Gujarat Election Results 2022: ಕಾಂಗ್ರೆಸ್‌ ಗೆಲುವು, ಸೋಲಿಗೆ ಕಾರಣವಾಗುವ ಪ್ರಮುಖ ಅಂಶಗಳಿವು

ಅಹಮದಾಬಾದ್, ಡಿ.08: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗುತ್ತದೆ. ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಕಾಂಗ್ರೆಸ್ ಕೂಡ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಐದು ವಿಷಯಗಳು ಕಾಂಗ್ರೆಸ್‌ನ ಗೆಲುವು ಮತ್ತು ಸೋಲಿನ ಮೇಲೆ ಪ್ರಭಾವ ಬೀರಲಿವೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ಗುಜರಾತ್‌ನ ರಾಜಕೀಯ ನಿರ್ಧರಿಸಲಿರುವ ಸೌರಾಷ್ಟ್ರ

      ಗುಜರಾತ್‌ನ ರಾಜಕೀಯ ನಿರ್ಧರಿಸಲಿರುವ ಸೌರಾಷ್ಟ್ರ

      48 ಸ್ಥಾನಗಳನ್ನು ಹೊಂದಿರುವ ಈ ಪರ್ಯಾಯ ದ್ವೀಪವು ಗುಜರಾತ್‌ನ ರಾಜಕೀಯವನ್ನು ಬಹುಮಟ್ಟಿಗೆ ನಿರ್ಧರಿಸಿಸುತ್ತದೆ. 2017 ರ ಚುನಾವನೆಯಲ್ಲಿ ಈ ಪ್ರದೇಶವು ಕಾಂಗ್ರೆಸ್ ಪರವಾಗಿ ನಿಂತಿತ್ತು. ಪಕ್ಷವು ಇಲ್ಲಿ 28 ಸ್ಥಾನಗಳನ್ನು ಗೆದ್ದಿತು. ಜೊತೆಗೆ ಅದರ ಮಿತ್ರಪಕ್ಷ NCP ಮತ್ತೊಂದು ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಇದು ಕೃಷಿ ಸಂಕಷ್ಟ ಮತ್ತು ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಕೋಟಾ ಆಂದೋಲನದಿಂದ ಬಿಜೆಪಿ ಸರ್ಕಾರದ ವಿರುದ್ಧದ ಅಲೆಯಾಗಿ ಮಾರ್ಪಾಡಾಗಿತ್ತು.

      ಈಗ ಈ ಎರಡೂ ಅಂಶಗಳು ಪ್ರಮುಖವಾಗಿ ಕಾಂಗ್ರೆಸ್‌ ಪರ ಅಲೆಯಾಗದಿದ್ದರೂ, ದಿವಂಗತ ಪಾಟಿದಾರ್ ನಾಯಕ ಕೇಶುಭಾಯಿ ಪಟೇಲ್ ಅವರನ್ನು ಬಿಜೆಪಿಯಲ್ಲಿ ಬದಿಗಿಟ್ಟಿರುವ ಬಗ್ಗೆ ಅಸಮಾಧಾನವಿದೆ. ಹಾಗೆಯೇ ರಾಜ್‌ಕೋಟ್‌ಗೆ ಸೇರಿದ ಮಾಜಿ ಸಿಎಂ ವಿಜಯ್ ರೂಪಾನಿ ಅವರನ್ನು ಅನೌಪಚಾರಿಕವಾಗಿ ಹೊರಹಾಕಲಾಗಿರುವ ಬಗ್ಗೆಯೂ ಅಸಮಾಧಾನವಿದೆ.

      ಆದರೆ, ಇಲ್ಲಿ ಕಾಂಗ್ರೆಸ್‌ಗೆ ಸವಲಾಗಿರುವುದು ಆಪ್ ಪಕ್ಷ. ಕಳೆದ ಸೂರತ್ ನಾಗರಿಕ ಚುನಾವಾಣೆಯಲ್ಲಿ ಆಪ್ ಗೆಲುವು ದಾಖಲಿಸಿ ಇಲ್ಲಿ ಕಾಲಿಟ್ಟಿದೆ.

