ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್, ಒಬಿಸಿ, ಗಲಭೆ, ಟ್ವಿಟ್ಟರ್ ನಲ್ಲಿ ಶಾಂತಿ ಮಂತ್ರ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 26: ಗುಜರಾತಿನಲ್ಲಿ ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್ ಪಟೇಲ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಹಾರ್ದಿಕ್ ಪರ ವಿರೋಧ ಚರ್ಚೆ ನಡೆಯುತ್ತಿದೆ.

ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಗುಜರಾತ್‌ನ ಪಟೇಲ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸೆ ತಿರುಗಲು ಪಟೇಲ್ ಸಮುದಾಯ ಕಾರಣವಲ್ಲ. ಗುಜರಾತ್ ಪೊಲೀಸರ ಆತುರದ ಕ್ರಮವೇ ಕಾರಣ ಎಂದು ಅನೇಕರು ದೂಷಿಸಿದ್ದಾರೆ. ಸ್ಥಳೀಯ ಮಾಧ್ಯಮಗಳಲ್ಲಿ 2002ರ ಕೋಮು ಗಲಭೆಗೆ ಹೋಲಿಸಿ ಸುದ್ದಿ ಪ್ರಕಟಿಸಲಾಗುತ್ತಿದೆ.[ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್ ಯಾರು?]

ಗುಜರಾತಿನ ಹಲವೆಡೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲ ತಾಣ ಅಪ್ಲಿಕೇಷನ್ ಗಳ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಗಟ್ಟಲು ಈ ಕ್ರಮ ಅನಿವಾರ್ಯ ಎಂದು ಆನಂದಿಬೆನ್ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. [ಗುಜರಾತ್ ಬಂದ್ ಗೆ ಕರೆ ನೀಡಿದ 22 ವರ್ಷದ ಹಾರ್ದಿಕ್]

ಈ ನಡುವೆ ಹಾರ್ದಿಕ್ ಪಟೇಲ್ ರನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಹೋಲಿಸಲಾಗಿದೆ. ಕೆಲವರು ಗುಜರಾತಿನ ಹೊಸ ಮೋದಿ ಎಂದಿದ್ದಾರೆ. ಮೀಸಲಾತಿ ಬೇಕೇ ಬೇಡವೇ ಎಂಬ ಚರ್ಚೆಯೂ ಜಾರಿಯಲ್ಲಿದೆ. #HardikPatel ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮುಗಿದಿದ್ದು ಈಗ #Gujarat4Peace ಚರ್ಚೆಯಲ್ಲಿದೆ. ಕೆಲ ಟ್ವೀಟ್ ಗಳು ನಿಮ್ಮ ಮುಂದೆ...

ಮೀಸಲಾತಿ ಬೇಕೇ ಬೇಡವೇ ಎಂಬ ಚರ್ಚೆ

ಮೀಸಲಾತಿ ಬೇಕೇ ಬೇಡವೇ ಎಂಬ ಚರ್ಚೆ

ಗುಜರಾತಿನ ಹಲವೆಡೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲ ತಾಣ ಅಪ್ಲಿಕೇಷನ್ ಗಳ ಮೇಲೆ ಸರ್ಕಾರ ನಿರ್ಬಂಧ ಹೇರಿರುವುದು, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಾರ್ದಿಕ್ ಪಟೇಲ್ ಕರೆಗೆ ಓಗೊಟ್ಟು ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು ಸರ್ಕಾರಕ್ಕೆ ತಲೆನೋವಾಗಿದೆ.

ಮೀಸಲಾತಿ ತೆಗೆದು ಹಾಕಲು ಆಗ್ರಹಿಸಿ

ಮೀಸಲಾತಿ ತೆಗೆದು ಹಾಕಲು ಆಗ್ರಹಿಸಿ, ಸಾಮಾನ್ಯ ವರ್ಗ ಒಂದಿದ್ದರೆ ಸಾಕಲ್ಲವೇ ಮಿ. ಹಾರ್ದಿಕ್

ನಮಗೆ ಕೇಜ್ರಿವಾಲ್ ನೆನಪಾಗುತ್ತಿದ್ದಾರೆ

ನಮಗೆ ಕ್ರಾಂತಿಕಾರಿ ಕೇಜ್ರಿವಾಲ್ ನೆನಪಾಗುತ್ತಿದ್ದಾರೆ. ಹಾರ್ದಿಕ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆಯೆ?

