Weather Forecast: ಮುಂದಿನ ಮೂರು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ: IMD
Weather Forecast: ಈಗಾಗಲೇ ಭಾರತದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟಿಸಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದೆ. ಇನ್ನೂ ಇದೀಗ ಮತ್ತೆ ಹಲವು ಕಡೆ ಮಳೆ ಮುಂದುವರೆದಿದೆ. ಹಾಗಾದರೆ, ಮುಂದಿನ ಮೂರು ದಿನಗಳ ಕಾಲ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ 1ರಿಂದ ನವೆಂಬರ್ 2ರ ವರೆಗೆ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್‌ಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಇನ್ನೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರ್ನಾಟಕದ ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಹಲವು ರಾಜ್ಯಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿದೆ. ನವದೆಹಲಿಲ್ಲಿ ನವೆಂಬರ್ 1ರಿಂದ ನವೆಂಬರ್ 3ರವರೆಗೆ ಬೆಳಗ್ಗೆ ಮತ್ತು ರಾತ್ರಿ ವೇಳೆಗೆ ಸ್ವಲ್ಪ ಮಂಜು ಆವರಿಸಲಿದೆ ಎಂದು ತಿಳಿಸಿದೆ.
ದಕ್ಷಿಣ ಭಾರತದ ಹವಾಮಾನ ಮುನ್ಸೂಚನೆ: ನವೆಂಬರ್ 1ರಿಂದ ನವೆಂಬರ್ 4ರ ವರೆಗೆ ಕೇರಳದಲ್ಲಿ ಗುಡುಗು, ಸಿಡಿಲು ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತಮಿಳುನಾಡಿನ ಪುದುಚೇರಿ, ಕಾರೈಕಲ್‌ನಲ್ಲಿ ನವೆಂಬರ್ 1ರಿಂದ ನವೆಂಬರ್ 3ರ ವರೆಗೆ ಇದೇ ರೀತಿಯ ಹವಾಮಾನ ನಿರ್ಮಾಣವಾಗುವ ಸಾಧ್ಯತೆಯಿದೆ.
ಇನ್ನು ಕರ್ನಾಟಕದ ಹಲವೆಡೆ ನವೆಂಬರ್ 1ರಿಂದ ನವೆಂಬರ್ 2ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ತೆಲಂಗಾಣ, ಕರಾವಳಿ ಆಂಧ್ರಪ್ರದೇಶದಲ್ಲಿ ಇಂದು (ನವೆಂಬರ್ 01) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ನವದೆಹಲಿ ಹವಾಮಾನದ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ನವೆಂಬರ್ 01) ಮೋಡ ಕವಿದ ವಾತಾವರಣ ಇರಲಿದೆ. ರಾತ್ರಿ ವೇಳೆಗೆ ಮಂಜು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ತಿಳಿಸಿದೆ. ಇನ್ನು ರಾಜ್ಯದಲ್ಲಿ ದಟ್ಟ ಹೊಗೆಯಂತಹ ವಾತಾವರಣ ನಿರ್ಮಾಣ ಆಗುತ್ತಿದೆ. ಇದರ ನಡುವೆಯೂ ನಿಷೇಧವಿದ್ದರೂ ಸಹ ಜನರು ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಇದರಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿದೆ.
ಅದರಲ್ಲೂ ದ್ವಾರಕಾ, ಲಜಪತ್ ನಗರ ಮತ್ತು ಕಲ್ಕಾಜಿಯಂತಹ ಪ್ರದೇಶಗಳಲ್ಲಿ ಪಟಾಕಿಗಳಿಂದಾಗಿ ಮಾಲಿನ್ಯದ ಮಟ್ಟವು ಹೆಚ್ಚು ದಾಖಲಾಗಿದೆ. ಮೂಲಗಳ ಪ್ರಕಾರ, ಜಹಾಂಗೀರ್‌ಪುರಿ ಮತ್ತು ಆನಂದ್ ವಿಹಾರ್‌ನಲ್ಲಿ ಗಾಳಿಯ ಗುಣಮಟ್ಟ ತುಂಬಾ ಹದಗೆಟ್ಟಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ದಾಖಲಾದ ಕಟ್ಟ ಗುಣಮಟ್ಟದ ಗಾಳಿಯಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications