ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕೋಚ್ ಆಗಿದ್ರಂತೆ ರಾಮ್ ರಹೀಂ ಬಾಬಾ!
ರಾಮ್ ರಹೀಂ ಸಿಂಗ್ ಅವರು ಕೊಹ್ಲಿ ಅವರಿಗೆ ಕೋಚ್ ಆಗಿದ್ದರಂತೆ. ಬಾಕ್ಸರ್ ವಿಜೇಂದರ್ ಸಿಂಗ್ ಗೂ ಕೋಚ್ ಆಗಿದ್ದಾಗಿ ಅವರೇ ಹೇಳಿಕೊಂಡಿದ್ದ ವಿಡಿಯೋವೊಂದು ಈಗ ವೈರಲ್ ಆಗಿದೆ.
ನವದೆಹಲಿ, ಆಗಸ್ಟ್ 26: ಅತ್ಯಾಚಾರದ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಡೇರಾ ಸಚಾ ಸೌದ ಪಂಗಡದ ಧರ್ಮಗುರು ಬಾಬಾ ರಾಮ್ ರಹೀಮ್ ಸಿಂಗ್, ಈ ಹಿಂದೆ ಭಾರತದ ಕ್ರೀಡಾ ತಾರೆಗಳಾದ ಕ್ರಿಕೆಟಗ ವಿರಾಟ್ ಕೊಹ್ಲಿ, ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೂ ಕೋಚ್ ಆಗಿದ್ದರಂತೆ!
ಹೀಗೆಂದು, ಸಿಬಿಐ ಹೇಳಿಲ್ಲ.. ಇದನ್ನು ಖುದ್ದು ಬಾಬಾ ರಾಮ್ ರಹೀಮ್ ಅವರೇ ಹೇಳಿಕೊಂಡಿದ್ದಾರೆ. ಈ ಹಿಂದೆ, ಅವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ತಮ್ಮನ್ನು ತಾವು ಕ್ರೀಡಾ ಕೋಚ್ ಎಂದು ಹೇಳಿಕೊಂಡಿದ್ದು, ಕೊಹ್ಲಿ ಹಾಗೂ ವಿಜೇಂದರ್ ಸಿಂಗ್ ಅವರಿಗೆ ಕೋಚ್ ಆಗಿದ್ದ ಪುಟ್ಟ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಈ ಸಂದರ್ಶನದಲ್ಲಿ ಅವರು, ''ಇಂದು ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ತರುತ್ತಿದ್ದಾರೆ. ಅದೆಲ್ಲಾ ಯಾರಿಂದ ಬರುತ್ತಿದೆ ಎಂದ ತಿಳಿದುಕೊಂಡಿರಿ. ನನ್ನಿಂದ. ನಾನು ಹಿಂದೆ ಅವರನ್ನು ಕೋಚ್ ಮಾಡಿದ್ದರ ಫಲವಾಗಿಯೇ ಅವರು ದೇಶಕ್ಕೆ ಗೌರವ ತರುತ್ತಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.
''ಧರ್ಮ ಗುರುವಾಗಿದ್ದವನು ಕ್ರೀಡಾ ಕೋಚ್ ಆಗಲು ಹೇಗೆ ಸಾಧ್ಯ ಎಂದೆಲ್ಲಾ ನೀವು ಆಲೋಚಿಸಬಹುದು. ನಾನು ಸರ್ವ ಕಾರ್ಯಗಳನ್ನೂ ಮಾಡಬಲ್ಲೆ. ಇದು ನಿಮಗೆ ಈಗಾಗಲೇ ಗೊತ್ತಾಗಿರಬಹುದು'' ಎಂದು ಸಂದರ್ಶಕರನ್ನು ಉದ್ದೇಶಿಸಿ ಅವರು ಹೇಳಿದ್ದರು.
ಇಷ್ಟೇ ಅಲ್ಲ, ಅವರು ಈ ಹಿಂದೆ 32 ಕ್ರೀಡಾ ವಿಭಾಗಗಳಲ್ಲಿ ಉತ್ತಮ ಕ್ರೀಡಾಪಟು ಎನಿಸಿಕೊಂಡಿದ್ದರಂತೆ. ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿ ವಿವಿಧ ಬಹುಮಾನ, ಪದಕ ಪಡೆದಿದ್ದಾರಂತೆ. ಆಡಿದ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಗಳಂತೆ ಉಪಯೋಗಿಸಲಾಗುತ್ತಿದೆ.
ಅವರ ಟ್ವಿಟ್ಟರ್ ಖಾತೆಯಲ್ಲಿ ಅವರ ಬಣ್ಣನೆಯ ಸಾಲುಗಳಂತೂ ಉದ್ದುದ್ದ ಇವೆ! ಅದರಲ್ಲಿ, ''ಧರ್ಮಗುರು, ಮಾನವ ಪ್ರೇಮಿ, ಮಹಾನ್ ಗಾಯಕ, ಆಲ್ರೌಂಡರ್ ಕ್ರೀಡಾಳು, ಸಿನಿಮಾ ನಿರ್ದೇಶಕ, ನಟ, ಕಲಾ ನಿರ್ದೇಶಕ, ಸಂಗೀತ ನಿರ್ದೇಶಕ, ಲೇಖಕ, ಚಿತ್ರ ಸಾಹಿತಿ, ಆತ್ಮ ಚರಿತ್ರಾಕಾರ, ಡಿಒಪಿ'' ಎಂದೆಲ್ಲಾ ಬಣ್ಣಿಸಲಾಗಿದೆ.
Received via @WhatsApp Passing without comment 🤐🙌 pic.twitter.com/809ELRpLGb
— Aakash Chopra (@cricketaakash) August 26, 2017












Click it and Unblock the Notifications