• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ: ಹೆದ್ದಾರಿಯಲ್ಲಿ ಕೆಟ್ಟು ನಿಂತ ಬಸ್ ತಳ್ಳಿದ ಅನುರಾಗ್ ಠಾಕೂರ್

|
Google Oneindia Kannada News

ಶಿಮ್ಲಾ, ನವೆಂಬರ್‌ 9: ಹಿಮಾಚಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಂಗಳವಾರ ಸಹಾಯ ಹಸ್ತ ಚಾಚಿದ್ದಾರೆ. ಬಿಲಾಸ್‌ಪುರದಲ್ಲಿ ಹೆದ್ದಾರಿಯ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಸ್ಸನ್ನು ಸಚಿವರು ತಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಕೆಟ್ಟು ನಿಂತ ಬಸ್‌ನಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಠಾಕೂರ್ ಅವರ ಬೆಂಗಾವಲು ಪಡೆ ಕೂಡ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸ್ವತ: ಠಾಕೂರ್ ಅವರು ಕೆಟ್ಟು ನಿಂತ ವಾಹನವನ್ನು ತಳ್ಳುವ ವಿಡಿಯೋ ವೈರಲ್ ಆಗಿದೆ.

ಹರ್ಯಾಣದಲ್ಲಿ ರೈತರ ಹೋರಾಟ; ರಾತ್ರಿಯಿಡೀ ಹೆದ್ದಾರಿಯಲ್ಲಿ ಟ್ರಾಫಿಕ್! ಹರ್ಯಾಣದಲ್ಲಿ ರೈತರ ಹೋರಾಟ; ರಾತ್ರಿಯಿಡೀ ಹೆದ್ದಾರಿಯಲ್ಲಿ ಟ್ರಾಫಿಕ್!

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಸಚಿವರು ಬಿಲಾಸ್‌ಪುರದಲ್ಲಿದ್ದರು. ಬಿಲಾಸ್‌ಪುರದಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಠಾಕೂರ್ ತೆರಳಬೇಕಾಗಿತ್ತು.

ಪ್ರಯಾಣಿಕರಿಂದ ತುಂಬಿದ್ದ ಬಸ್ ಹಳ್ಳಿಯೊಂದರಲ್ಲಿ ಹಾದು ಹೋಗುವ ಕಿರಿದಾದ ರಸ್ತೆಯಲ್ಲಿ ಕೆಟ್ಟು ನಿಂತಿತ್ತು. ಅನುರಾಗ್ ಠಾಕೂರ್ ಮತ್ತು ತಮ್ಮ ಬೆಂಗಾವಲು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ನಂತರ ಕಾರಿನಿಂದ ಇಳಿದು ಉಳಿದ ಜನರೊಂದಿಗೆ ಬಸ್ ಅನ್ನು ತಳ್ಳಿದರು. ಅವರು ಚಾಲಕ ಮತ್ತು ಪ್ರಯಾಣಿಕರ ಸ್ಥಿತಿಯ ಬಗ್ಗೆ ಕೇಳಿದರು. ಬಸ್ಸು ಮತ್ತೆ ಚಲಿಸಲು ಪ್ರಾರಂಭಿಸಿದ ನಂತರ, ಠಾಕೂರ್ ತನ್ನ ಇತರ ಕಾರ್ಯಕ್ರಮಗಳಿಗೆ ಹಾಜರಾಗಲು ತೆರಳಿದರು.

Himachal Election: Anurag Thakur pushed a bus that broke down on the highway

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನವೆಂಬರ್ 12 ರಂದು ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ಪ್ರಬಲ ಪಕ್ಷಗಳ ಮತಬೇಟೆ ಜೋರಾಗಿದೆ.

English summary
Himachal Pradesh Assembly Election 2022: Union Minister Anurag Thakur on Tuesday extended a helping hand to clear the traffic jam in Himachal Pradesh. In the video, the minister was seen pushing a broken-down bus in the middle of the highway in Bilaspur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X