Jharkhand: ಇಂದು 4ನೇ ಬಾರಿಗೆ ಹೇಮಂತ್ ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಜಾರ್ಖಂಡ್‌ನಲ್ಲಿ ಇಂದು ನೂತನ ಸರ್ಕಾರ ಪಟ್ಟಾಭಿಷೇಕವಾಗಲಿದೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೋರೆನ್ ಇಂದು (ನವೆಂಬರ್ 28) ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋರೆನ್ ಅವರನ್ನು ಈ ವರ್ಷದ ಜನವರಿ 31ರಂದು ಇಡಿ ಬಂಧಿಸಿತ್ತು. ಇದರಿಂದಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಜುಲೈ 4ರಂದು ಜೈಲಿನಿಂದ ಹೊರಬಂದ ನಂತರ ಹೇಮಂತ್ ಚಂಪೈ ಸೋರೆನ್ ಅವರನ್ನು ಬದಲಾಯಿಸಿ ಸಿಎಂ ಸ್ಥಾನವನ್ನು ಅಲಂಕರಿಸಿದರು. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾದ ನಂತರ ಅವರು ಇಂದು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗಾದರೆ ಹೇಮಂತ್ ಸೋರೆನ್ ಮತ್ತು ಅವರ ರಾಜಕೀಯ ಪಯಣದ ಬಗ್ಗೆ ಈಗ ತಿಳಿಯೋಣ...

ಹೇಮಂತ್ ಸೋರೆನ್ ಯಾರು?
ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೋರೆನ್ ನಾಲ್ಕನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ. ಅವರು ಮೂರು ಬಾರಿ ರಾಜ್ಯದ ಸಿಎಂ ಆಗಿದ್ದ ಶಿಬು ಸೊರೆನ್ ಅವರ ಪುತ್ರ. ನಾವು ಹೇಮಂತ್ ಸೋರೆನ್ ಅವರ ಆರಂಭಿಕ ಜೀವನವನ್ನು ನೋಡಿದರೆ, ಅವರು 10 ಆಗಸ್ಟ್ 1975 ರಂದು ಶಿಬು ಸೊರೆನ್ ಮತ್ತು ರೂಪಿ ಸೊರೆನ್ ದಂಪತಿಗೆ ಜನಿಸಿದರು. ಹೇಮಂತ್ 1990 ರಲ್ಲಿ ಪಾಟ್ನಾದ ಎಂಜಿ ಹೈಸ್ಕೂಲ್‌ನಿಂದ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು. ಇದರ ನಂತರ ಅವರು 1994 ರಲ್ಲಿ ಪಾಟ್ನಾ ಪ್ರೌಢಶಾಲೆಯಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು.
ಅವರು ರಾಂಚಿಯ BIT (ಮೆಸ್ರಾ) ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದಾದರೂ ಕೆಲವು ಕಾರಣಗಳಿಂದ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಧ್ಯಯನದ ನಂತರ ಹೇಮಂತ್ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. ಬಳಿಕ ಅವರು ಕಲ್ಪನಾ ಅವರನ್ನು ಮದುವೆಯಾದರು. ಇವರಿಗೀಗ ಇಬ್ಬರು ಗಂಡು ಮಕ್ಕಳು ಇದ್ದಾರೆ. ಹೇಮಂತ್ ಅವರ ಪತ್ನಿ ಕಲ್ಪನಾ ಕೂಡ ಈ ಚುನಾವಣೆಯಲ್ಲಿ ಗಂಡೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ ಎನ್ನುವುದು ವಿಶೇಷ.

ಹೇಮಂತ್ ಸೋರೆನ್ ಅವರ ರಾಜಕೀಯ ಜೀವನ ಹೇಗಿತ್ತು?
