ಮೋದಿ ಜತೆಗಿನ ಮ್ಯಾಜಿಕ್ ಚಿತ್ರ ಹಂಚಿಕೊಂಡ ಪ್ರೇಮ್

Recommended Video

      ಮೋದಿ ಜೊತೆಗಿನ ಹಳೇ ಫೋಟೋವೊಂದನ್ನ ಹಂಚಿಕೊಂಡ ಪ್ರೇಮ್ ಕುಮಾರ್ ಧುಮಾಲ್ | Oneindia Kannada

      ಬೆಂಗಳೂರು, ಡಿಸೆಂಬರ್ 18: ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಸದ್ಯದ ಟ್ರೆಂಡ್ ನಂತೆ ಬಿಜೆಪಿ ಸರಳ ಬಹಮತದತ್ತ ದಾಪುಗಾಲು ಇಟ್ಟಿದೆ. 68 ಸ್ಥಾನಗಳ ಪೈಕಿ ಬಹುಮತಕ್ಕೆ ಬೇಕಾದ 35 ಮ್ಯಾಜಿಕ್ ನಂಬರ್ ಯಾರು ದಾಟಲಿದ್ದಾರೆ ಸದ್ಯದಲ್ಲೇ ತಿಳಿಯಲಿದೆ.

      ಈ ನಡುವೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಪ್ರಧಾನಿ ಮೋದಿ ಅವರ ಜತೆಗಿನ ಹಳೆ ಚಿತ್ರವನ್ನು ಹಂಚಿಕೊಂಡು ನನ್ನ ಬದುಕಿನ ಮ್ಯಾಜಿಕಲ್ ಘಟನೆ ಎಂದಿದ್ದಾರೆ.

      As Himachal Counts, PK Dhumal Shares An Old Photo With PM Modi

      ಬಿಜೆಪಿ ಮ್ಯಾಜಿಕ್ ನಂಬರ್ ದಾಟಲಿದ್ದು, ವೀರಭದ್ರಸಿಂಗ್(83) ಅಧಿಕಾರ ಕಳೆದುಕೊಳ್ಳಲಿದ್ದು, ಪ್ರೇಮ್ ಕುಮಾರ್ ಧುಮಾಲ್(73) ಸಿಎಂ ಆಗುವ ಅವಕಾಶಗಳಿವೆ' ಎಂದು ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ ಸರಾಸರಿ ವರದಿ ಹೇಳಿದೆ. ಆದರೆ, ಮತದಾರರ ತೀರ್ಪು ಯಾರ ಕಡೆ ಇದೆ ಎಂಬುದು ಇಂದು ತಿಳಿಯಲಿದೆ.

      2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್(83) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವೀರಭದ್ರ ಹಾಗೂ ಧುಮಾಲ್ ಇಬ್ಬರಿಗೂ ಇದು ಬಹುಶಃ ಕೊನೆ ಚುನಾವಣೆ. ಧುಮಾಲ್ ಅವರು ಸಿಎಂ ಪಟ್ಟಕ್ಕೇರಿದರೂ 2 ವರ್ಷ ಕಾಲ ಮಾತ್ರ ಸಿಎಂ ಆಗುವ ಯೋಗ ಪಡೆಯಲಿದ್ದಾರೆ.

      As Himachal Counts, PK Dhumal Shares An Old Photo With PM Modi

      ಆದರೆ, ಸಿಎಂ ಆಗುವ ಯೋಗ ಬಂದರೆ ಅದು ಮೋದಿ ಅವರಿಂದ ಎಂದು ಪ್ರೇಮ್ ನಂಬಿಕೆ. 1998ರ ಮಾರ್ಚ್ 24ರಂದು ಮೋದಿ ಅವರು ಹಿಮಾಚಲ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದಾಗ ಧುಮಾಲ್ ಅವರ ಜತೆ ಸ್ನೇಹ್ ಬೆಳೆದಿದ್ದು, ಇಂದು ಧುಮಾಲ್ ಸಿಎಂಕ್ಕೇರುವ ಹಂತಕ್ಕೆ ತಂದು ನಿಲ್ಲಿಸಿದೆ. ಚಿತ್ರ ಕೃಪೆ: ಎನ್ ಡಿಟಿವಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+