      ಕಾಂಗ್ರೆಸ್ ಬಗ್ಗೆ ಬುಡಕಟ್ಟು ಜನಾಂಗದಲ್ಲಿ ಒಲವು

      ಕಾಂಗ್ರೆಸ್ ಬಗ್ಗೆ ಬುಡಕಟ್ಟು ಜನಾಂಗದಲ್ಲಿ ಒಲವು

      ರಾಜ್ಯದಲ್ಲಿ 14% ಮತದಾರರಿರುವ ಬುಡಕಟ್ಟು ಜನಾಂಗದವರು ಗುಜರಾತ್‌ನಲ್ಲಿ ಅಸಾಧಾರಣ ಮತಬ್ಯಾಂಕ್ ಹೊಂದಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಒಲವು ತೋರಿದ್ದಾರೆ. 2017 ರಲ್ಲಿ ಕಾಂಗ್ರೆಸ್ 27 ಬುಡಕಟ್ಟು ಸಮುದಾಯಗಳ ಸ್ಥಾನಗಳಲ್ಲಿ 17 ಅನ್ನು ಗೆದ್ದುಕೊಂಡಿತ್ತು. ಇದರಲ್ಲಿ ಎರಡು ಮಿತ್ರ ಪಕ್ಷ ಭಾರತೀಯ ಬುಡಕಟ್ಟು ಪಕ್ಷವೂ ಸೇರಿತ್ತು. ಆದರೆ, ಬಳಿಕ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿ ಈಗ ಕೇವಲ ಒಂಬತ್ತು ಶಾಸಕರನ್ನು ಹೊಂದಿದೆ.

      ಆಪ್ ಕೂಡ ಬುಡಕಟ್ಟು ಮತಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಕಾಂಗ್ರೆಸ್ ಪಕ್ಷವು ಕ್ಷತ್ರಿಯ ಹರಿಜನ ಆದಿವಾಸಿ ಮುಸ್ಲಿಂ (KHAM) ಬಲವರ್ಧನೆಯ ಒಂದು ಭಾಗವಾದ ಬುಡಕಟ್ಟು ಜನಾಂಗದವರು ತನ್ನೊಂದಿಗೆ ಉಳಿಯುತ್ತದೆ ಎಂದು ಆಶಿಸಿದೆ.

      ಕಾಂಗ್ರೆಸ್‌ಗಿಂತ ತಾನೇ ವಿರೋಧ ಪಕ್ಷ ಎನ್ನುವ ಆಪ್!

      ಕಾಂಗ್ರೆಸ್‌ಗಿಂತ ತಾನೇ ವಿರೋಧ ಪಕ್ಷ ಎನ್ನುವ ಆಪ್!

      ಬಿಜೆಪಿ ಮತ್ತು ಹಿಂದುತ್ವ ಅಲೆಯ ವಿರುದ್ಧ ಹೋರಾಡಲು ಹೆಣಗಾಡುತ್ತಿರುವ ಕಾಂಗ್ರೆಸ್ ಈ ಬಾರಿ ಆಪ್ ವಿರುದ್ಧವೂ ಹೋರಾಡಬೇಕಿದೆ. ಗುಜರಾತ್‌ನ ದ್ವಿಧ್ರುವಿ ಸ್ಪರ್ಧೆಯಲ್ಲಿ ತನ್ನ ಜಾಗವನ್ನು ಆಪ್ ಗುರುತಿಸಿಕೊಂಡಿದೆ. ಎರಡು ಪಕ್ಷಗಳ ಹೋರಾಟ ಈ ಬಾರಿ ಮೂರು ಪಕ್ಷಗಳ ಹೋರಾಟವಾಗಿ ಬದಲಾಗಿದೆ.

      ಆಪ್ ಹೆಚ್ಚಾಗಿ ಗುಜರಾತ್‌ನ ಗ್ರಾಮೀಣ ಪ್ರದೇಶಗಳ ಗಮನವನ್ನು ತನ್ನತ್ತ ಸೆಳೆದಿದೆ. ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಕೂಡ ತಮ್ಮ ವಾಗ್ದಾಳಿಯನ್ನು ಕಾಂಗ್ರೆಸ್ ಮೇಲೆ ಕೇಂದ್ರೀಕರಿಸಿದ್ದರು. ಗುಜರಾತಿನ ಮತದಾರರಿಗೆ ತಮ್ಮ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದ್ದರು.

