ದೇಶದ ಈ ಗಿರಿಧಾಮಗಳಲ್ಲೇ ಅತೀ ಹೆಚ್ಚು OYO ರೂಮ್ಸ್ ಬುಕಿಂಗ್: ಕರ್ನಾಟಕದ ಕೂರ್ಗ್‌ಗೆ ಎಷ್ಟನೇ ಸ್ಥಾನ?
On Your Own: 2025ರ ಹೊಸ ವರ್ಷವನ್ನು ಇಡೀ ದೇಶವೇ ಅದ್ಧೂರಿಯಾಗಿ ಬರ ಮಾಡಿಕೊಂಡಿದೆ. ಇನ್ನೂ ಹೊಸ ವರ್ಷದ ಮೊದಲ ರಾತ್ರಿ ದಾಖಲೆ ಮಟ್ಟದಲ್ಲಿ ಕಾಂಡೋಮ್ ಮಾರಾಟ ಹಾಗೂ ಓಯೋ ರೂಂ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ OYO ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್ ಅವರು ಎಲ್ಲಿ ಓಯೋ ಅತೀ ಹೆಚ್ಚಾಗಿ ಬುಕ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.
ಹೊಸ ವರ್ಷದ 2025ರ ಮೊದಲ ದಿನ ಎಲ್ಲೆಲ್ಲಿ ಹೆಚ್ಚಾಗಿ OYO ರೂಮ್ ಬುಕ್ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇದರ ಸಂಸ್ಥಾಪಕ ಮತ್ತು CEO ರಿತೇಶ್ ಅಗರ್ವಾಲ್ ಅವರು ಬಹಿರಂಗಗೊಳಿಸಿದ್ದಾರೆ. ಗಿರಿಧಾಮಗಳ ಪ್ರದೇಶಗಳಲ್ಲಿ ಈ ಬಾರಿ ಹೆಚ್ಚು ಓಯೋ ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿಯೊಂದನ್ನು ನೀಡಿದ್ದಾರೆ. ಅಲ್ಲದೆ, ಕರ್ನಾಟಕದ ಯಾವ ತಾಣದಲ್ಲಿ ಅತೀ ಹೆಚ್ಚಾಗಿ ಬುಕ್ ಮಾಡಿದ್ದಾರೆ ಅಂತಲೂ ತಿಳಿಸಿದೆ.

ಓಯೋ ರೂಂ ಬಕಿಂಗ್ ಬಗ್ಗೆ ಅಗರ್ವಾಲ್ ತನ್ನ ಟ್ವಿಟರ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಯಾವ ಪ್ರದೇಶಗಳಲ್ಲಿ ಹೆಚ್ಚು ಬುಕ್ ಮಾಡಿದ್ದಾರೆ ಹಾಗೂ ಕಂಪನಿಗೆ ಬಂದ ಆದಾಯದ ಬಗ್ಗೆಯೂ ಹಿರಂಗಪಡಿಸಿದ್ದಾರೆ. ಡೆಹ್ರಾಡೂನ್ ಮತ್ತು ಶ್ರೀನಗರದ ಗಿರಿಧಾಮಗಳಲ್ಲಿ ಅತೀ ಹೆಚ್ಚು ಓಯೋ ರೂಂಗಳನ್ನು ಬುಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ
ಕರ್ನಾಟಕದ ಅತ್ಯಂತ ಸುಂದರ ಹಚ್ಚ ಹಸಿರಿನಿಂದ ಕೂಡಿರುವ ಸುಂದರ ತಾಣವಾದ ಕೂರ್ಗ್ ಭಾಗದಲ್ಲಿ ಈ ಬಾರಿ ಹೊಸ ವರ್ಷದ ವೇಳೆ ಶೇಕಡ 28ರಷ್ಟು ಏರಿಕೆಯಾಗಿದೆ. ಇದಕ್ಕೆ ಪ್ರತಿಸ್ಪರ್ಧಿ ಎಂಬಂತೆ ಉತ್ತರಖಂಡ್ ರಾಜ್ಯದ ಜನಪ್ರಿಯ ಗಿರಿಧಾಮವಾಗಿರುವ ಮಸ್ಸೂರಿ ಪ್ರದೇಶದಲ್ಲಿ ಶೇಕಡ 10ರಷ್ಟು ಏರಿಕೆಯಾಗಿದ್ದು, ಇದು ಭಾರೀ ಅಚ್ಚರಿಗೆ ಕಾರಣವಾಗಿದೆ ಎಂದು ರಿತೇಶ್ ಅಗರ್ವಾಲ್ ಅವರು ಹೇಳಿಕೊಂಡಿದ್ದಾರೆ.
ಇದನ್ನು ಗಮನಿಸುತ್ತಿದ್ದರೆ, ಪ್ರವಾಸಿಗರು ಈಗ ತಾಜಾ ಅನುಭವಗಳನ್ನು ಪಡೆಯಲು ಗಿರಿಧಾಮಗಳಿಗೆ ಹೆಚ್ಚಾಗಿ ಭೇಟಿ ನೀಡಿ ಓಯೋ ರೂಂಗಳನ್ನು ಬುಕ್ ಮಾಡುತ್ತಿದ್ದಾರೆ. ಈ ಮೂಲಕ ಹೆಚ್ಚಿನ ಪ್ರವಾಸಿಗರು ಸದಾ ಹಚ್ಚ ಹರಿಸಿನಿಂದ ಕಂಗೊಳಿಸುವ ಗಿರಿಧಾಮಗಳ ಕಡೆಗೆ ಹೆಚ್ಚು ಒಲವು ಒಲವು ತೋರುತ್ತಿದಂತೆ ಕಂಡುಬರುತ್ತಿದೆ. ಹೀಗೆ ಇಂತಹ ತಾಣಗಳು ಅತ್ಯಂತ ಜನಪ್ರಿಯತೆಯನ್ನು ಗಳಿಸುತ್ತಿವೆ ಎಂದು ಅಗರ್ವಾಲ್ ಬರೆದುಕೊಂಡಿದ್ದಾರೆ.
ಬನಾರಸ್ (ವಾರಣಾಸಿ) ಈ ವರ್ಷ 12,841 OYO ಬುಕಿಂಗ್‌ನೊಂದಿಗೆ ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿದೆ. ಅಯೋಧ್ಯೆಯು ಈ ವರ್ಷ ಹೊಸದಾಗಿ ಸೇರ್ಪಡೆಯಾಗಿದೆ ಎಂದು ಅವರು ಬಹಿರಂಗಪಡಿಸಿದರು. ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿರುವ ಅಯೋಧ್ಯೆಯು ಮುಂಬರುವ ದಿನಗಳಲ್ಲಿ, ಅದರಲ್ಲೂ ವಿಶೇಷವಾಗಿ ಪ್ರಾಣ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಸಮಯದಲ್ಲಿ ಪ್ರಮುಖ ಆಧ್ಯಾತ್ಮಿಕ ತಾಣವಾಗುವ ನಿರೀಕ್ಷೆಯಿದೆ ಅಂತಲೂ ಹೇಳಿದ್ದಾರೆ.












Click it and Unblock the Notifications