ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಅಹಮದಾಬಾದ್, ಫೆಬ್ರವರಿ 20: ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಒಟ್ಟು 75 ನಗರ ಪಾಲಿಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 47ನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್ 16, ಎನ್ ಸಿಪಿ 1, ಬಿಎಸ್ಪಿ 1 ನಗರ ಪಾಲಿಕೆಗಳನ್ನು ತಮ್ಮ ತೆಕ್ಕೆ ತೆಗೆದುಕೊಂಡಿವೆ. 4 ಪಾಲಿಕೆಗಳಲ್ಲಿ ಪಕ್ಷೇತರರು ಅಧಿಪತ್ಯ ಸ್ಥಾಪಿಸಿದ್ದ 6 ಪುರಸಭೆಗಳ ಸ್ಪಷ್ಟ ಫಲಿತಾಂಶ ಹೊರಬಿದ್ದಿಲ್ಲ.

ಒಟ್ಟು 75 ನಗರ ಪಾಲಿಕೆ, 2 ಜಿಲ್ಲಾ ಪಂಚಾಯತ್, 17 ತಾಲೂಕು ಪಂಚಾಯತ್ ಮತ್ತು 1400 ಗ್ರಾಮ ಪಂಚಾಯತ್ ಗಳಿಗೆ ಶನಿವಾರ ಚುನಾವಣೆ ನಡೆದಿತ್ತು.

 Gujarat Municipal Poll: Out of 75 Nagarpalikas BJP wins 47, Congress 16, Others 12

ಇದರಲ್ಲಿ 17 ತಾಲೂಕು ಪಂಚಾಯತ್ ಗಳಲ್ಲಿ ಬಿಜೆಪಿ ಕಳೆದ ಬಾರಿ 13ನ್ನು ಗೆದ್ದುಕೊಂಡಿತ್ತು. ಇನ್ನು ಬನಸ್ಕಾಂತ ಮತ್ತು ಖೇಡಾ ಜಿಲ್ಲಾ ಪಂಚಾಯಿತಿಗಳೂ ಬಿಜೆಪಿ ಹಿಡಿತದಲ್ಲಿದ್ದವು. ಇವುಗಳ ಆಡಳಿತ ಉಳಿಸಿಕೊಳ್ಳುವುದೇ ಬಿಜೆಪಿ ಪಾಲಿಗೆ ಸವಾಲಿನದಾಗಿದೆ.

ಗ್ರಾಮ ಪಂಚಾಯತ್ ಗಳಿಗೆ ಪಕ್ಷದ ಚಿನ್ಹೆಯಡಿಯಲ್ಲಿ ಚುನಾವಣೆ ನಡೆಯುವುದಿಲ್ಲವಾದರೂ ಹೆಚ್ಚಿನ ಪಂಚಾಯತ್ ಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+