ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ರಾಮಸೇತು ರಾಷ್ಟ್ರೀಯ ಸ್ಮಾರಕ; ಮುಂದಿನ ವಾರ ವಿಚಾರಣೆ

|
Google Oneindia Kannada News

ನವದೆಹಲಿ, ಜುಲೈ 26: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದಿನವಾರ ನಡೆಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌. ವಿ. ರಮಣ ನೇತೃತ್ವದ ಪೀಠವು ಮುಂದಿನ ವಾರ ಅರ್ಜಿಯನ್ನು ವಿಚಾರಣೆ ನಡೆಸಲಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ವಿಷಯವನ್ನು ಜುಲೈ 26 ರಂದು ಪೀಠವು ವಿಚಾರಣೆಗೆ ಕಾಯ್ದಿರಿಸಿದೆ. ಆದರೆ, ಅದನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ ಎಂದು ಹೇಳಿದರು.

Breaking: ಲಿಖಿಂಪುರ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ Breaking: ಲಿಖಿಂಪುರ ಪ್ರಕರಣ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ

'ಈ ಸಮಸ್ಯೆಯು ದೀರ್ಘಕಾಲದಿಂದ ಬಾಕಿ ಉಳಿದಿದೆ. ಇದರ ತುರ್ತು ವಿಚಾರಣೆಯ ಅಗತ್ಯವಿದೆ' ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮನವಿ ಸಲ್ಲಿಸಿದ ನಂತರ, ಪೀಠವು ಜುಲೈ 26 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿತ್ತು.

Heritage Status For Ram Setu: Supreme Court To Hear Plea Next Week

ರಾಮಸೇತುವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವೆಂದು ಘೋಷಿಸಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಜೊತೆಗೆ ಭಾರತ ಸರ್ಕಾರಕ್ಕೆ ಆದೇಶ ಮತ್ತು ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮ್ಮ ಮನವಿಯಲ್ಲಿ ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವಾಗಿರುವ ರಾಮಸೇತುವಿಗೆ ಸಂಬಂಧಿಸಿದಂತೆ ವಿವರವಾದ ಸಮೀಕ್ಷೆಯನ್ನು ನಡೆಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣೆಯನ್ನು ತೊಡಗಿಸಿಕೊಳ್ಳಲು ಆದೇಶ ಮತ್ತು ನಿರ್ದೇಶನ ನೀಡುವಂತೆಯೂ ಒತ್ತಾಯಿಸಿದ್ದಾರೆ.

'ರಾಮಸೇತು' ಅಸ್ತಿತ್ವವನ್ನು ಕೇಂದ್ರವು ಒಪ್ಪಿಕೊಂಡಿರುವ ಮೊದಲ ಸುತ್ತಿನ ಮೊಕದ್ದಮೆಯಲ್ಲಿ ತಾನು ಈಗಾಗಲೇ ಗೆದ್ದಿದ್ದೇನೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದು, ರಾಮಸೇತುವನ್ನು ರಾಷ್ಟ್ರೀಯವಾಗಿ ಘೋಷಿಸುವ ತನ್ನ ಬೇಡಿಕೆಯನ್ನು ಪರಿಗಣಿಸಲು ಸಂಬಂಧಿಸಿದ ಕೇಂದ್ರ ಸಚಿವರು 2017 ರಲ್ಲಿ ಸಭೆಯನ್ನು ಕರೆದಿದ್ದರು. ಆದರೆ, ನಂತರ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವವ ಕುರಿತು ಏನೂ ಬೆಳವಣಿಗೆಗಳಾಗಲಿಲ್ಲ ಎಂದಿದ್ದಾರೆ.

ರಾಮಸೇತು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ರಾಮೇಶ್ವರಂ ದ್ವೀಪ ಎಂದೂ ಕರೆಯಲ್ಪಡುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯಲ್ಲಿರುವ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸೇತುವೆಯಾಗಿದೆ.

Recommended Video

Virat Kohli ಬಗ್ಗೆ ಪಾಕಿಸ್ತಾನದ ಶೋಯಬ್ ಅಖ್ತರ್ ಹೇಳಿದ ಎರಡೇ ಪದ ಅಷ್ಟೊಂದ್ ಪವರ್ ಫುಲ್ಲಾ? *Cricket |OneIndia

English summary
National heritage Status For Ram Setu: Supreme Court to hear BJP leader Subramanian Swamy petition on next week. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X