Thane Fire Breaks Out: ಥಾಣೆಯ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬೆಂಕಿ, ಅಪಾರ ಹಾನಿ ಆತಂಕ- ವಿಡಿಯೋ
ಥಾಣೆ ಏಪ್ರಿಲ್ 19: ಮಹಾರಾಷ್ಟ್ರದ ಥಾಣೆ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ವಿಪತ್ತು ನಿರ್ವಹಭಾ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು. ಜೊತೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಭಾರೀ ಹಾನಿಯಾಗಿರುವ ನಿರೀಕ್ಷೆ ಇದೆ. ಕಪೂರ್ಬಾವಾಡಿಯ ಘೋಡಬಂದರ್ ರಸ್ತೆಯಲ್ಲಿರುವ ಓರಿಯನ್ ಬ್ಯುಸಿನೆಸ್ ಪಾರ್ಕ್ ಮತ್ತು ಪಕ್ಕದ ಸಿನಿ ವಂಡರ್ ಮಾಲ್‌ನ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ದೈತ್ಯ ರೂಪ ಪಡೆಯಿತು. ಬೆಂಕಿಯ ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸಿನಿ ವಂಡರ್ ಮಾಲ್ ಮತ್ತು ಕೊರಿಯನ್ ಬ್ಯುಸಿನೆಸ್ ಪಾರ್ಕ್‌ನ ಸ್ಥಳಕ್ಕೆ ಧಾವಿಸಿದರು. ವಿಪತ್ತು ನಿರ್ವಹಣಾ ತಂಡವನ್ನೂ ಸ್ಥಳಕ್ಕೆ ಕರೆಸಲಾಯಿತು.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವರದಿಗಳ ಪ್ರಕಾರ, ಒರಿಯನ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಗಳು ಯಶಸ್ವಿಯಾಗಿವೆ. ಸಿನಿ ವಂಡರ್ ಮಾಲ್ ಪಕ್ಕದಲ್ಲಿರುವ ಗ್ರೌಂಡ್ ಪ್ಲಸ್ ಐದು ಅಂತಸ್ತಿನ ಕಟ್ಟಡ ಬೆಂಕಿಗಾಹುತಿಯಾಗಿದೆ. ಈ ಪ್ರದೇಶದಲ್ಲು 60 ಕ್ಕೂ ಹೆಚ್ಚು ಅಂಗಡಿಗಳು ಮತ್ತು ಕಚೇರಿಗಳು ಇವೆ.
#WATCH | Maharashtra: Fire broke out in the buildings of Orion Business Park & adjacent Cine Wonder Mall in Kapurbawadi, Ghodbunder Road in Thane. Several fire tenders at the spot. Police, disaster management and fire brigade officers at the spot.
— ANI (@ANI) April 18, 2023
Dousing operation underway. pic.twitter.com/oXQS6Rygem
ಬೆಂಕಿಯ ಬಗ್ಗೆ ಮಾಹಿತಿ ನೀಡಿದ ಥಾಣೆ ಮಹಾನಗರ ಪಾಲಿಕೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಅವಿನಾಶ್ ಸಾವಂತ್, ರಾತ್ರಿ 8.30 ರ ಸುಮಾರಿಗೆ ಸಂಕೀರ್ಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಸ್ವಲ್ಪ ಸಮಯದಲ್ಲೇ ಅದು ಹತ್ತಿರದ ಮಾಲ್‌ಗೂ ವ್ಯಾಪಿಸಿತು. ಇದರಿಂದ ಅಗ್ನಿಶಾಮಕ ಸಿಬ್ಬ್ಂದಿ ಸ್ಥಳಕ್ಕಾಗಮಿಸುವ ಹೊತ್ತಿಗೆ ಬೆಂಕಿ ಎಲ್ಲೆಡೆ ಹರಡಿಕೊಂಡಿತ್ತು. ಸದ್ಯ ಬೆಂಕಿ ನಂದಿಸಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications