ಉಪಕುಲಪತಿ ನೇಮಕಾತಿ ರದ್ದುಗೊಳಿಸಿದ ಕೇರಳ ಹೈಕೋರ್ಟ್

ತಿರುವನಂತಪುರಂ, ನವೆಂಬರ್‌ 14: ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ (ಕುಫೋಸ್) ಉಪಕುಲಪತಿ ಡಾ.ರಿಜಿ ಜಾನ್ ಅವರ ನೇಮಕಾತಿಯನ್ನು ಕೇರಳ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಇದರೊಂದಿಗೆ ನೇಮಕಾತಿ ದಿನಾಂಕದಿಂದ ಅವಧಿಯು ಅನುರ್ಜಿತವಾಗಿರುತ್ತದೆ. ಡಾ ರಿಜಿ ಜಾನ್ ಅವರನ್ನು ಜನವರಿ 23, 2021 ರಂದು ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿತ್ತು. ಈ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸರ್ಕಾರ ಮಾಡಿದ ಮನವಿಯನ್ನು ಹೈಕೋರ್ಟ್ ಸ್ವೀಕರಿಸಲಿಲ್ಲ.

ಅಲ್ಲದೆ ಹೊಸ ಶೋಧನಾ ಸಮಿತಿ ರಚಿಸುವಂತೆಯೂ ಕುಲಪತಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಉಪಕುಲಪತಿಗಳ ನೇಮಕಾತಿಯು ಯುಜಿಸಿ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಡಾ.ಕೆ.ಕೆ.ವಿಜಯನ್ ಮತ್ತು ಡಾ.ಸದಾಶಿವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ.ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.

High Court cancels appointment of Vice-Chancellor of Kerala University of Fisheries and Ocean Studies

ಆರು ದಿನಗಳ ಹಿಂದೆ ಅಂದರೆ ನವೆಂಬರ್‌ 8ರಂದು ತಿರುವನಂತಪುರಂನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದ (ಕೆಟಿಯು) ಉಪಕುಲಪತಿಯಾಗಿ ಸಿಜಾ ಥಾಮಸ್ ಅವರ ನೇಮಕಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿತ್ತು. ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿ ಆದೇಶ ಹೊರಡಿಸಿದ್ದ ನೇಮಕಾತಿಗೆ ತಡೆ ನೀಡುವಂತೆ ಕೇರಳ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಸಿಜಾ ಥಾಮಸ್ ಅವರು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಹಿರಿಯ ಜಂಟಿ ನಿರ್ದೇಶಕರಾಗಿದ್ದಾರೆ. ಐಎಎಸ್ ಆಗಿರುವ ರಾಜ್ಯದ ಉನ್ನತ ಶಿಕ್ಷಣದ ಪ್ರಧಾನ ಕಾರ್ಯದರ್ಶಿ ಇಶಿತಾ ರಾಯ್ ಅವರಿಗೆ ಪ್ರಭಾರ ಉಪಕುಲಪತಿಯ ಜವಾಬ್ದಾರಿಯನ್ನು ಹಸ್ತಾಂತರಿಸುವ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿ ಸಿಜಾ ಥಾಮಸ್ ಅವರನ್ನು ಕೇರಳ ರಾಜ್ಯಪಾಲರು ನೇಮಿಸಿದ್ದರು.

High Court cancels appointment of Vice-Chancellor of Kerala University of Fisheries and Ocean Studies

ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಕಾಯಿದೆ 2015 (2015 ರ ಕಾಯಿದೆ 17) ನ ಸೆಕ್ಷನ್ 13 ರ ಉಪ-ವಿಭಾಗ 7 ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನ ಹಾಗೂ 2018ರ ಯುಜಿಸಿ ನಿಯಮಾವಳಿಗಳ ಷರತ್ತು 7.3 ಹಿನ್ನೆಲೆಯಲ್ಲಿ ಗವರ್ನರ್‌ ಅವರು ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ನಿಯಮಿತ ಉಪಕುಲಪತಿ ನೇಮಕಾತಿ ಬಾಕಿ ಇದೆ. ಹಾಗಾಗಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಹಿರಿಯ ಜಂಟಿ ನಿರ್ದೇಶಕರಾದ ಸಿಜಾ ಥಾಮಸ್ ಅವರನ್ನು ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಾಗಿ ನೇಮಿಸಲಾಗಿದೆ ಎಂದು ರಾಜಭವನ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+