ಮೋದಿ ವಿರುದ್ಧ ನಿಂತ ಹಾರ್ದಿಕ್, ಎಚ್ಚರ ಎಚ್ಚರ

ಮೋದಿ ವಿರುದ್ಧ ನಿಂತ ಹಾರ್ದಿಕ್ ಮೊದಿ ವಿರೋಧಿಗಳನ್ನು ತಮ್ಮ ಭಾಷಣದಲ್ಲಿ ಹೊಗಳಿದ್ದಾರೆ. ಎಚ್ಚರ ಹಾರ್ದಿಕ್ ಎಚ್ಚರ

ಪಟೇಲರು ಇನ್ನೂ ಪ್ರತಿಭಟನೆ ಮಾಡ್ತಾ ಇದ್ದಾರೆ

ಪಟೇಲರು ಇನ್ನೂ ಪ್ರತಿಭಟನೆ ಮಾಡ್ತಾ ಇದ್ದಾರೆ. ಅದರೆ, ಜೈನರು ಆಗಲೇ ಬೇಕಾದ ಸವಲತ್ತು ಪಡೆದುಕೊಂಡಿದ್ದಾರೆ ಎಂದು ಸೆನ್ಸೆಸ್ ಬಗ್ಗೆ ಸೂಚಿಸಿದ ಟ್ವೀಟ್.

ಪಾಟೀದಾರ್ ಅನಾಮತ್ ಆಂದೋಲನ

ಪಾಟೀದಾರ್ ಅನಾಮತ್ ಆಂದೋಲನ ಸುಮ್ಮನೆ ಸಮಯ ವ್ಯರ್ಥ. ಹಾರ್ದಿಕ್ ರನ್ನು ಬಂಧಿಸಿ ಜೈಲಿಗೆ ಕಳಿಸಿ. ಪೊಲೀಸರೊಡನೆ ಕಿತ್ತಾಡಬೇಕಿದ್ದರೆ ಕೋರ್ಟಿಗೆ ಹೋಗಲು ಹೇಳಿ.

ಹೌದು ಮಹಾರಾಷ್ಟ್ರದ ಮರಾಠಿ ನಾಯಕರೆಲ್ಲಿ

ಹೌದು ಮಹಾರಾಷ್ಟ್ರದ ಮರಾಠಿ ನಾಯಕರೆಲ್ಲಿ, ಮೀಸಲಾತಿ ಬೇಡುವ ಪಟೇಲರಿಗೆ ನೆರವಾಗಬೇಕಿತ್ತಲ್ಲವೇ?

ಅರವಿಂದ್ ಕೇಜ್ರಿವಾಲ್ ಕಥೆ ರಿಪೀಟ್

ಅರವಿಂದ್ ಕೇಜ್ರಿವಾಲ್ ಕಥೆ ರಿಪೀಟ್ ಆಗಲಿದೆ. ಜನ ಲೋಕಪಾಲ್ ತರುತ್ತೇವೆ ಎಂದು ಎಎಪಿಗೆ ಜನ ಸೇರಿಸಿಕೊಂಡ ಕೇಜ್ರಿವಾಲ್ ಕಥೆಯನ್ನು ಹಾರ್ದಿಕ್ ಗುಜರಾತಿನಲ್ಲಿ ಮಾಡುತ್ತಿದ್ದಾರೆ.

ಬಿಗ್ ಬಾಸ್ ಗೆ ನಮ್ಮ ಕಡೆಯಿಂದ ಸ್ಪರ್ಧಿಗಳು

ಬಿಗ್ ಬಾಸ್ ಗೆ ನಮ್ಮ ಕಡೆಯಿಂದ ಸ್ಪರ್ಧಿಗಳು ರಾಧೇ ಮಾ, ಜಸ್ಲೀನ್ ಕೌರ್ ಹಾಗೂ ಹಾರ್ದಿಕ್ ಪಟೇಲ್

English summary
Hardik Patel has become the talk of the town now-a-days. He has become the leader and hero for the Patel community in Gujarat at the age of 22. After Hardik Patel Hashtag now #Gujarat4Peace is trending in Micro blogging site Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X