
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆ
ದೆಹಲಿ ಡಿಸೆಂಬರ್ 8: ಸಂಸತ್ತಿನ ಚಳಿಗಾಲದ ಮೊದಲ ದಿನದ ಅಧಿವೇಶನದಲ್ಲಿ ಹಲವಾರು ವಿಚಾರಗಳು ಪ್ರಸ್ತಾಪವಾದವು. ಜೊತೆಗೆ ಕಳೆದ ಕೆಲ ದಿನಗಳಿಂದ ಹೆಚ್ಚಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಸಂಸತ್ತಿನಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಎರಡೂ ರಾಜ್ಯಗಳ ಹಲವಾರು ಸಂಸದರು ಈ ವಿಷಯವನ್ನು ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಕಳೆದ ಕೆಲ ದಿನಗಳಿಂದ ತಾರಕಕ್ಕೇರುತ್ತಿದೆ. ಕರ್ನಾಟಕ ವಿದ್ಯಾರ್ಥಿಯ ಮೇಲೆ ಹಲ್ಲೆ, ಬಸ್‌ಗಳ ಮೇಲೆ ಕಲ್ಲು ತೂರಾಟ ಇಂತೆಲ್ಲಾ ವಿಚಾರದಲ್ಲಿ ಎಂಇಎಸ್ ಕೃತ್ಯಗಳು ಹೆಚ್ಚಾಗುತ್ತಿವೆ. ಇದನ್ನು ಖಂಡಿಸಿ ಕರ್ನಾಟಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಹೀಗಾಗಿ ಗಡಿ ವಿವಾದ ಇತ್ಯಾರ್ಥಕ್ಕೆ ಎರಡೂ ಸರ್ಕಾರಗಳು ಮುಂದಾಗಿವೆ.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಈ ವಿಚಾರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಲೆ ಅವರು ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದರು. ಕೇಂದ್ರ ಗೃಹ ಸಚಿವಾಲಯದ ಮಧ್ಯಪ್ರವೇಶಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಅವರು ಮಹಾರಾಷ್ಟ್ರವನ್ನು ಒಡೆಯುವ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಸಂಸದರ ಹೇಳಿಕೆಗಳನ್ನು ಖಂಡಿಸಿದರು.
"ಕಳೆದ 10 ದಿನಗಳಲ್ಲಿ ಮಹಾರಾಷ್ಟ್ರವನ್ನು ಒಡೆಯಲು ಸಂಚು ರೂಪಿಸಲಾಗಿದೆ. ಈ ವಿಚಾರದಲ್ಲಿ ಅಮಿತ್ ಶಾ ಮಧ್ಯಪ್ರವೇಶಿಸಬೇಕು. ಮಹಾರಾಷ್ಟ್ರದ ಜನರು ಈ ಪ್ರದೇಶದಲ್ಲಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಮತ್ತು ಸಂಬಂಧವನ್ನು ಹೊಡೆಯಲು ನೋಡುತ್ತಿದ್ದಾರೆ'' ಎಂದು ಹೇಳಿದರು.
"ಕರ್ನಾಟಕ ಸಿಎಂ ಮಹಾರಾಷ್ಟ್ರವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಎರಡೂ ರಾಜ್ಯಗಳು ಬಿಜೆಪಿ ಆಡಳಿತದಲ್ಲಿದೆ. ನಿನ್ನೆ ಮಹಾರಾಷ್ಟ್ರದ ಜನರು ಕರ್ನಾಟಕದವರನ್ನು ಥಳಿಸಿದ್ದಾರೆ. ಇದನ್ನು ಅನುಮತಿಸಲಾಗುವುದಿಲ್ಲ. ಇದು ಒಂದೇ ದೇಶ" ಎಂದು ಸುಲೆ ಆಕ್ರೋಶಗೊಂಡರು.

ಹಾವೇರಿಯ (ಕರ್ನಾಟಕ) ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು, ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಮಹಾರಾಷ್ಟ್ರದ ಯಾವುದೇ ಸಂಸದರಿಗೆ ಈ ವಿಷಯದ ಬಗ್ಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಬಾರದು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದರು. "ಮಹಾರಾಷ್ಟ್ರದ ರಾಜಕಾರಣಿಗಳು ವಿಶೇಷವಾಗಿ ವಿರೋಧ ಪಕ್ಷದವರು. ಭಾಷಾ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಬಂದಾಗ ಆರೋಪಿಗಳು" ಎಂದು ಉದಾಸಿ ಹೇಳಿದರು.
ಮರಾಠಿ ಮಾತನಾಡುವ ಜನರ ಮೇಲೆ ಕರ್ನಾಟಕ ಸರ್ಕಾರ ನಡೆಸುತ್ತಿರುವ ದೌರ್ಜನ್ಯಗಳು ಅನ್ಯಾಯದ್ದು ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸಂಸದ ವಿನಾಯಕ ರಾವತ್ ಆರೋಪಿಸಿದರು. "ಸಚಿವರು ಬರದಂತೆ ಅವರು ತಡೆಯುತ್ತಿದ್ದಾರೆ. ಇದು ಅನ್ಯಾಯದ ಕ್ರಮ ಮತ್ತು ಮಹಾರಾಷ್ಟ್ರದ ಜನತೆಗೆ ವಿರುದ್ಧ. ಇದನ್ನು ಬಲವಾಗಿ ಖಂಡಿಸುತ್ತೇವೆ" ಎಂದರು.