ಮೋದಿ ಸೇರಿ ಘಟಾನುಘಟಿಗಳ ಮತದಾನಕ್ಕೆ ಸಜ್ಜಾದ ಗುಜರಾತ್

ಅಹಮದಾಬಾದ್, ಡಿಸೆಂಬರ್ 13: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಮತದಾನ ನಾಳೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವಾರು ಗಣ್ಯರು ಮತದಾನ ಮಾಡಲಿದ್ದಾರೆ.

ಅಹಮದಾಬಾದ್ ನ ರಾಣಿಪ್ ಪ್ರದೇಶದ ನಿಶಾನ್ ವಿದ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈಗಾಗಲೇ ಮಂಗಳವಾರ ತಮ್ಮ ಪ್ರಚಾರ ಮುಗಿಸಿ ದೆಹಲಿಗೆ ವಾಪಾಸಾಗಿರುವ ಪ್ರಧಾನಿ ಗುರುವಾರ ಮತ್ತೆ ಮತ ಚಲಾಯಿಸಲು ತಮ್ಮ ತವರಿಗೆ ಬರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ ಬಿಜೆಪಿಯ ಹಲವು ನಾಯಕರು ಗುರುವಾರದ ಮತದಾನದಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.

Gujarat polls: Ahmedabad school to roll out the red carpet for Modi to vote on Thursday

ತಮ್ಮ ಹಿಂದಿನ ವಿಧಾನಸಭೆ ಕ್ಷೇತ್ರ ನಾರಾಯಣಪುರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ ಚಲಾಯಿಸಿದ್ದಾರೆ. ಅಹಮದಾಬಾದ್ ನ ವೆಜಲ್ಪುರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.

ಇನ್ನು ಮಾಜಿ ಉಪ ಪ್ರಧಾನಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಗುರುವಾರ ಅಹಮದಾಬಾದ್ ನಲ್ಲೇ ಇರಲಿದ್ದು ಖನ್ಪುರದಲ್ಲಿ ಮತದಾನ ಮಾಡಲಿದ್ದಾರೆ.

ಬಿಜೆಪಿ ನಾಯಕರ ಕಥೆ ಹೀಗಾದರೆ ಅತ್ತ ಕಾಂಗ್ರೆಸ್ ನ ಪ್ರಮುಖ ನಾಯಕರೂ ನಾಳೆಯ ಮತದಾನದಲ್ಲಿ ಭಾಗಿಯಾಗಲಿದ್ದಾರೆ.

ಅಬ್ದಾಸಾ ಹಾಲಿ ಶಾಸಕ ಹಾಗೂ ಮಂಡ್ವಿ ಕಾಂಗ್ರೆಸ್ ಅಭ್ಯರ್ಥಿ ಶಕ್ತಿಸಿನ್ಹಾ ಗೋಹಿಲ್ ಗಾಂಧಿನಗರದಲ್ಲಿ ಮತ ಚಲಾಯಿಸಲಿದ್ದರೆ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭರತ್ ಸಿನ್ಹಾ ಸೋಲಂಕಿ ಖೇಡಾ ಜಿಲ್ಲೆಯ ಬರ್ಸಾದ್ ನಲ್ಲಿ ಮತ ಹಾಕಲಿದ್ದಾರೆ.

ಹೀಗೆ ಅಹಮದಾಬಾದ್ ಗುರುವಾರ ಮತದಾನಕ್ಕೆ ಸಜ್ಜಾಗುವುದರ ಜತೆಗೆ ವಿಶೇಷ ಅತಿಥಿಗಳನ್ನು ಸ್ವಾಗತಿಸಲು, ಸತ್ಕರಿಸಲು ಸಜ್ಜಾಗಿದೆ.

93 ಕ್ಷೇತ್ರಗಳಿಗೆ ಗುಜರಾತ್ ನಲ್ಲಿ ನಾಳೆ (ಡಿಸೆಂಬರ್ 14) ರಂದು ಮತದಾನ ನಡೆಯಲಿದ್ದು ಇದೇ ಡಿಸೆಂಬರ್ 14 ರಂದು ಫಲಿತಾಂಶ ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+