Haryana Election: ಮೂರನೇ ಬಾರಿಗೆ ಹ್ಯಾಟ್ರಿಕ್ ಹೊಡೆಯಲು ಬಿಜೆಪಿಯಿಂದ ಗ್ರಾಮೀಣ ಅಸ್ತ್ರ

ನವದೆಹಲಿ, ಆಕ್ಟೋಬರ್ 02: ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲು ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೂ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಹೀಗಾಗಿ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಮುಂದಾಗಿದೆ. ಈಗಾಗಲೇ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಚಾರ ನಡೆಸಿದ್ದಾರೆ.

ಅಕ್ಟೋಬರ್ 05ರಂದು ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಇತ್ತೀಚೆಗೆ ಒಂದೇ ಪಕ್ಷ ಮೂರು ಬಾರಿ ಗೆದ್ದ ಉದಾಹರಣಗಳು ಇಲ್ಲ. ಆದರೆ 2014 ಹಾಗೂ 2019ರಲ್ಲಿ ಎರಡು ಬಾರಿ ಗೆದ್ದಿರುವ ಆಡಳಿತಾರೂಢ ಬಿಜೆಪಿ ಪಕ್ಷವು ಈ ಬಾರಿ ಗೆಲ್ಲಲು ರಣತಂತ್ರ ರೂಪಿಸಿದೆ. ಈ ಮೂಲಕ ಹ್ಯಾಟ್ರಿಕ್ ಭಾರಿಸಲು ಸಜ್ಜಾಗಿದೆ.

Haryana Election 2024 BJP Eye on Third Time Come To Power 3 Key Factor of Influencing BJP s

ಮತದಾನ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ಸರ್ಕಾರವು ಆಡಳಿತದ ವಿರೋಧಿ ಧೋರಣೆ ಎದುರಿಸುತ್ತಿರುವ ಮಧ್ಯೆಯು ಮೂರನೇ ಭಾರಿಗೆ ಹರಿಯಾಣ ಅಧಿಕಾರ ಹಿಡಿಯಲು ಎಲ್ಲ ಹಂತದ ಪ್ರಯತ್ನ ನಡೆಸಿದೆ. ರಾಜ್ಯದ ಗ್ರಾಮೀಣ ಭಾಗದ ಜನರನ್ನು ತಲುಪುತ್ತಿದೆ. ದಲಿತ ಸಮುದಾಯದವರನ್ನು ತಲುಪಿ ಪ್ರಚಾರ ಮಾಡಿದೆ. ಅಲ್ಲದೇ ಕಾಂಗ್ರೆಸ್ ಆಂತರಿಕ ಕಲಹವನ್ನು ಲಾಭ ಪಡೆಯಲು ಬಿಜೆಪಿ ಸಜ್ಜಾಗಿದೆ.

ಹರಿಯಾಣದಲ್ಲಿ ಬಹುಕೋನ ಸ್ಪರ್ಧೆ

ರಾಜ್ಯದಲ್ಲಿ ಜಾತಿ ಸಮೀಕರಣ ಹಾಗೂ ಪಕ್ಷದ ಆಂತರಿಕ ಕಚ್ಚಾಟಗಳೇ ಚುನಾವಣಾ ಕೇಂದ್ರ ಬಿಂದುವಾಗಿವೆ. ಹರಿಯಾಣದಲ್ಲಿ ತ್ರಿಕೋನ ಅಲ್ಲ, ಬಹುಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಎಎಪಿ, ಬಿಜೆಪಿ ಹಾಗೂ ಇನ್ನಿತರ ಪ್ರಬಲ ಪಕ್ಷಗಳ ಮಧ್ಯೆ ಈ ಭಾರೀ ತೀವ್ರ ಹಣಾ ಹಣಿ ಏರ್ಪಡಲಿದೆ. ಹೀಗಾಗಿ ಬಿಜೆಪಿಯು ಮತಗಳು ಚದುರದಂತೆ ನೋಡಿಕೊಳ್ಳುತ್ತಿದೆ. ಎಲ್ಲ ಸಮುದಾಯದವರನ್ನು ತಲುಪುತ್ತಿದೆ.

2014 ಮತ್ತು 2019ರಲ್ಲಿ ಹರಿಯಾಣ ಲೋಕಸಭಾ ಚುನಾವಣೆಯಲ್ಲಿ ಕಮಲ ಪಡೆಗೆ ಐದು ಸೀಟುಗಳು ಧಕ್ಕಿದ್ದವು. ಉಳಿದ ಸೀಟುಗಳನ್ನು ಕಾಂಗ್ರೆಸ್ ಬಾಚಿಕೊಂಡಿತ್ತು. 1966ರ ನಂತರ ಯಾವುದೇ ಪಕ್ಷವು ಹರಿಯಾಣದಲ್ಲಿ ಮೂರು ಬಾರಿ ಗೆದ್ದ ಉದಾಹರಣೆಗಳು ಇಲ್ಲ. ಈ ಬಾರಿ ಈ ಮಾತನ್ನು ಹುಸಿ ಮಾಡಲು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ.

RSS ಪ್ರಭಾವ ಬಳಕೆ

ಬಿಜೆಪಿಯು ಗ್ರಾಮೀಣ ಕ್ಷೇತ್ರಗಳ ಮೇಲೆ ಗಮನ ನೆಟ್ಟಿದೆ. RSS ಸಾಂಸ್ಥಿಕ ವ್ಯಾಪ್ತಿ ಮತ್ತು ಅದರ ಉಪಸ್ಥಿತಿಯನ್ನು ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದೆ. ಇದರ ಮೂಲಕ ಈ ಭಾಗದಲ್ಲಿ ಹೆಚ್ಚಿನ ಮತ ಪಡೆಯಲು ಮುಂದಾಗಿದೆ.

ಒಂದು ಜಿಲ್ಲೆಗ RSSನ 150 ಸ್ವಯಂಸೇವಕರನ್ನು ನಿಯೋಜಿಸಿ, ಮತದಾರರ ಜತೆ ನಿರಂತರ ಸಂಪರ್ಕ ಕಾರ್ಯಕ್ರಮ ಮಾಡಿದೆ. ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡರು, ಬಿಜೆಪಿ ಕಾರ್ಯಕರ್ತರ ಸಮುಖದಲ್ಲಿ ಗ್ರಾಮ ಸಭೆಗಳು ನಡೆಲಸಲಾಗಿದೆ. ಈ ವೇಳೆ ದಲಿತ ಸೇರಿದಂತೆ ಬಹುತೇಕ ಎಲ್ಲ ವರ್ಗದವರ ಮತಗಳ ಮೇಲೆ, ಮೂರನೇ ಭಾರಿ ಅಧಿಕಾರಕ್ಕೆ ಬರುವುದರ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+