ನೀರಿನ ಸಮಸ್ಯೆ ಬಗೆಹರಿಸಿದ IPS ಅಧಿಕಾರಿ ಶ್ರದ್ಧಾ ಪಾಂಡೆಗೆ ದಿವ್ಯಾಂಗ ಮಹಿಳೆಯಿಂದ ಭಾವುಕ ಧನ್ಯವಾದ

ಪೊಲೀಸ್ ಇಲಾಖೆ ಎಂದರೆ ಕೇವಲ ಕಟ್ಟುನಿಟ್ಟಿನ ನಿಯಮಗಳು ಮತ್ತು ಅಪರಾಧಿಗಳನ್ನ ಹಿಡಿದು ಜೈಲಿಗೆ ಹಾಕುವವರು ಎಂದುಕೊಳ್ಳುವವರೇ ಹೆಚ್ಚು. ಆದರೆ, ಆ ಖಾಕಿ ಸಮವಸ್ತ್ರದ ಹಿಂದೆಯೂ ಒಂದು ಕರುಣಾಮಯಿ ಹೃದಯವಿರುತ್ತದೆ ಎಂಬುದನ್ನು ಉತ್ತರ ಪ್ರದೇಶದ ಕಾನ್ಪುರ ದೇಹತ್‌ನ ಪೊಲೀಸ್ ವರಿಷ್ಠಾಧಿಕಾರಿ ಸಾಬೀತುಪಡಿಸಿದ್ದಾರೆ.

ದಿವ್ಯಾಂಗ ಮಹಿಳೆಯೊಬ್ಬರ ಕಷ್ಟಕ್ಕೆ ಮಿಡಿದು, ಅವರ ಕುಡಿಯುವ ನೀರಿನ ಸಮಸ್ಯೆಯನ್ನ ಬಗೆಹರಿಸುವ ಮೂಲಕ ಐಪಿಎಸ್ ಅಧಿಕಾರಿ ಶ್ರದ್ಧಾ ಪಾಂಡೆ ಅವರು ಮಾನವೀಯತೆ ಮುಖ್ಯ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.

Kanpur

ಉತ್ತರ ಪ್ರದೇಶದ ಕಾನ್ಪುರ ದೇಹತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನೀತು ದ್ವಿವೇದಿ ಎಂಬ ಮಹಿಳೆ ದೈಹಿಕವಾಗಿ ವಿಕಲಚೇತನರಾಗಿದ್ದು, ಊರುಗೋಲಿನ ಸಹಾಯದಿಂದ ನಡೆಯುತ್ತಾರೆ. ಕಳೆದ ಎರಡು ತಿಂಗಳುಗಳಿಂದ ಇವರ ಮನೆಯ ನೀರಿನ ಸಂಪರ್ಕ ಕಡಿತಗೊಂಡಿತ್ತು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಅವರು, ಈ ಸಮಸ್ಯೆಯನ್ನ ಬಗೆಹರಿಸುವಂತೆ ಸಂಬಂಧಪಟ್ಟ ಜಲಮಂಡಳಿ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿದ್ದರು.

ಆದರೆ, ಎಷ್ಟೇ ಬಾರಿ ಮನವಿ ಮಾಡಿದರೂ, ಅವರ ಸಮಸ್ಯೆಗೆ ಸ್ಪಂದಿಸುವ ಸೌಜನ್ಯವನ್ನ ಯಾವೊಬ್ಬ ಅಧಿಕಾರಿಯೂ ತೋರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹಿಳೆಯ ತುಂಬ ಕಷ್ಟವಾಗುತ್ತಿತ್ತು.

ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಎಲ್ಲ ಕಡೆಯಿಂದಲೂ ನಿರಾಸೆಗೊಂಡು ಕಂಗೆಟ್ಟಿದ್ದ ನೀತು ದ್ವಿವೇದಿ, ಅಂತಿಮವಾಗಿ ಕಾನ್ಪುರ ದೇಹತ್ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿಯ ಮೆಟ್ಟಿಲೇರಿದರು. ನೀರಿನ ಸಂಪರ್ಕ ಕಡಿತಗೊಂಡಿರುವ ವಿಷಯ ಮೂಲತಃ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಲ್ಲ. ಆದರೂ, ದಿವ್ಯಾಂಗ ಮಹಿಳೆಯ ಕಷ್ಟವನ್ನ ಆಲಿಸಿದ ಐಪಿಎಸ್ ಅಧಿಕಾರಿ ಶ್ರದ್ಧಾ ಪಾಂಡೆ ಅವರು ಆಕೆಯನ್ನ ಹುಸಿ ಭರವಸೆ ಕೊಟ್ಟು ವಾಪಸ್ ಕಳುಹಿಸಲಿಲ್ಲ.

