ಲಾಹೋರ್‌, ಮುಂಬೈನಲ್ಲಿ ಮಳೆಯು ಸೃಷ್ಟಿಸಿದ ಅವಾಂತರ ನೋಡಿ ಹೇಗಿದೆ

ಲಾಹೋರ್‌, ಜು.4: ಪಾಕಿಸ್ತಾನದ ಲಾಹೋರ್‌ನಲ್ಲಿ ವರುಣನ ಆರ್ಭಟ ತೀವ್ರವಾಗಿದೆ. ಸುರಿಯುತ್ತಿರುವ ಭಾರಿ ಮಳೆಗೆ ಅಲ್ಲಿನ ಜನತೆ ನಲುಗಿ ಹೋಗಿದ್ದಾರೆ. ಒಂದು ಮಳೆಗೆ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ನಗರವನ್ನು ಸಹಜ ಸ್ಥಿಗೆ ತರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.

ರೆಸಿಡೆನ್ಶಿಯಲ್‌ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ರಸ್ತೆಗಳು ನದಿಯಾಗಿ ಪರಿವರ್ತನೆಗೊಂಡಿದೆ, ಶಾಲಾ ಮಕ್ಕಳು, ವೃದ್ಧರು ಯಾರೂ ಕೂಡ ಆ ನೀರಿನಲ್ಲಿ ನಡೆದು ಹೋಗಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮಳೆಯಾಗಿದೆ.

ಮಳೆಯಷ್ಟೇ ಅಲ್ಲದೆ ರಸ್ತೆ ಮಧ್ಯೆ ಮಧ್ಯೆ ಕಂದಕಗಳು ನಿರ್ಮಾಣವಾಗಿದೆ, ರಸ್ತೆಗಳು ಬಿರುಕುಬಿಟ್ಟಿದೆ, ಅಲ್ಲಲ್ಲಿ ಕುಸಿದು ವಾಹನ ಸಂಚಾರವೂ ಸ್ಥಗಿತಗೊಂಡಿದೆ. ಮಳೆ ಅಲ್ಲಿರುವ ಕೃಷಿಯನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಪ್ರತಿವರ್ಷವು ಪಾಕಿಸ್ತಾನದ ಲಾಹೋರ್‌ನಲ್ಲಿ ಮಳೆ ಬಂದರೆ ಇಂಥದ್ದೇ ಸಮಸ್ಯೆ ಉದ್ಭವವಾಗುತ್ತದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಜುಲೈ ತಿಂಗಳಲ್ಲಿ ಮಳೆಯ ಅಬ್ಬರ ಇನ್ನಷ್ಟು ಹೆಚ್ಚಲಿದೆ, ಮುಂಗಾರಿಗೆ ಸಂಬಂಧಿಸಿದಂತೆ ಕಳಪೆ ಯೋಜನೆಗಳನ್ನು ಕೈಗೊಳ್ಳುವುದರಿಂದ ಈ ರೀತಿ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಪಾಕಿಸ್ತಾನದಲ್ಲಿ ಮುಂಗಾರು ಜುಲೈನಿಂದ ಸೆಪ್ಟೆಂಬರ್‌ ತಿಂಗಳವರೆಗೂ ಮುಂದುವರೆಯಲಿದೆ.ಇನ್ನು ಶ್ರೀನಗರದಲ್ಲಿ ಕೂಡ ಮಳೆಯ ಅಬ್ಬರ ಜೋರಾಗಿದ್ದು ಸಂಚಾರ ಅಸ್ತವ್ಯವಸ್ತವಾಗಿದೆ.

ಚಿತ್ರಗಳು : ದೇಶದಲ್ಲಿ ಮುಂಗಾರು ಮಳೆಯ ಚಿತ್ತಾರ

ಮುಂಬೈನಲ್ಲಿ ಸಹಜ ಮಳೆಗಿಂತ ಐದು ಪಟ್ಟು ಹೆಚ್ಚು ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 230ಕ್ಕೂ ಹೆಚ್ಚು ಮಿಲಿಮೀಟರ್‌ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೀವನ ಹಾನಿಯಷ್ಟೇ ಅಲ್ಲ ಕಟ್ಟಡಗಳ ಬಿರುಕು ಹರಿದುಹೋಗದ ನೀರಿನಿಂದಾಗಿ ಆದ ಅವಾಂತರಗಳು ದೊಡ್ಡದು. ವಾಹನ ಸಂಚಾರ ಹಾಗೂ ರೈಲ್ವೆ ಸೇವೆಗಳಿಗೂ ಧಕ್ಕೆಯಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ರೀತಿಯ ಮಳೆ ಬಂದು ಮುಂಬೈ ರಸ್ತೆಗಳನ್ನು ನದಿಯನ್ನಾಗಿಸಿತ್ತು. ಇನ್ನು 2005ರ ಜುಲೈ ತಿಂಗಳಲ್ಲಿ ಬಿದ್ದ ಮಹಾಮಳೆಯ ನೆನಪು ಮುಂಬೈ ನಿವಾಸಿಗಳಿಗೆ ಇನ್ನೂ ಇದೆ. 24 ಗಂಟೆಗಳಲ್ಲಿ 944 ಮಿ.ಮೀ ಸುರಿದ ಮಳೆಯಿಂದಾಗಿ ಆಗ 500 ಮಂದಿ ಜೀವ ಕಳೆದುಕೊಂಡಿದ್ದರು. ಈಓ ಬಗೆಯ ಭಾರಿ ಮಳೆಯಿಂದಾಗುವ ಹಾವಳಿಯ ನಿರ್ವಹಣೆಯಲ್ಲಿ ಪ್ಲಾಸ್ಟಿಕ್‌ ನಿರ್ವಹಣೆಯೂ ಮುಖ್ಯವಾಗಿದೆ.

