Darshan: ಹರಿಯಾಣ ಮೂಲದ ನಟ, ಯೂಟ್ಯೂಬರ್ ದರ್ಶನ್‌ಗೆ 20 ವರ್ಷ ಜೈಲು ಶಿಕ್ಷೆ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಹರಿಯಾಣ ಮೂಲದ ಖ್ಯಾತ ಹಾಸ್ಯನಟ ದರ್ಶನ್‌ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಹಿಸಾರ್ ನಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎಡಿಜೆ) ಸುನಿಲ್ ಜಿಂದಾಲ್ ಅವರ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
ಸುದೀರ್ಘ ವಿಚಾರಣೆ ಬಳಿಕ ಮಾರ್ಚ್ 11 ರಂದು ದರ್ಶನ್ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಅಂದಿನಿಂದ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆ ಮತ್ತು 1 ರೂಪಾಯಿ ಲಕ್ಷ ದಂಡ, ಸೆಕ್ಷನ್ 363 ರ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ, ಸೆಕ್ಷನ್ 343 ರ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ, ಮತ್ತು ಸೆಕ್ಷನ್ 506 ರ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಏನಿದು ಪ್ರಕರಣ
2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಹರಿಯಾಣದ ಅಗ್ರೋಹಾ ಪ್ರದೇಶದಲ್ಲಿರುವ ಗ್ರಾಮವೊಂದರ ವಾಸಿಯಾಗಿರುವ ಅಪ್ರಾಪ್ತೆಯ ತಾಯಿ ದರ್ಶನ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಕುಬ್ಜ ಹಾಸ್ಯನಟ ಎಂದೇ ಹೆಸರಾಗಿರುವ ದರ್ಶನ್ ತನ್ನ ಯೂಟ್ಯೂಬ್ ಮೂಲಕ ಸಾಕಷ್ಟು ಜನಪ್ರಿಯವಾಗಿದ್ದರು. ಯೂಟ್ಯೂಬ್ ವಿಡಿಯೋದಲ್ಲಿ ಅವಕಾಶ ನೀಡುವುದಾಗಿ ಬಾಲಕಿಗೆ ಭರವಸೆ ನೀಡಿ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಆರೋಪಿದ್ದರು ಎಂದು ವರದಿಯಾಗಿದೆ.
ಸಂತ್ರಸ್ತೆಯ ಪರವಾಗಿ ವಕೀಲೆ ರೇಖಾ ಮಿತ್ತಲ್ ವಾದ ಮಾಡಿದ್ದರು. ಅವರ ಹೇಳಿಕೆಯ ಪ್ರಕಾರ ದರ್ಶನ್ ಸೆಪ್ಟೆಂಬರ್ 21, 2020 ರಂದು ಅಪ್ರಾಪ್ತ ಬಾಲಕಿಯನ್ನು ಸಂಪರ್ಕಿಸಿ ವೀಡಿಯೊ ಚಿತ್ರೀಕರಣಕ್ಕೆ ಬರುವಂತೆ ಕರೆದಿದ್ದರು.
ಚಿತ್ರೀಕರಣ ಮುಗಿದ ಬಳಕ ದರ್ಶನ್ ಅಪ್ರಾಪ್ತ ಬಾಲಕಿಯನ್ನು ಚಂಡೀಗಢಕ್ಕೆ ಹೋಗಲು ಕೇಳಿಕೊಂದ್ದಿದ್ದು ಇದಕ್ಕೆ ಬಾಲಕಿ ನಿರಾಕರಿಸಿದಾಗ, ದರ್ಶನ್ ಆಕೆಯನ್ನು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಬಾಲಕಿಯು ಹೆದರಿಕೊಂಡಿದ್ದಾಳೆ. ನಂತರ ದರ್ಶನ್ ತನ್ನ ಸಹೋದರನ ಆಕೆಯನ್ನು ಬೈಕ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ದು ಹೋಟೆಲ್ ಒಂದರಲ್ಲಿ ಅತ್ಯಾಚಾರ ಮಾಡಿದ್ದ ಎಂದು ವಕೀಲರು ಹೇಳಿದ್ದಾರೆ.
ಅತ್ಯಾಚಾರ ಮಾಡಿದ್ದಲ್ಲದೆ ಬಾಲಕಿಯನ್ನು ವಯಸ್ಕಳೆಂದು ಬಿಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸಂಸ್ಥೆಯ ಸಹಾಯದಿಂದ ಆಕೆಗೆ ಬಲವಂತವಾಗಿ ಮದುವೆ ಮಾಡಿಸಿದ್ದಾನೆ. ಬಾಲಕಿಯ ರಕ್ಷಣೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಅಪ್ರಾಪ್ತ ಬಾಲಕಿ ಮನೆಗೆ ಮರಳಿದ ಬಳಿಕ ಆಕೆ ತನ್ನ ಮೇಲೆ ಆಗಿರುವ ದೌರ್ಜನ್ಯವನ್ನು ಹೇಳಿಕೊಂಡಳು, ತಾಯಿ ದೂರು ನೀಡಿದ ಬಳಿಕ ದರ್ಶನ್‌ನನ್ನು ಬಂಧಿಸಲಾಗಿತ್ತು. ಜೈಲು ಶಿಕ್ಷೆ ಮತ್ತು ದಂಡದ ಜೊತೆಗೆ ₹2,00,000 ಪರಿಹಾರವನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ದರ್ಶನ್‌ಗೆ ಆದೇಶ ಕೊಟ್ಟಿದೆ.












Click it and Unblock the Notifications