ಬದಲಿಗೆ, ಸ್ಥಳೀಯ ಠಾಣೆಯ ಪೊಲೀಸರನ್ನು ನೀತು ಅವರ ಮನೆಗೆ ಕಳುಹಿಸಿ ಪರಿಶೀಲನೆ ನಡೆಸಿದರು. ಜತೆಗೆ, ಜಲಮಂಡಳಿಯ ಅಧಿಕಾರಿಗಳೊಂದಿಗೆ ಖುದ್ದಾಗಿ ಮಾತನಾಡಿ, ಮಹಿಳೆಯ ಮನೆಯಲ್ಲಾಗಿದ್ದ ನೀರಿನ ಸಂಪರ್ಕವನ್ನ ಮರುಸ್ಥಾಪಿಸುವಂತೆ ಸೂಚನೆ ನೀಡಿದರು. ಅಧಿಕಾರಿಯ ಈ ತ್ವರಿತ ಕ್ರಮದಿಂದಾಗಿ ನೀತು ಅವರ ಎರಡು ತಿಂಗಳ ನರಕಯಾತನೆ ಕೊನೆಗೂ ಅಂತ್ಯವಾಯಿತು.

ತಮ್ಮ ದೀರ್ಘಕಾಲದ ಸಮಸ್ಯೆಯನ್ನ ಕ್ಷಣಾರ್ಧದಲ್ಲಿ ಬಗೆಹರಿಸಿದ ಐಪಿಎಸ್ ಅಧಿಕಾರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ದಿವ್ಯಾಂಗ ಮಹಿಳೆ ನೀತು ನಿರ್ಧರಿಸಿದರು. ಕೇವಲ ಧನ್ಯವಾದ ಹೇಳುವುದಕ್ಕಾಗಿ ತಮ್ಮ ಮಗಳೊಂದಿಗೆ ಬರೋಬ್ಬರಿ 25 ಕಿಲೋಮೀಟರ್ ದೂರ ಪ್ರಯಾಣಿಸಿ ಎಸ್ಪಿ ಕಚೇರಿಗೆ ಬಂದರು. ಈ ಬಾರಿ ಅವರು ಯಾವುದೇ ದೂರು ಹಿಡಿದುಕೊಂಡು ಬಂದಿರಲಿಲ್ಲ, ಬದಲಾಗಿ ತಮ್ಮ ಕೈಲಾದ ಸಣ್ಣ ಕಾಣಿಕೆಯಾಗಿ ಒಂದು ಪೆನ್‌ವೊಂದನ್ನಾ ಅಧಿಕಾರಿಗೆ ಉಡುಗೊರೆಯಾಗಿ ನೀಡಿದರು.

ಮಹಿಳೆಯ ಈ ನಿಷ್ಕಲ್ಮಶ ಪ್ರೀತಿಗೆ ಶ್ರದ್ಧಾ ಪಾಂಡೆ ಅವರು, ನೀತು ಅವರನ್ನ ಆತ್ಮೀಯವಾಗಿ ಆಲಂಗಿಸಿಕೊಂಡರು. ಇವರಿಬ್ಬರ ಈ ಭಾವುಕ ಕ್ಷಣಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಕೇವಲ ಕಾನೂನು ಸುವ್ಯವಸ್ಥೆ ಮಾತ್ರವಲ್ಲ, ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಗುಣವೂ ಒಬ್ಬ ಅಧಿಕಾರಿಗೆ ಇರಬೇಕು ಎಂಬುದಕ್ಕೆ ಐಪಿಎಸ್ ಅಧಿಕಾರಿ ಶ್ರದ್ಧಾ ಪಾಂಡೆ ಅವರೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+