ಇದೇನು ರಸ್ತೆಯೋ ಗುಹೆಯೋ

ಇದೇನು ರಸ್ತೆಯೋ ಗುಹೆಯೋ

ಲಾಹೋರ್‌ನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಒಂದೆಡೆ ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಜಲಾವೃತವಾಗಿದ್ದರೆ ಇನ್ನೊಂದೆಡೆ ರಸ್ತೆ ಬಿರುಕು ಬಿಟ್ಟಿದ್ದು ಅಲ್ಲಲ್ಲಿ ರಸ್ತೆ ಕುಸಿದು ದೊಡ್ಡ ಕಂದಕ ನಿರ್ಮಾಣವಾಗಿದೆ.

ಗುಡ್ಡ ಕುಸಿತ, ಕಾರಿನ ಮೇಲೆ ಬಿದ್ದ ಕಲ್ಲು ಬಂಡೆ

ಗುಡ್ಡ ಕುಸಿತ, ಕಾರಿನ ಮೇಲೆ ಬಿದ್ದ ಕಲ್ಲು ಬಂಡೆ

ಶಿಮ್ಲಾದಲ್ಲಿ ಕಳೆದ ಮೂರು ತಿಂಗಳಿನಿಂದ ನೀರಿಲ್ಲದೆ ಜನರು ಪರಿತಪಿಸುತ್ತಿದ್ದರು ಇದೀಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕಂಗಾಲಾಗಿದ್ದು, ಸಾಕಪ್ಪಾ ಮಳೆ ಎನ್ನುವಂತಾಗಿದೆ.

ಭಾರಿ ಮಳೆಗೆ ತುಂಬಿದ ಒಳಚರಂಡಿ, ರಸ್ತೆ ತುಂಬಾ ನೀರು

ಭಾರಿ ಮಳೆಗೆ ತುಂಬಿದ ಒಳಚರಂಡಿ, ರಸ್ತೆ ತುಂಬಾ ನೀರು

ಮುಂಬೈನಲ್ಲಿ ಮುಂಗಾರು ಚುರುಕುಗೊಂಡಿದೆ. ಒಳಚರಂಡಿ ತುಂಬಿ ಹರಿದಿದ್ದು, ರಸ್ತೆಯ ತುಂಬೆಲ್ಲಾ ಮಳೆಯ ನೀರಿನ ಜತೆಗೆ ಚರಂಡಿ ನೀರು ಕೂಡ ಸೇರಿಕೊಂಡು ಮತ್ತೊಂದು ಅವಾಂತರ ಸೃಷ್ಟಿಸಿದೆ.

ಇದು ರಸ್ತೆಯೋ ಸಮುದ್ರವೋ

ಇದು ರಸ್ತೆಯೋ ಸಮುದ್ರವೋ

ಮುಂಬೈನಲ್ಲಿ ಕಣ್ಣಾಡಿಸಿದಷ್ಟು ದೂರವೋ ಸಮುದ್ರವೆಂಬಂತೆ ರಸ್ತೆಯ ತುಂಬಾ ನೀರು ತುಂಬಿಕೊಂಡಿದೆ. ವಾಹನ ಸಂಚಾರವಿರದೆ ನಡೆದುಕೊಂಡೂ ತೆರಳಲಾಗದೆ ಇರುವಂತಹ ಪರಿಸ್ಥಿತಿಯನ್ನು ಈ ಚಿತ್ರದ ಮೂಲಕ ನೀವು ವೀಕ್ಷಿಸಬಹುದಾಗಿದೆ.

ಶ್ರೀನಗರದಲ್ಲಿ ಗಾಳಿ, ಮಳೆಗೆ ಕಾರುಗಳು ಜಖಂ

ಶ್ರೀನಗರದಲ್ಲಿ ಗಾಳಿ, ಮಳೆಗೆ ಕಾರುಗಳು ಜಖಂ

ಲಾಹೋರ್‌, ಮುಂಬೈ, ಕರ್ನಾಟಕ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮುಂಗಾರು ಚುರುಕುಗೊಂಡಿದೆ, ಶ್ರೀನಗರದಲ್ಲಿ ಮಂಗಳವಾರ ಗಾಳಿ ಮಳೆಗೆ ಕಟ್ಟಡಗಳು ಬಿರುಬಿಟ್ಟಿವೆ, ಕೆಲವು ಕಟ್ಟಡಗಳು ಧರೆಗುರುಳಿವೆ ಇದರಿಂದ ಸಾಕಷ್ಟು ಕಾರುಗಳು ಜಖಂಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+