Gujarat Election Results 2022: ಗುಜರಾತ್ ಮಾದರಿಗೆ ಜನರಿಂದ ಅನುಮೋದನೆ- ಪ್ರಹ್ಲಾದ್ ಜೋಶಿ

ನವದೆಹಲಿ, ಡಿಸೆಂಬರ್‌ 07: ಗುಜರಾತ್‌ ವಿಧಾನಸಭೆ ಫಲಿತಾಂಶ(Gujarat Election Results 2022) ಪ್ರಕಟಗೊಳ್ಳುತ್ತಿದೆ. ಇದರಲ್ಲಿ ಭಾರತೀಯ ಜನತಾ ಪಕ್ಷ(BJP) ಸ್ಪಷ್ಟ ಬಹುಮತ ಪಡೆಯುವತ್ತ ಹೆಜ್ಜೆ ಇಟ್ಟಿದೆ.

ಈ ವಿಚಾರವಾಗಿ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, 'ಗುಜರಾತ್ ಮಾದರಿಯನ್ನು ಜನರು ಅನುಮೋದಿಸಿದ್ದಾರೆ ಮತ್ತು ಸ್ವೀಕರಿಸುತ್ತಿದ್ದಾರೆ' ಎಂದು ಗುರುವಾರ ಹೇಳಿದ್ದಾರೆ.

Recommended Video

      Gujarat Assembly Elections: ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಲ್ಲಿ ಕಾಂಗ್ರೆಸ್

      '2000-2001 ರಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಗುಜರಾತ್ ಮಾದರಿಯನ್ನು ಜನರು ಅನುಮೋದಿಸಿದ್ದಾರೆ ಮತ್ತು ಸ್ವೀಕರಿಸುತ್ತಿದ್ದಾರೆ. ನಾವು ರಾಷ್ಟ್ರದ ಮುಂದೆ ಪ್ರಸ್ತುತಪಡಿಸುತ್ತಿರುವ ಮಾದರಿಯನ್ನು ಸ್ವೀಕರಿಸಲಾಗುತ್ತಿದೆ. ನಾನು ಗುಜರಾತ್‌ನ ಜನರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಚುನಾವಣಾ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ದಾಖಲೆಗಳಲ್ಲಿ ಗುಜರಾತ್‌ ಚುನಾವಣೆಯೂ ಒಂದಾಗಿದೆ'ಎಂದು ಸಂಸದೀಯ ವ್ಯವಹಾರಗಳ ಸಚಿವರು ಗುಜರಾತ್‌ನಲ್ಲಿ ಬಿಜೆಪಿಯ ಭಾರಿ ಮುನ್ನಡೆ ಕುರಿತು ಸುದ್ದಿಗಾರರನ್ನು ಕೇಳಿದಾಗ ತಿಳಿಸಿದ್ದಾರೆ.

      Gujarat Poll Results 2022: Central Minister Pralhad Joshi Reaction

      ಪ್ರಧಾನಿ ನರೇಂದ್ರ ಮೋದಿ ಅವರು 2001ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1995ರಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈ ಬಾರಿಯು ಅಧಿಕಾರ ಹಿಡಿಯುವ ಮೂಲಕ ಬಿಜೆಪಿ ದಾಖಲೆ ಸೃಷ್ಟಿಸಲಿದೆ. ಈ ವರೆಗಿನ ಫಲಿತಾಂಶದ ಪ್ರಕಾರ, ಬಿಜೆಪಿ 150 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ಕೇವಲ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಮ್‌ ಆದ್ಮಿ ಪಕ್ಷವು ಆರು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.

      ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯವಾದ ಗುಜರಾತ್‌ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬಂದಿದ್ದರೂ, ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಸೂಚನೆಗಳು ಸಿಕ್ಕಿವೆ.

      Gujarat Poll Results 2022: Central Minister Pralhad Joshi Reaction

      ಪ್ರಧಾನಿ ಮೋದಿ ಸೇರಿದಂತೆ ಗುಜರಾತ್‌ನಲ್ಲಿ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್‌ ಮೌನಕ್ಕೆ ಜಾರಿತ್ತು. ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರ ಪ್ರಚಾರ ಕೈಗೊಂಡಿತ್ತು. ಇದು ಬಿಜೆಪಿ ಗೆಲುವಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರ ವರ್ಚಸ್ಸು ಹಾಗೂ ಹಿಂದುತ್ವದ ವಿಚಾರಗಳನ್ನು ಮುನ್ನಲೆಗೆ ತರಲಾಗಿತ್ತು. ಇದು ಬಿಜೆಪಿಗೆ ಸ್ಪಷ್ಟ ಬಹುಮತ ಗಳಿಸುವಲ್ಲಿ ಕೆಲಸ ಮಾಡಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+