ಉತ್ತರ ಭಾರತದಲ್ಲಿ ಮಳೆ ಭೀಕರತೆಗೆ ಮೂರೇ ದಿನದಲ್ಲಿ 26 ಬಲಿ
Recommended Video

ನವದೆಹಲಿ, ಸೆಪ್ಟೆಂಬರ್ 04: ಕೇರಳದ ನಂತರ ಮಳೆರಾಯ ತನ್ನ ವಕ್ರದೃಷ್ಠಿಯನ್ನು ಉತ್ತರ ಭಾರತದತ್ತ ನೆಟ್ಟಿದ್ದಾನೆ. ಮಳೆಯ ರೌದ್ರಾವತಾರಕ್ಕೆ ಅಲ್ಲಿ ಮೂರೇ ದಿನಕ್ಕೆ 26 ಜನ ಜೀವ ಕಳೆದುಕೊಂಡಿದ್ದಾರೆ.
ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್‌ಗಳಲ್ಲಿಯೂ ಮಳೆಯ ಆರ್ಭಟಕ್ಕೆ ಹಲವು ಜನ ಸೂರು ಕಳೆದುಕೊಂಡಿದ್ದಾರೆ. ಜೊತೆಗೆ ಜೀವ ಹಾನಿಯೂ ಆಗಿದೆ.
ನವದೆಹಲಿ, ಮಹಾರಾಷ್ಟ್ರದ ಕೆಲವು ನಗರಗಳು, ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಮಧ್ಯಪ್ರದೇಶದಲ್ಲಿ ಹುಟ್ಟಿ ಉತ್ತರ ಪ್ರದೇಶದ ಕಡೆ ಹರಿಯುವ ಬಿತ್ವಾ ನದಿ ಪ್ರವಾಹಗೊಂಡಿದ್ದು ನೆರೆ ಪರಿಸ್ಥಿತಿಗೆ ನೂರಾರು ಮನೆಗಳು ಹಾನಿಯಾಗಿವೆ.

ಚೀನಾದ ದೇಶದಿಂದ ಬ್ರಹ್ಮಪುತ್ರ ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವ ಕಾರಣ ಅಸ್ಸಾಂನಲ್ಲಿ ಪ್ರವಾಹ ಎದುರಾಗಿದೆ. ಚೀನಾದಲ್ಲೂ ಪ್ರವಾಹ ಪರಿಸ್ಥಿತಿ ಇದ್ದು ಈಗಾಗಲೇ ಅಲ್ಲೂ ಕೂಡ ಮಳೆ ಭಾರಿ ಹಾನಿಯನ್ನು ಮಾಡಿದೆ.
ನಾಗಾಲ್ಯಾಂಡ್‌ನಲ್ಲಿ ಈಗಾಗಲೇ 4000 ಜನರು ನಿರಾಶ್ರಿತರ ಶಿಬಿರಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಕೇಂದ್ರದ ಗೃಹ ಮಂತ್ರಿಗಳು ಪ್ರಕೃತಿ ವಿಕೋಪ ರಕ್ಷಣೆ ಪಡೆಯನ್ನು ನಾಗಾಲ್ಯಾಂಡ್‌ಗೆ ಕಳುಹಿಸಿದ್ದಾರೆ.












Click it and Unblock the Notifications