IMD Weather Forecast: ವೈಪರೀತ್ಯಗಳ ಪ್ರಭಾವ! ನ.5ರವರೆಗೆ ಭಾರೀ ಮಳೆ, ಬಳಿಕ ಅಧಿಕ ತಾಪಮಾನ

ನವದೆಹಲಿ, ನವೆಂಬರ್ 02: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ವ್ಯಾಪಕ ಬದಲಾವಣೆಗಳು ಘಟಿಸುತ್ತಿರುವ ಪರಿಣಾಮವಾಗಿ ದೇಶದ ಹಲವಾರು ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ವೈಪರೀತ್ಯಗಳ ಅಬ್ಬರ ಸಂಪೂರ್ಣವಾಗಿ ತಗ್ಗಲಿದ್ದು, ಹಿಂಗಾರು ಮಳೆ ಪ್ರಭಾವ ಕುಸಿಯಲಿದೆ. ದೇಶಾದ್ಯಂತ ತಾಪಮಾನದ ಕಾವು ಹೆಚ್ಚಾಗಲಿದೆ. ಅಲ್ಲಿಯವರೆಗೆ ಕೆಲವೆಡೆ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನಾ ವರದಿ ಭಾನುವಾರ ತಿಳಿಸಿದೆ.

ವೈಪರೀತ್ಯಗಳ ಪ್ರಭಾವದಿಂದ ಇಂದು ನವೆಂಬರ್ 2ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ ನಾಲ್ಕು ದಿನಗಳಲ್ಲಿ ಈ ಪ್ರದೇಶದಲ್ಲಿ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ, ಮಿಂಚು-ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ. ನಂತರದ ಮೂರು ದಿನಗಳಲ್ಲಿ (ನವೆಂಬರ್ 3,4 &5) ಪಶ್ಚಿಮ ಮಧ್ಯಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಉತ್ತಮ ಮಳೆ ಆಗಲಿದೆ.

Heavy Rain and Thunderstorm Alert Across India as New Weather Systems Form Soon

ಇಂದು ನವೆಂಬರ್ 2ರಂದು ಗುಜರಾತ್ ರಾಜ್ಯದಲ್ಲಿ ಮಿಂಚು-ಗುಡುಗು ಸಹಿತ ಬಿರುಗಾಳಿ ಮಳೆ ಆಗಲಿದೆ. ಮುಂದುವರಿದು ನವೆಂಬರ್ 4 ಮತ್ತು 5ರಂದು ಮಧ್ಯ ಮಹಾರಾಷ್ಟ್ರ ಹಾಗೂ ನವೆಂಬರ್ 5ರಂದು ಕೊಂಕಣ ಮತ್ತು ಗೋವಾದಲ್ಲಿ, ನವೆಂಬರ್ 4ರಂದು ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ಮಿಂಚು-ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆ ಸುರಿಯಲಿದೆ. ಪಶ್ಚಿಮ ರಾಜಸ್ಥಾನದಲ್ಲಿ ಹಾಗೂ ನವೆಂಬರ್ 3 ಜೋರು ಮಳೆ ನಿರೀಕ್ಷೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ನವೆಂಬರ್ 6ರವರೆಗೆ ಉತ್ತರ ಪಶ್ಚಿಮ ಭಾರತದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯ ಜೊತೆಗೆ ಹಿಮಪಾತವೂ ಸಂಭವಿಸಬಹುದು ಅಂತಲೂ ಹೇಳಲಾಗುತ್ತಿದೆ. ಇನ್ನೂ ಸಮುದ್ರ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆ ನೋಡುವುದಾದರೆ,
ಪೂರ್ವ ಮತ್ತು ಈಶಾನ್ಯ ಅರಬ್ಬಿ ಸಮುದ್ರದ ಮೇಲೆ ಇದ್ದ ಕಡಿಮೆ ಒತ್ತಡದ ಪ್ರದೇಶ ನವೆಂಬರ್ 2ರಂದು ದುರ್ಬಲಗೊಂಡಿದೆ. ಈ ಪ್ರದೇಶದ ಚಂಡಮಾರುತ ಪರಿಚಲನೆ ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದಿನ 24 ಗಂಟೆಗಳಲ್ಲಿ ಅದು ಸಹ ತೀವ್ರತೆ ಕಳೆದುಕೊಳ್ಳಲಿದೆ.

ದಕ್ಷಿಣ ಮ್ಯಾನ್ಮಾರ್ ಕರಾವಳಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಉಂಟಾದ ಚಂಡಮಾರುತದ ಪ್ರಭಾವದಿಂದ ಬಂಗಾಳ ಕೊಲ್ಲಿಯ ಪೂರ್ವ ಮಧ್ಯ ಭಾಗದಲ್ಲಿ ಹೊಸ ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಂಡಿದೆ. ಇದು ಮುಂದಿನ ಎರಡು ದಿನದಲ್ಲಿ ಬಾಂಗ್ಲಾದೇಶ ಕರಾವಳಿಯತ್ತ ಸಾಗಲಿದೆ. ನವೆಂಬರ್ 3ರ ರಾತ್ರಿ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹೊಸ ಪಶ್ಚಿಮ ಅಲೆ ಪ್ರಭಾವ ಬೀರುವ ಸಾಧ್ಯತೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+