ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಡಿ.8ಕ್ಕೆ ಭಾರೀ ಮಳೆ ಸಾಧ್ಯತೆ: 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

|
Google Oneindia Kannada News

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಡಿಸೆಂಬರ್ 8 ಕ್ಕೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬಳಿಕ ಮಳೆ ತರಿಸುವ ಮೋಡಗಳು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದ್ದು ತೀವ್ರಗೊಳ್ಳಬಹುದು ಎಂದಿದೆ. ಈ ಅವಧಿಯಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ತಮಿಳುನಾಡಿನ ವಿಲ್ಲುಪುರಂ, ಚೆಂಗಲ್ಪಟ್ಟು, ಕಡಲೂರು, ಕಾಂಚೀಪುರಂ, ತಿರುವಳ್ಳೂರು, ಅರಿಯಲೂರ್, ಪೆರಂಬಲೂರ್, ಚೆನ್ನೈ, ಕಲ್ಲಕುರಿಚಿ, ಮೈಲಾಡುತುರೈ, ತಂಜಾವೂರು, ತಿರುವಾರೂರ್ ಮತ್ತು ನಾಗಪಟ್ಟಣಂ ಸೇರಿದಂತೆ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

"ಡಿಸೆಂಬರ್ 6 ರಂದು ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ (WML) ನಿರ್ಮಾಣವಾಗಲಿದೆ. ಇದು ಸೈಕ್ಲೋನಿಸ್ ಚಂಡಮಾರುತ (CS) ಆಗಿ ತೀವ್ರಗೊಳ್ಳಲಿದ್ದು ಡಿಸೆಂಬರ್ 8 ರಂದು ಬೆಳಿಗ್ಗೆ ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ, ಉತ್ತರ ತಮಿಳುನಾಡಿಗೆ ತಲುಪಲಿದೆ" ಎಂದು ಹವಾಮಾನ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ತಮಿಳುನಾಡಿನಲ್ಲಿ ಡಿ.8ಕ್ಕೆ ಭಾರೀ ಮಳೆ ಸಾಧ್ಯತೆ

ತಮಿಳುನಾಡಿನಲ್ಲಿ ಡಿ.8ಕ್ಕೆ ಭಾರೀ ಮಳೆ ಸಾಧ್ಯತೆ

ಇದರಿಂದ ಡಿಸೆಂಬರ್ 7 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮೂರು ಸ್ಥಳಗಳ ಪ್ರದೇಶಗಳಲ್ಲಿ ಮಳೆಯಾಗುತ್ತದೆ. ಮಳೆಯ ಜೊತೆಗೆ ಗುಡುಗು ಮತ್ತು ಮಿಂಚು ಸಹ ಇರುತ್ತದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ. ಡಿಸೆಂಬರ್ 8 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಪ್ರತ್ಯೇಕವಾದ ಗುಡುಗು ಮತ್ತು ಮಿಂಚು ಸಂಭವಿಸುವ ಸಾಧ್ಯತೆಯೊಂದಿಗೆ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಭಾರೀ ಮಳೆಯಾಗುವ ಸಾಧ್ಯತೆ

ಇದನ್ನು ಹೊರತುಪಡಿಸಿ ತಮಿಳುನಾಡಿನ ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ತಮಿಳುನಾಡಿಗೆ ತೆರಳಲಿರುವ ಎನ್‌ಡಿಆರ್‌ಎಫ್

ತಮಿಳುನಾಡಿಗೆ ತೆರಳಲಿರುವ ಎನ್‌ಡಿಆರ್‌ಎಫ್

ಹೀಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಆರು ತಂಡಗಳನ್ನು ಡಿಸೆಂಬರ್ 8ರ ಮೊದಲು ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ನಾಗಪಟ್ಟಣಂ, ತಂಜಾವೂರು, ತಿರುವರೂರ್, ಕಡಲೂರು, ಮೈಲಾಡುತುರೈ ಮತ್ತು ಚೆನ್ನೈನಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ತಮಿಳುನಾಡು ಆಡಳಿತ ಸಹಕಾರ

ತಮಿಳುನಾಡು ಆಡಳಿತ ಸಹಕಾರ

"ಅರಕ್ಕೋಣಂನಲ್ಲಿರುವ ನಮ್ಮ 24-7 ನಿಯಂತ್ರಣ ಕೊಠಡಿಯು ಗಡಿಯಾರದ ಸುತ್ತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ತಮಿಳುನಾಡು ಆಡಳಿತದೊಂದಿಗೆ ನಿಕಟ ಸಹಯೋಗದೊಂದಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

English summary
Heavy rainfall is forecast in 13 districts of Tamil Nadu on December 8 due to depression in Bay of Bengal and 6 NDRF teams have been deployed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X