ಹರಿಯಾಣ ಹಿಂಸಾಚಾರ: ಎನ್‌ಕೌಂಟರ್ ಬಳಿಕ ಮತ್ತೋರ್ವ ಆರೋಪಿ ಅರೆಸ್ಟ್!
ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ ನಂತರ ಬಂಧಿಸಿದ್ದಾರೆ. ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರಿಂದ ಆರೋಪಿ ಗಾಯಗೊಂಡಿದ್ದಾನೆ.
ಒಂದು ವಾರಕ್ಕೂ ಹೆಚ್ಚು ಅವಧಿಯಲ್ಲಿ ಪೊಲೀಸರು ಮತ್ತು ನುಹ್ ಹಿಂಸಾಚಾರದ ಆರೋಪಿಗಳನ್ನು ಒಳಗೊಂಡ ಮೂರನೇ ಎನ್‌ಕೌಂಟರ್ ಇದಾಗಿದೆ. ಘಟನೆಯ ಸಮಯದಲ್ಲಿ ಒಸಾಮಾ ಅಲಿಯಾಸ್ ಪೆಹೆಲ್ವಾನ್ ಎಂಬ ವ್ಯಕ್ತಿ ನುಹ್‌ನ ಫಿರೋಜ್‌ಪುರ ನಮಕ್ ಗ್ರಾಮದಿಂದ ಆಲಿ ಮಿಯೊಗೆ ಹೋಗುತ್ತಿದ್ದನು. ನಲ್ಹಾರ್‌ನಲ್ಲಿ ಬೆಂಕಿ ಹಚ್ಚಿದ ಆರೋಪದ ಮೇಲೆ ಈತ ಪೊಲೀಸರಿಗೆ ಬೇಕಾಗಿದ್ದನು.

ಎನ್‌ಕೌಂಟರ್ ಸಮಯದಲ್ಲಿ ಒಸಾಮಾ ಕಾಲಿಗೆ ಗುಂಡು ಹಾರಿಸಲಾಯಿತು. ಬಳಿಕ ಆತನನ್ನು ಉಜಿನಾ ಡ್ರೈನ್ ಬಳಿ ಬಂಧಿಸಲಾಯಿತು. ಅವರನ್ನು ನಲ್ಹಾರ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಶದಿಂದ ಒಂದು ದೇಶ ನಿರ್ಮಿತ ಪಿಸ್ತೂಲ್ (ದೇಸಿ ಕಟ್ಟ), ಒಂದು ಕಾರ್ಟ್ರಿಡ್ಜ್ ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಮಂಗಳವಾರ ಮುಂಜಾನೆ ಜಿಲ್ಲೆಯ ತೌರು ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನುಹ್ ಕೋಮು ಘರ್ಷಣೆಯ ಆರೋಪಿ ವಾಶಿಮ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಲೂಟಿ ಮತ್ತು ಕೊಲೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿ ವಾಶಿಮ್ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇಂತಹ ಮಾಹಿತಿ ಆಧಾರದ ಮೇಲೆ ಎನ್‌ಕೌಂಟರ್ ನಡೆದಿದೆ.
ಇದಲ್ಲದೆ ಆಗಸ್ಟ್ 15 ಮತ್ತು 16 ರ ಮಧ್ಯರಾತ್ರಿಯಲ್ಲಿ ನುಹ್‌ನಲ್ಲಿನ ಹಿಂಸಾಚಾರದಲ್ಲಿ ಭಾಗಿಯಾಗಿರುವ ಇಬ್ಬರು ಶಂಕಿತ ಗಲಭೆಕೋರರನ್ನು ಟಾರು ಪ್ರದೇಶದಲ್ಲಿ ಸಂಕ್ಷಿಪ್ತ ಎನ್‌ಕೌಂಟರ್ ನಂತರ ಬಂಧಿಸಲಾಯಿತು. ಇದರಲ್ಲಿ ಒಬ್ಬ ಆರೋಪಿ ಕಾಲಿಗೆ ಗುಂಡು ಹಾರಿಸಲಾಯಿತು.
ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರ ಪೈಕಿ ಒಬ್ಬರ ಕಾಲಿಗೆ ಗುಂಡು ತಗುಲಿ ಕೆಳಗೆ ಬಿದ್ದಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಶದಿಂದ ಒಂದು ದೇಶ ನಿರ್ಮಿತ ಪಿಸ್ತೂಲ್, ಒಂದು ಕಾರ್ಟ್ರಿಡ್ಜ್ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿದಾಗ ನುಹ್‌ನಲ್ಲಿ ಕೋಮು ಘರ್ಷಣೆಗಳು ಆರಂಭಗೊಂಡವು. ಇದರಿಂದಾಗಿ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಅಪಾರ ಆಸ್ತಿ ಹಾನಿಯಾಗಿದೆ. ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಸ್ತ್ರಗಳನ್ನು ತೆಗೆದುಕೊಂಡು ಹೋಗಲಾಗಿದೆ. ಜನಾಂಗಿಯ ನಡುವಿನ ಘರ್ಷಣೆಯ ಆರೋಪಿಗಳ ಮೇಲೆ ಎನ್‌ಕೌಂಟರ್‌ಗಳು ನಡೆದವು. ನಂತರ ಹಿಂಸಾಚಾರವು ನೆರೆಯ ಗುರುಗ್ರಾಮ್‌ಗೆ ಹರಡಿತು. ಈ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications