• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ ಹಾದಿ ಹಿಡಿದ 'ಲಕ್ಕಿ' ಸಿಎಂ ಖಟ್ಟರ್

By Mahesh
|

ಚಂಡೀಗಢ, ಅ.21: ಪ್ರಧಾನಿ ನರೇಂದ್ರ ಮೋದಿ ಅವರು ಹರ್ಯಾಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮನೋಹರ್ ಲಾಲ್ ಖಟ್ಟರ್ ಈಗ ಬಿಜೆಪಿಯಿಂದ ಪ್ರಪ್ರಥಮ ಬಾರಿಗೆ ಸಿಎಂ ಆಗಿ ನಿಯೋಜನೆಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆಪ್ತ ಎಂಬ ಹೆಗ್ಗಳಿಕೆ ಜೊತೆಗೆ ಖಟ್ಟರ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಪೂರ್ಣ ಬೆಂಬಲವೂ ಇದೆ. ಹರ್ಯಾಣದಲ್ಲಿ 10 ವರ್ಷ ನಡೆದಿದ್ದ ಕಾಂಗ್ರೆಸ್ ರಾಜ್ಯಭಾರಕ್ಕೆ ಅಂತ್ಯ ಹಾಡಲಾಗಿದೆ. ಹರ್ಯಾಣದಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಅಮಿತ್ ಶಾ ಹೂಡಿದ ರಣತಂತ್ರ ಫಲಿಸಿದೆ.

ಕೈಲಾಶ್ ವಿಜಯ್ ವರ್ಗಿಯಾ, ಡಾ. ಅನಿಲ್ ವಿಜ್, ರಾಮ್ ಲಾಲ್ ಹಾಗೂ ಶಿವಪ್ರಕಾಶ್ ಅವರು ಅಮಿತ್ ಅವರ ರಣತಂತ್ರವನ್ನು ಕಾರ್ಯರೂಪಕ್ಕೆ ತಂದ ಫಲವಾಗಿ ಇಂದು ಹರ್ಯಾಣದಲ್ಲಿ ಕಮಲ ಅರಳಿದೆ. [ಈ ಬಗ್ಗೆ ವಿವರ ಇಲ್ಲಿದೆ]

ಪ್ರಥಮ ಬಾರಿಗೆ ಸಂಸದರಾಗಿದ್ದಲ್ಲದೆ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಮೋದಿ ಅವರು ಹೊಸ ಹಾದಿ ಹುಟ್ಟು ಹಾಕಿದ್ದರು. ಇದೇ ಹಾದಿಯಲ್ಲಿ ಮೊದಲ ಬಾರಿಗೆ ಶಾಸಕರಾದ ಬೆನ್ನಲ್ಲೇ ಸಿಎಂ ಆಗುವ ಯೋಗ ಲಭಿಸಿದೆ. ಹರ್ಯಾಣದ ನಿಯೋಜಿತ ಸಿಎಂ ಖಟ್ಟರ್ ಅವರ ಸಂಕ್ಷಿಪ್ತ ಪರಿಚಯ ಇಂತಿದೆ:

* ಮನೋಹರ್ ಲಾಲ್ ಖಟ್ಟರ್ 1954ರಲ್ಲಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಮಾಹಮ್ ನ ನಿದಾನಾ ಗ್ರಾಮದಲ್ಲಿ ಜನಿಸಿದವರು. ಖಟ್ಟರ್ ಅವರ ಪೂರ್ವಜರು ಸ್ವಾತಂತ್ರ್ಯದ ಬಳಿಕ ಹರಿಯಾಣಕ್ಕೆ ವಲಸೆ ಬಂದು ನೆಲೆಸಿದರು.

* ರೋಹ್ಟಾಕ್ ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ದೆಹಲಿ ಸೇರಿದರು. ಸಾದರ್ ಬಜಾರಿನಲ್ಲಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಾ ಪದವಿ ಶಿಕ್ಷಣ ಪೂರೈಸಿದರು.

* 1994 ರಲ್ಲಿ ಬಿಜೆಪಿ ಸೇರಿ ಹರಿಯಾಣ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

* ಚುನಾವಣೆಯಲ್ಲಿ ಅವರು ಹರಿಯಾಣ ಚುನಾವಣಾ ಪ್ರಚಾರ ಸಮಿತಿಯ ನೇತೃತ್ವ ವಹಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರೂ ಆಗಿದ್ದಾರೆ.

* 60 ವರ್ಷ ವಯಸ್ಸಿನ ಮನೋಹರ್ ಲಾಲ್ ಖಟ್ಟರ್ ಅವರಿಗೆ ರಾಜಕೀಯ ರಂಗ ತೀರಾ ಹೊಸತು. ಆರೆಸ್ಸೆಸ್ ಹಾಗೂ ಮೋದಿ ಅವರ ಅಣತಿಯಂತೆ ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. [ಹರ್ಯಾಣ ಆಳ್ವಿಕೆ ಮಾಡಿದ ಪಕ್ಷಗಳು]

* ಖಟ್ಟರ್ ಸ್ಪರ್ಧಿಸಿದ್ದ ಕರ್ನಾಲ್ ವಿಧಾನಸಭಾ ಕ್ಷೇತ್ರದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು ವಿಶೇಷ.

* ಖಟ್ಟರ್ ಅವರು ಎಂಎಲ್ಎ ಆಗಿ ಪ್ರಥಮ ಬಾರಿಗೆ ಅಸೆಂಬ್ಲಿ ಪ್ರವೇಶಿಸುತ್ತಿದ್ದು, ಮೊದಲ ಎಂಟ್ರಿಯಲ್ಲೇ ಸಿಎಂ ಕುರ್ಚಿಯನ್ನೂ ಏರುತ್ತಿದ್ದಾರೆ.

* ಕರ್ನಾಲ್ ಕ್ಷೇತ್ರದಿಂದ 63,736 ಮತಗಳನ್ನು ಗಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

* ಕಳೆದ 40 ವರ್ಷಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಸದಸ್ಯರಾಗಿದ್ದಾರೆ.

* ಖಟ್ಟರ್ ಅವರು ಮೂಲತಃ ಪಂಜಾಬಿಯಾಗಿದ್ದು, ಮೋದಿ ಅವರ ಅಣತಿಯಂತೆ ಹರ್ಯಾಣ ಅಸೆಂಬ್ಲಿಗೆ ಸ್ಪರ್ಧಿಸಿದ್ದರು.

* ಕೃಷಿಕ ಹಾಗೂ ಮನೆ ಪಾಠ ಮಾಡುವುದು, ಆರೆಸ್ಸೆಸ್ ಸಂಘಟನೆ ಇವರ ವೃತ್ತಿಯಾಗಿದೆ.ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

* ಅವಿವಾಹಿತರಾಗಿರುವ ಖಟ್ಟರ್ ಹಾಗೂ ಅವರ ತಂದೆ ಹರ್ಭನ್ಸ್ ಲಾಲ್ ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ.

* ಖಟ್ಟರ್ ಅವರ ಒಟ್ಟು ಘೋಷಿತಾ ಆಸ್ತಿ 8,29,952 ರು. ಸುಮಾರು 6.2 ಲಕ್ಷ ರು ಸಾಲ ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manohar Lal Khattar(60) a new face in electoral politics, was fielded from Karnal Assembly seat from where Prime Minister Narendra Modi launched his poll campaign in the state and he has emerged as first CM of Haryana from BJP Government. Here is brief profile of CM Designate Khattar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more