ಹೇಮಂತ್ ಸೋರೆನ್ ರಾಜಕೀಯವನ್ನು ಆನುವಂಶಿಕವಾಗಿ ಪಡೆದರು. ಅವರ ತಂದೆ ಶಿಬು ಸೋರೆನ್ ಸ್ವತಃ ಮೂರು ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಇದಲ್ಲದೆ ಹೇಮಂತ್ ಅವರ ಹಿರಿಯ ಸಹೋದರ ದಿವಂಗತ ದುರ್ಗಾ ಸೋರೆನ್ ಕೂಡ ಶಾಸಕರಾಗಿದ್ದರು. ಹೇಮಂತ್ 2005 ರಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸ್ಟೀಫನ್ ಮರಾಂಡಿ ವಿರುದ್ಧ ದುಮ್ಕಾದಿಂದ ಸ್ಪರ್ಧಿಸಿ ಸೋತರು. ಜೂನ್ 2009 ರಲ್ಲಿ ಅವರು ರಾಜ್ಯಸಭೆಯ ಸದಸ್ಯರಾದರು. ನಂತರ 2009 ರ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ದುಮ್ಕಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಶಾಸಕರಾಗಿ ಆಯ್ಕೆಯಾದ ನಂತರ ಹೇಮಂತ್ ಸೋರೆನ್ ರಾಜ್ಯಸಭಾ ಸದಸ್ಯತ್ವವನ್ನು ತೊರೆದರು.
ಜಾರ್ಖಂಡ್‌ನ ಉಪ ಮುಖ್ಯಮಂತ್ರಿಯಾಗಿದ್ದರು..
ಹೇಮಂತ್ ಅವರು ಸೆಪ್ಟೆಂಬರ್ 2010 ರಿಂದ ಜನವರಿ 2013 ರವರೆಗೆ ಜಾರ್ಖಂಡ್‌ನ ಉಪ ಮುಖ್ಯಮಂತ್ರಿಯಾಗಿದ್ದರು. ಇದಾದ ನಂತರ ಹೇಮಂತ್ ಸೋರೆನ್ ಕಾಂಗ್ರೆಸ್ ಮತ್ತು ಆರ್ ಜೆಡಿ ಬೆಂಬಲದೊಂದಿಗೆ ಜಾರ್ಖಂಡ್ ಮುಖ್ಯಮಂತ್ರಿಯಾದರು. ಜುಲೈ 2013 ರಲ್ಲಿ ಅವರು ಮೊದಲ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೇಮಂತ್ ಅವರ ಮೊದಲ ಅಧಿಕಾರಾವಧಿ ಸುಮಾರು 17 ತಿಂಗಳುಗಳ ಕಾಲ ನಡೆಯಿತು.
ಇದಾದ ಬಳಿಕ 2014ರ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಸೋಲನುಭವಿಸಿ ಬಿಜೆಪಿ ಗೆದ್ದಿತ್ತು. ಆದಾಗ್ಯೂ ಸೊರೆನ್ ಬರ್ಹೈತ್ ಕ್ಷೇತ್ರದಿಂದ ಜೆಎಂಎಂ ಶಾಸಕರಾಗಿ ಆಯ್ಕೆಯಾಗಿ, ರಘುಬರ್ ದಾಸ್ ಸರ್ಕಾರದ ಅವಧಿಯಲ್ಲಿ ಅವರು ಜನವರಿ 2015 ರಿಂದ ಡಿಸೆಂಬರ್ 2019 ರವರೆಗೆ ಜಾರ್ಖಂಡ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.
ಎರಡನೇ ಅವಧಿ ಸವಾಲಾಗಿತ್ತು
ಜಾರ್ಖಂಡ್‌ನಲ್ಲಿ 2019 ರಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೊರೆನ್ ಅವರ ಜೆಎಂಎಂ ಗೆದ್ದಿದೆ. ಈ ಗೆಲುವಿನ ನಂತರ, JMM ಕಾಂಗ್ರೆಸ್ ಮತ್ತು RJD ಜೊತೆಗೆ ರಾಜ್ಯದಲ್ಲಿ ಮಹಾ ಮೈತ್ರಿ ಸರ್ಕಾರವನ್ನು ರಚಿಸಿತು. ಅದರಲ್ಲಿ ಹೇಮಂತ್ ಸೋರೆನ್ ಮುಖ್ಯಮಂತ್ರಿಯಾದರು. 29 ಡಿಸೆಂಬರ್ 2019 ರಂದು, ಹೇಮಂತ್ ಸೊರೆನ್ ಎರಡನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಹೇಮಂತ್ ಸೋರೆನ್ ಅವರ ಎರಡನೇ ಅವಧಿಯು ಸವಾಲುಗಳಿಂದ ತುಂಬಿತ್ತು. 2022ರಲ್ಲಿ ಚುನಾವಣಾ ಆಯೋಗ ಜಾರ್ಖಂಡ್‌ನ ಆಗಿನ ರಾಜ್ಯಪಾಲ ರಮೇಶ್ ಬೈಸ್‌ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗಣಿಗಾರಿಕೆ ಗುತ್ತಿಗೆ ನೀಡುವ ಮೂಲಕ ಚುನಾವಣಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶಾಸಕನಾಗಿ ಅನರ್ಹಗೊಳಿಸಬೇಕೆಂದು ಒತ್ತಾಯಿಸಿತ್ತು.
