ಮಣಿಪುರ ಘಟನೆ; ಮೋದಿಯವರೇ, ಈಗಲಾದರೂ ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ: ಗುಂಡೂರಾವ್ ಕಿಡಿ
ಬೆಂಗಳೂರು, ಜುಲೈ 21: ಮಣಿಪುರದ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಮೋದಿಯವರೇ, ಈಗಲಾದರೂ ನೀವು ನಿಮ್ಮ ಪರಿವಾರದವರು ಮನಸ್ಸು ಬದಲಾಯಿಸಿಕೊಳ್ಳಿ.
ಪ್ರೀತಿ ಹಂಚಲು ಪ್ರಯತ್ನಿಸಿ ಎಂದು ಸಚಿವ ದಿನೇಶ್ ಗುಂಡೂವಾವ್ ಕಿಡಿಕಾರಿದರು.
ಈ ಕುರಿತು ಟ್ವೀಟ್ ಮೂಲಕ ಕಿಡಿಕಾರಿದರ ಅವರು, ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಕೃತ್ಯಕ್ಕೆ ಸುಪ್ರೀಂ ಕೋರ್ಟ್ ಹಾಕಿರುವ ಛೀಮಾರಿ, ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿ. ಈ ಹೇಯ ಕೃತ್ಯ ನಡೆಯಲು ಅಲ್ಲಿನ ರಾಜ್ಯ ಸರ್ಕಾರದ ಎಷ್ಟು ಪಾಲಿದೆಯೋ ಕೇಂದ್ರದ ಪಾಲೂ ಅಷ್ಟೇ ಇದೆ ಎಂದು ಕಿಡಿಕಾರದರು.

ಮಣಿಪುರದ ಗಲಭೆಯನ್ನು ಆರಂಭದಲ್ಲೇ ನಿಯಂತ್ರಿಸಿದ್ದರೆ ಈ ಘಟನೆ ನಡೆಯುತಿತ್ತೆ? ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ್ದು ಮೇ 4 ರಂದು. ಆಗ ನಮ್ಮ ಘನವೆತ್ತ ಪ್ರಧಾನಿ ಮೋದಿ ರೋಡ್ ಶೋ ಮಾಡಲು ಕರ್ನಾಟಕದಲ್ಲಿದ್ದರು. ಇದಕ್ಕೂ ಮೊದಲೇ ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿತ್ತು ಎಂದು ಕುಟುಕಿದರು.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 21, 2023
ಮಣಿಪುರದ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ.
ಇಂತಹ ಅಮಾನವೀಯ ಕೃತ್ಯಕ್ಕೆ ಈ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ.
BJPಯ ಫ್ಯಾಸಿಸ್ಟ್ ಮನಸ್ಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು.
ಮೋದಿಯವರೇ, ಈಗಲಾದರೂ ನೀವು ನಿಮ್ಮ ಪರಿವಾರದವರು ಮನಸ್ಸು ಬದಲಾಯಿಸಿಕೊಳ್ಳಿ.
ಪ್ರೀತಿ ಹಂಚಲು ಪ್ರಯತ್ನಿಸಿ.
ಮೋದಿಯವರಿಗೆ ಚುನಾವಣಾ ಪ್ರಚಾರದಲ್ಲಿ ಇದ್ದ ಆಸಕ್ತಿ ಮಣಿಪುರದ ಗಲಭೆ ಬಗ್ಗೆ ಇದ್ದಿದ್ದರೆ ಇಂತಹ ಹೇಯ ಕೃತ್ಯ ತಡೆಯಬಹುದಿತ್ತಲ್ಲವೆ.? ಮಣಿಪುರದ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ಈ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ. BJPಯ ಫ್ಯಾಸಿಸ್ಟ್ ಮನಸ್ಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು ಎಂದು ಕಿಡಿಕಾರಿದರು.

ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ
ಮೇ 4 ರಂದು ಇಬ್ಬರು ಮಹಿಳೆಯರನ್ನು ಕೆಲವು ಪುರುಷರು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣದಡಿ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಮಣಿಪುರ ಘಟನೆ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು?
ಇನ್ನೂ ಸಂಸತ್ ಅಧಿವೇಶನದ ಮೊದಲು, ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಿ, ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಆಘಾತಕಾರಿ ವಿಡಿಯೋ ವಿಚಾರದಲ್ಲಿ ತಮ್ಮ ಹೃದಯ ನೋವಿನಿಂದ ತುಂಬಿಕೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.ಮಣಿಪುರದ ಹೆಣ್ಣುಮಕ್ಕಳಿಗೆ ಆಗಿರುವುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ.
ಈ ಘಟನೆಯು ದೇಶಕ್ಕೆ ಅವಮಾನಕರ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ"ಮಣಿಪುರದ ಘಟನೆಯು ಯಾವುದೇ ಯೋಗ್ಯ ಸಮಾಜದಕ್ಕೆ ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವದ ಈ ದೇಗುಲದ ಪಕ್ಕದಲ್ಲಿ ನಿಂತಿರುವ ನನ್ನ ಹೃದಯವು ನೋವು ಹಾಗೂ ಆಕ್ರೋಶದಿಂದ ತುಂಬಿಕೊಂಡಿದೆ. ಮಣಿಪುರದ ಘಟನೆಯು ಯಾವುದೇ ನಾಗರಿಕ ಸಮಾಜಕ್ಕೆ ಅವಮಾನಕರ. ಮಹಿಳೆಯ ಗೌರವದ ವಿಷಯವು ಎಲ್ಲ ರಾಜಕೀಯಕ್ಕಿಂತ ಮಿಗಿಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications