ಹರ್ಯಾಣದ ನೂತನ ಸಿಎಂ ಮನೋಹರ್ ಲಾಲ್

ಚಂಡೀಗಢ, ಅ.21: ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಖಟ್ಟರ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಘೋಷಿಸಿದ್ದಾರೆ.

1966ರಲ್ಲಿ ಉದಯವಾದ ಹರ್ಯಾಣ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪನೆ ಮಾಡುತ್ತಿದೆ. ಪ್ರಪ್ರಥಮ ಬಾರಿಗೆ ಚುನಾವಣೆ ಎದುರಿಸಿ ಶಾಸಕರಾಗಿರುವ ಮನೋಹರ್ ಲಾಲ್ ಖಟ್ಟರ್ ಅವರು ಬಿಜೆಪಿಯಿಂದ ಪ್ರಥಮ ಸಿಎಂ ಆಗಿ ಅ.26ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. [ನರೇಂದ್ರ ಮೋದಿ ಹಾದಿ ಹಿಡಿದ 'ಲಕ್ಕಿ' ಸಿಎಂ ಖಟ್ಟರ್]

ಹರ್ಯಾಣ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಭಿಮನ್ಯು, ರಾಮ್ ಬಿಲಾಸ್ ಶರ್ಮ, ಅನಿಲ್ ವಿಜ್, ಓಂ ಧಾಂಕರ್ ಮುಂತಾದವರ ಹೆಸರು ಕೇಳಿ ಬಂದಿತ್ತು. ಸಿಎಂ ಆಯ್ಕೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೇಂದ್ರ ವಸತಿ ಸ‌ಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ದಿನೇಶ್ ಶರ್ಮ ಅವರನ್ನು ವೀಕ್ಷಕರಾಗಿ ನೇಮಿಸಿದ್ದರು.

Manohar Lal Khattar appointed as Haryana Chief Minister

ಸುಮಾರು 1೦ ವರ್ಷಗಳ ಕಾಂಗ್ರೆಸ್ ಅಧಿಪತ್ಯಕ್ಕೆ ಮೋದಿ-ಶಾ ಜೋಡಿ ಅಂತ್ಯ ಹಾಡುವ ಮೂಲಕ ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳಿಸಿದರೆ, ಐಎನ್ ಎಲ್ ಡಿ 20, ಕಾಂಗ್ರೆಸ್ 15, ಎಚ್ ಜೆಸಿ 2 ಸ್ಥಾನ, ಇತರೆ 6 ಸ್ಥಾನ ಪಡೆದುಕೊಂಡಿತ್ತು.[ಹರ್ಯಾಣ ಆಳ್ವಿಕೆ ಮಾಡಿದ ಪಕ್ಷಗಳು]

ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಸ್ಥಳೀಯ ನಾಯಕರ ಪರಿಶ್ರಮವೇ ಕಾರಣವಾಗಿತ್ತು. ಬಿಜೆಪಿ ಗೆಲುವಿನ ರುವಾರಿಗಳಲ್ಲಿ ಸಂಗ ಪರಿವಾರದ ಶಿವಪ್ರಕಾಶ್ ಹಾಗೂ ರಾಮ್ ಲಾಲ್ ಕೂಡಾ ಇದ್ದರು. [ಕಮಲ ಅರಳಿಸಿದ ಸ್ಟಾರ್ ನಾಯಕರು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+