      ಮುಸ್ಲಿಂ ಮತಗಳ ವಿಭಜನೆ ಕಾಂಗ್ರೆಸ್‌ಗೆ ಕಂಟಕ

      ಮುಸ್ಲಿಂ ಮತಗಳ ವಿಭಜನೆ ಕಾಂಗ್ರೆಸ್‌ಗೆ ಕಂಟಕ

      ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಕಣದಲ್ಲಿ ಪ್ರವೇಶಿಸುವುದರೊಂದಿಗೆ ಕಾಂಗ್ರೆಸ್‌ನ ಮತ್ತೊಂದು ಸಾಂಪ್ರದಾಯಿಕ ನಿಷ್ಠಾವಂತ ಕ್ಷೇತ್ರವೂ ವಿಭಜನೆಯಾಗಬಹುದು. ಪಕ್ಷವು ಕೇವಲ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಇದು ಕಾಂಗ್ರೆಸ್‌ನ ಮತಗಳನ್ನು ವಿಭಜಿಸಬಹುದು. ಇದರಿಂದ ಬಿಜೆಪಿಗೆ ಲಾಭವಾಗಬಹುದು. ಜಮಾಲ್‌ಪುರ್-ಖಾಡಿಯಾದಂತಹ ಹೆಚ್ಚಿನ ಮುಸ್ಲಿಂ ಮತಗಳನ್ನು ಹೊಂದಿರುವ ಸ್ಥಾನಗಳು ಇಲ್ಲಿ ಕಾಂಗ್ರೆಸ್‌ನ ಇಮ್ರಾನ್ ಖೇಡಾವಾಲಾ ಮತ್ತು ಜಿಗ್ನೇಶ್ ಮೇವಾನಿ ಸ್ಪರ್ಧಿಸುತ್ತಿದ್ದಾರೆ.

      2017 ರಲ್ಲಿ ಕಾಂಗ್ರೆಸ್ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅದರಲ್ಲಿ ಮೂವರು ಗೆದ್ದಿದ್ದರು. ಈ ಬಾರಿಯೂ ಪಕ್ಷ ಆರು ಮಂದಿಯನ್ನು ಕಣಕ್ಕಿಳಿಸಿದ್ದರೆ, ಎಎಪಿ ಮೂವರನ್ನು ಕಣಕ್ಕಿಳಿಸಿದೆ. ಓವೈಸಿಯವರ ಸಾರ್ವಜನಿಕ ಸಭೆಗಳು ಗುಜರಾತಿ ಮತದಾರರನ್ನು ಮೆಚ್ಚಿಸುವಲ್ಲಿ ವಿಫಲವಾಗಿದೆ ಎಂದು ತೋರುತ್ತಿದೆಯಾದರೂ, ಕೆಲವು ಮುಸ್ಲಿಂ ಪ್ರಾಬಲ್ಯದ ಸ್ಥಾನಗಳಲ್ಲಿ ಕಡಿಮೆ ಮತದಾನವಾಗಿದೆ.

      *ಮತ ಹಂಚಿಕೆ*

      ರಾಜ್ಯದಲ್ಲಿ ಕಾಂಗ್ರೆಸ್ ಯಾವಾಗಲೂ ಕನಿಷ್ಠ ಶೇ.30ರಷ್ಟು ಮತಗಳಿಕೆಯನ್ನು ಹಿಡಿದಿಟ್ಟುಕೊಂಡಿದೆ. ವಾಸ್ತವವಾಗಿ, ನರೇಂದ್ರ ಮೋದಿಯವರ ಜನಪ್ರಿಯತೆಯ ಹೊರತಾಗಿಯೂ, ಅದರ ಮತಗಳ ಪ್ರಮಾಣವು ರಾಜ್ಯದಲ್ಲಿ ಏರಿಕೆಯಾಗಿದೆ . 2002 ರಲ್ಲಿ 39.59% ರಿಂದ 2017 ರಲ್ಲಿ 41.44% ಕ್ಕೆ ಏರಿದೆ.

      (ಮಾಹಿತಿ ಕೃಪೆ- ದಿ ಇಂಡಿಯನ್ ಎಕ್ಸ್‌ಪ್ರೆಸ್)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+