ಎಚ್‌ಎಎಲ್‌ಗೆ ತಪ್ಪಿದ ಅವಕಾಶ: ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ನಿರ್ಮಲಾ

ನವದೆಹಲಿ, ಸೆಪ್ಟೆಂಬರ್ 18: ರಫೇಲ್ ಒಪ್ಪಂದದಿಂದ ಎಚ್‌ಎಎಲ್‌ಅನ್ನು ಹೊರಗಿಟ್ಟಿದ್ದು ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಫ್ರಾನ್ಸ್ ಮೂಲದ ಅಂತಾರಾಷ್ಟ್ರೀಯ ವಿಮಾನ ತಯಾರಕಾ ಸಂಸ್ಥೆ ದಸಾಲ್ಟ್ ಏವಿಯೇಷನ್ ಜತೆಗಿನ ಉತ್ಪಾದನಾ ನಿಯಮಗಳಿಗೆ ಎಚ್‌ಎಎಲ್ ಸಹಮತ ಹೊಂದಲು ಸಾಧ್ಯವಾಗದೆ ಇದ್ದದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ ಎಂದು ಅವರು ಹೇಳಿದ್ದಾರೆ.

ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಎಚ್‌ಎಎಲ್ ಹೊಂದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

HAL exluded from Rafale deal UPA government: Niramala Sitharaman

ನಿರ್ಮಲಾ ಸೀತಾರಾಮನ್ ಅವರು ಎಚ್‌ಎಎಲ್‌ನ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ ಎಂಬ ಕಾಂಗ್ರೆಸ್‌ನ ಹಿರಿಯ ಮುಖಂಡ ಎ.ಕೆ. ಆಂಟನಿ ಅವರ ಆರೋಪಕ್ಕೆ ನಿರ್ಮಲಾ ಪ್ರತಿಕ್ರಿಯಿಸಿದರು.

ಒಪ್ಪಂದ ಯುಪಿಎ ಅವಧಿಯಲ್ಲಿ ನಡೆಯಲಿಲ್ಲ. ಯುಪಿಎ ಅವಧಿಯಲ್ಲಿ ಉತ್ಪಾದನಾ ನಿಯಮಗಳಿಗೆ ಎಚ್‌ಎಎಲ್‌ ಮತ್ತು ದಸಾಲ್ಟ್ ನಡುವೆ ಸಹಮತವೂ ಉಂಟಾಗಲಿಲ್ಲ. ಹೀಗಾಗಿ ಈ ಎರಡೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಆಗಲಿಲ್ಲ. ಎಚ್‌ಎಎಲ್‌ ಜತೆ ಯಾರು ಇರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆಯಲ್ಲವೇ? ಯಾವ ಸರ್ಕಾರದ ಅವಧಿಯಲ್ಲಿ ಇದು ಆಗಿದ್ದು? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+