ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್ ಯಾರು?
ಅಹಮದಾಬಾದ್, ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ ಅವರ ನಾಡಲ್ಲಿ ಈಗ ಬಿಸಿರಕ್ತದ ಯುವಕನದ್ದೇ ಸುದ್ದಿ. ಆನಂದಿಬೇನ್ ಅವರ ಸರ್ಕಾರವನ್ನು ಅಲುಗಾಡಿಸುತ್ತಿರುವ 22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಯಾರು? ಆತನ ಮೇಲೆ ಪಟೇಲ್ ಸಮುದಾಯಕ್ಕೆ ಏಕೆ ಅಷ್ಟು ನಂಬಿಕೆ? ಪಟೇಲ್ ಸಮುದಾಯಕ್ಕೆ ಒಬಿಸಿ ಮಾನ್ಯತೆ ಸಿಗಬೇಕೇ? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿದೆ.
ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್, ಗುಜರಾತ್ ಬಂದ್ ಗೆ ಕರೆ ನೀಡಿದ್ದಾರೆ. [ಜಾತಿ ಮೀಸಲಾತಿ ನಿಷೇಧ ಅಸಾಧ್ಯ, ಏಕೆಂದರೆ?]
ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಗುಜರಾತ್‌ನ ಪಟೇಲ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದ್ದು, ಅಹ್ಮದಾಬಾದ್ ಬೇರೆಬೇರೆ ಭಾಗಗಳಲ್ಲಿ ಘರ್ಷಣೆಗಳು ವರದಿಯಾಗಿತ್ತು. ಅದರೆ, ಬುಧವಾರದಂದು ಹಿಂಸಾಚಾರ ಕೈಬಿಟ್ಟು ಶಾಂತಿಯುತ ಪ್ರತಿಭಟನೆ ಕೈಗೊಳ್ಳುವಂತೆ ಹಾರ್ದಿಕ್ ಪಟೇಲ್ ಕರೆ ನೀಡಿದ್ದಾರೆ. [ಗುಜರಾತ್ ಬಂದ್ ಗೆ ಕರೆ ನೀಡಿದ 22 ವರ್ಷದ ಹಾರ್ದಿಕ್ ]
ಕಳೆದೆರಡು ತಿಂಗಳಿಂದ ಗುಜರಾತ್ ರಾಜಕೀಯದಲ್ಲಿ ಹಾರ್ದಿಕ್ ಪಟೇಲ್ ಹೆಸರು ಕೇಳಿ ಬರುತ್ತಿದೆ. ಮಂಗಳವಾರ ಹಾರ್ದಿಕ್ ಪಟೇಲ್ ಅವರನ್ನು ಕೆಲ ಕಾಲ ಬಂಧಿಸಿದ ಗುಜರಾತ್ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. [ಹಾರ್ದಿಕ್, ಒಬಿಸಿ, ಗಲಭೆ, ಟ್ವಿಟ್ಟರ್ ನಲ್ಲಿ ಶಾಂತಿ ಮಂತ್ರ]
ಹಾರ್ದಿಕ್ ಬೆಂಬಲಕ್ಕೆ ಮಹಿಳೆಯರು ಸೇರಿದಂತೆ ಇಡೀ ಪಟೇಲ್ ಸಮುದಾಯವೇ ಹಿಂದೆ ನಿಂತಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರಿನಲ್ಲಿ ಮೀಸಲಾತಿ ಆಗ್ರಹಿಸುತ್ತಿರುವ ಹಾರ್ದಿಕ್ ಪಟೇಲ್ ಅವರನ್ನು 'ನವ ಮೋದಿ' ಎಂದೇ ಕರೆಯಲಾಗುತ್ತಿದೆ.

22 ವಯಸ್ಸಿನ ಅಭಿನವ ಮೋದಿ ಹಾರ್ದಿಕ್
ಅಹಮದಾಬಾದ್ ಜಿಲ್ಲೆಯ ವೀರಾಮ್ ಗ್ರಾಮದ 22 ವರ್ಷ ವಯಸ್ಸಿನ ಯುವಕ ಹಾರ್ದಿಕ್ ಪಟೇಲ್ ಈಗ ಗುಜರಾತಿನ ನವತಾರೆ. ಷಹಜನಬಾದ್ ಕಾಲೇಜಿನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಬಿ.ಕಾಂ ಪದವಿ ಪಡೆದಿರುವ ಹಾರ್ದಿಕ್ ಕೌಟುಂಬಿಕ ವೃತ್ತಿಯಾದ ಜಲ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಪಿಎಎಎಸ್ ಸಂಯೋಜಕ, ಸಂಘಟಕ
2011ರಲ್ಲಿ ಪಟೇಲ್ ಸಮುದಾಯದ ಹಿತಕಾಯುವುದಕ್ಕಾಗಿ 'ಸರ್ದಾರ್ ಪಟೇಲ್ ಸೇವಾದಾಳ' ಸ್ಥಾಪಿಸಿ ಹೋರಾಟ ಆರಂಭಿಸಿದ್ದರು. ನಂತರ, ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ (ಪಿಎಎಎಸ್) ಸಂಯೋಜಕರಾಗಿ ಒಂದು ತಿಂಗಳಲ್ಲೇ ರಾಜ್ಯದ 12 ಜಿಲ್ಲೆಗಳಲ್ಲಿ ಬಿರುಸಿನ ಪ್ರವಾಸ ಮಾಡಿ ಸಮುದಾಯದವರನ್ನು ಸಂಘಟಿಸಿದ್ದಾರೆ.

ಹಾರ್ದಿಕ್ ಭಾಷಣ ಕೇಳಲು 4 ಲಕ್ಷ ಜನ
ವಡೋದರದಲ್ಲಿ ನಡೆದ ಶಕ್ತಿ ಸಮಾವೇಶದಲ್ಲಿ ಸುಮಾರು 4 ಲಕ್ಷಕ್ಕೂ ಜನರನ್ನು ಉದ್ದೇಶಿಸಿ ಹಾರ್ದಿಕ್ ಭಾಷಣ ಮಾಡಿ ಮೋಡಿ ಮಾಡಿದಾರೆ. ಗುಜರಾತ್ನಲ್ಲಿ 'ಹೊಸ ಮೋದಿ', 'ಪಾಟಿದಾರ್ ಹೃದಯ್ ಸಾಮ್ರಾಟ್' ನವ ಮೋದಿ ಎಂದು ಎಲ್ಲೆಡೆ ಹಾರ್ದಿಕ್ ರನ್ನು ಕೊಂಡಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಹಾರ್ದಿಕ್ ಕೂಡಾ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಗುಜರಾತಿನ ಮೀಸಲಾತಿ ವ್ಯವಸ್ಥೆ
ಪಟೇಲ್ ಸಮುದಾಯಕ್ಕೆ ಸೇರಿದವರಾದ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ಪ್ರತಿಭಟನೆಗೆ ಜಗ್ಗಿಲ್ಲ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ಪ್ರಕಟಣೆ ಹೊರಡಿಸಲಾಗಿದೆ.

ಮೂಲತಃ ಕೃಷಿಕರು ನಂತರ ವ್ಯಾಪಾರಿಗಳಾದ ಪಟೇಲರು
ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications