ಹರ್ಯಾಣ ಪೊಲೀಸರು ರೊಹ್ಟಕ್ ಸಹೋದರಿಯನ್ನ ಬಂಧಿಸ್ತಾರಾ?
ರೊಹ್ಟಕ್(ಹರ್ಯಾಣ), ಆಗಸ್ಟ್, 21 : ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಸ್ಸಿನಲ್ಲಿದ್ದ ಮೂವರು ಯುವಕರಿಗೆ ಥಳಿಸಿ ಸುದ್ದಿಯಾಗಿದ್ದ ರೋಹ್ಟಕ್ ಸಹೋದರಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಯುವತಿಯರೇ ಬಂಧನಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಹರಿಯಾಣದ ರೋಹ್ವಕ್ ನ ಬಳಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಯುವಕರಿಗೆ ಬಾರಿಸಿದ ಯುವತಿಯರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಸುಮಾರು 50 ಸಾಕ್ಷ್ಯಗಳ ಹೇಳಿಕೆ ಪಡೆದ ಪೊಲೀಸರು ಸಹೋದರಿಯರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿದ್ದಾರೆ.[ಬೀದಿ ಕಾಮಣ್ಣನಿಗೆ ಥಳಿಸಿ ಪ್ರಶಸ್ತಿ ಪಡೆದ ಚೈತ್ರಾ]

ಈ ಸಂದರ್ಭದಲ್ಲಿ ಯುವಕರು ಲೈಂಗಿಕ ಕಿರುಕುಳ ನಡೆಸಲು ಮುಂದಾಗಿಲ್ಲ. ಇದೊಂದು ಸೀಟಿಗಾಗಿ ನಡೆದ ಜಗಳ ಅಷ್ಟೇ. ಮೂವರು ಯುವಕರು ಅಮಾಯಕರು. ಆದರೆ ಯುವತಿಯರೇ ಸುಳ್ಳು ಆರೋಪ ಹೊರಿಸಿ ಕುಲದೀಪ್, ಮೋಹಿತ್, ದೀಪಕ್ ಅವರನ್ನು ಬಂಧನಕ್ಕೊಳಪಡಿಸಿದ್ದರು ಎಂಬ ಸತ್ಯ ಬೆಳಕಿಗೆ ಬಂದಿದೆ.
ಏನಿದು ಘಟನೆ :
ಸೋನಿಪತ್ ನ ಥಾನಾ ಖರ್ದ್ ನ ಮೂವರು ಯುವತಿಯರು ಮೊದಲು ಮತ್ತೊಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಆ ಬಸ್ಸು ಕೆಟ್ಟು ಹೋದ ಕಾರಣ ಮತ್ತೊಂದು ಬಸ್ಸನ್ನು ಏರಿದ್ದರು. ಆಗ ಈ ಬಸ್ಸಿನಲ್ಲಿ ಓರ್ವ ವೃದ್ದ ಅಸ್ವಸ್ಥ ಮಹಿಳೆ ಹಾಗೂ ಓರ್ವ ಯುವಕ ಸೀಟ್‌ನಲ್ಲಿ ಕುಳಿತಿದ್ದರು.
ಮಹಿಳೆಯರು ಕೂರುವ ಸೀಟು ಎಂದು ಗೊತ್ತಾದ ಯುವಕ ಯುವತಿಯರಿಗೆ ಸೀಟು ಬಿಟ್ಟುಕೊಟ್ಟು, ಅಸ್ವಸ್ಥ ವೃದ್ದೆ ಮಹಿಳೆಯನ್ನು ಸೀಟಿನಿಂದ ಎಬ್ಬಿಸದಂತೆ ಕೇಳಿಕೊಂಡಿದ್ದಾನೆ. ಆಗ ಯುವತಿಯರು ಹುಡುಗರ ಮಾತನ್ನು ನಿರ್ಲಕ್ಷಿಸಿದ್ದಾರೆ.[ಗೂಸಾ ನೀಡಿದ ರೋಹ್ಟಕ್ ಸಿಸ್ಟರ್ಸ್ ಗೆ ಸನ್ಮಾನ]
ಆ ಅಸ್ವಸ್ಥ ಮಹಿಳೆಯನ್ನು ಸೀಟಿನಿಂದ ಎಬ್ಬಿಸಿ ಸೀಟಿನಲ್ಲಿ ಯುವತಿಯರು ಕೂತಿದ್ದಾರೆ. ಇದರಿಂದ ಅಸಮಾಧಾನಗೊಂಡ ಯುವಕ ಯುವತಿಯರಿಗೆ ನೀವು ಹೀಗೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾನೆ. ಇದರಿಂದ ಕುಪಿತರಾದ ಯುವತಿಯರು ಯುವಕರಿಗೆ ಬೆಲ್ಟ್‌ನಿಂದ ಹೊಡೆದಿದ್ದಾರೆ.
ಬಸ್ಸಿನಲ್ಲಿದ್ದವರು ಸುಮ್ಮನಿದ್ದರೇ?
ಬಸ್ಸಿನಲ್ಲಿ ಯುವಕರಿಗೆ ಹೊಡೆಯುತ್ತಿದ್ದ ಯುವತಿಯರಿಗೆ ಯಾವ ಪ್ರಯಾಣಿಕರೂ ಬೆಂಬಲ ನೀಡಲಿಲ್ಲ. ಆದರೆ ಯುವತಿಯರ ಹೊಡೆತದಿಂದ ಯುವಕರನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ಘಟನೆ ಕುರಿತಾಗಿ ಬಸ್ ಚಾಲಕ, ಕಂಡಕ್ಟರ್ ಮತ್ತಿತರ ಪ್ರಯಾಣಿಕರನ್ನು ವಿಚಾರಿಸಿದಾಗ ಯುವತಿಯರದೇ ತಪ್ಪು ಎಂದು ಹೇಳಿದ್ದಾರೆ.












Click it and Unblock the Notifications