ಹೇಮಂತ್‌ನ ಸಂಕಷ್ಟ ಇಲ್ಲಿಗೇ ಮುಗಿಯಲಿಲ್ಲ. ಜನವರಿ 31, 2024ರಂದು ಭೂ ಹಗರಣದ ಆರೋಪದ ನಂತರ ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತು. ಬಂಧನಕ್ಕೂ ಮುನ್ನ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಜೂನ್ ತಿಂಗಳಲ್ಲಿ ಸೋರೆನ್ ಜಾಮೀನು ಪಡೆದರು. ಜೂನ್ 28 ರಂದು ಅವರು ಜೈಲಿನಿಂದ ಬಿಡುಗಡೆಯಾದರು. ಚಂಪೈ ಸೋರೆನ್ ಅವರು 3 ಜುಲೈ 2024 ರಂದು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜುಲೈ 4 ರಂದು ಹೇಮಂತ್ ಸೋರೆನ್ ಮೂರನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾದರು.
ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ನಂತರ ನಾಲ್ಕನೇ ಇನಿಂಗ್ಸ್
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೋರೆನ್ ಅವರ ಜೆಎಂಎಂ ನೇತೃತ್ವದ ಮೈತ್ರಿಕೂಟ 81 ಸದಸ್ಯ ಬಲದ ವಿಧಾನಸಭೆಯಲ್ಲಿ 56 ಸ್ಥಾನಗಳನ್ನು ಗಳಿಸುವ ಮೂಲಕ ಗೆದ್ದಿದೆ. ಮಹಾಮೈತ್ರಿಕೂಟ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು 24 ಸ್ಥಾನಗಳಿಗೆ ಸೀಮಿತಗೊಳಿಸಿತು. ಹೇಮಂತ್ ಸೋರೆನ್ ಬರ್ಹೈತ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಗಮ್ಲಿಲ್ ಹೆಂಬ್ರೋಮ್ ಅವರನ್ನು 39,791 ಮತಗಳ ಅಂತರದಿಂದ ಸೋಲಿಸಿದರು. ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಗಂಡೇಯ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಜಾರ್ಖಂಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಹೇಮಂತ್ ಸೋರೆನ್ ಅವರ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸದಾಗಿ ರಚನೆಯಾದ ಈ ರಾಜ್ಯದ 24 ವರ್ಷಗಳ ಇತಿಹಾಸದಲ್ಲಿ ತಲಾ ಮೂರು ಬಾರಿ ಮೂರು ಜನ ಮುಖ್ಯಮಂತ್ರಿಯಾಗಿದ್ದಾರೆ. ಇವರಲ್ಲಿ ಹೇಮಂತ್ ಸೋರೆನ್ ಅವರ ತಂದೆ ಶಿಬು ಸೊರೆನ್, ಬಿಜೆಪಿ ನಾಯಕ ಅರ್ಜುನ್ ಮುಂಡಾ ಮತ್ತು ಹೇಮಂತ್ ಸೋರೆನ್ ಸೇರಿದ್ದಾರೆ. ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಹೇಮಂತ್ ಈ ವರ್ಗವನ್ನು ಮೀರಿ ಹೋಗಲಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications