಮೂಲಕ ಅಧಿಕಾರ ಹಿಡಿಯಲಿದೆ ಎಂದು ಅಂದಾಜಿಸಿವೆ. ರಾಜ್ಯದ ಜನರು ಯಾವ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂಬ ಚಿತ್ರಣ 12 ಗಂಟೆಯ ವೇಳೆಗೆ ಸಿಗುವ ನಿರೀಕ್ಷೆ ಇದೆ.

   Himachal Pradesh Exit Poll Result 2022; ಬಿಜೆಪಿಯೇ ಬಹುದೊಡ್ಡ ಪಕ್ಷ Himachal Pradesh Exit Poll Result 2022; ಬಿಜೆಪಿಯೇ ಬಹುದೊಡ್ಡ ಪಕ್ಷ

   2017ರ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ಹಿಡಿದಿತ್ತು.

   ಅದಕ್ಕಿಂತ ಹಿಂದಿನ 2012ರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಬಿಜೆಪಿಗೆ 26, ಕಾಂಗ್ರೆಸ್‌ಗೆ 36 ಮತ್ತು ಇತರರು 6 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು.

   ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, "ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಜಯಗಳಿಸಲಿದೆ, ಮತ್ತೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿವೆ. ಗುರುವಾರ ಮತ ಎಣಿಕೆ ನಡೆಯಲಿದ್ದು, ನಾವು ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ" ಎಂದು ಹೇಳಿದ್ದರು.

   ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ News 24-Today's Chanakya; ಬಿಜೆಪಿ 33, ಕಾಂಗ್ರೆಸ್ 33, ಇತರರು 2 ಸ್ಥಾನದಲ್ಲಿ ಜಯಗಳಿಸಲಿದ್ದು, ನೇರ ಪೈಪೋಟಿ ಇದೆ ಎಂದು ಅಂದಾಜಿಸಿದೆ.

   Republic TV P-Marq ಸಮೀಕ್ಷೆ ಬಿಜೆಪಿ 34-39, ಕಾಂಗ್ರೆಸ್ 28-33 ಮತ್ತು ಎಎಪಿ 1 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಹೇಳಿದೆ. Times Now-ETG ಸಮೀಕ್ಷೆ ಬಿಜೆಪಿ 38, ಕಾಂಗ್ರೆಸ್ 28 ಮತ್ತು ಎಎಪಿ 0 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಹೇಳಿದೆ.

   English summary
   Himachal Pradesh assembly elections Results 2022; BJP hoping to set new records by changing the trend of not repeating government after five years in Himachal Pradesh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X