ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ: ರೂಪಾಲ

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 8: ಕೇಂದ್ರ ಸಚಿವ ಪರಷೋತ್ತಮ್‌ ರೂಪಾಲ ಅವರು 2022ರ ಗುಜರಾತ್‌ ವಿಧಾನಸಭಾ ಚುನಾವಣಾ ಫಲಿತಾಂಶವು 2024ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

Recommended Video

Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

ಇನ್ನೂ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚುನಾವಣಾ ಫಲಿತಾಂಶ ಕುರಿತು, ನಾನು ಏನು ನಿರೀಕ್ಷಿಸಿದ್ದೇನೋ ಅದನ್ನೇ ಹೇಳುತ್ತಿದ್ದೇನೆ. ಪ್ರಧಾನಿಯವರ ನೇತೃತ್ವದಲ್ಲಿ ಬಿಜೆಪಿ ಕೈಗೊಂಡಿರುವ ಅಭಿವೃದ್ಧಿ ಆಧಾರಿತ ಕೆಲಸಗಳ ನಿಜವಾದ ದ್ಯೋತಕವಾಗಿದೆ. ಗುಜರಾತ್ ಇಡೀ ದೇಶಕ್ಕೆ ಮಾದರಿ ಎಂದು ಹೇಳಿದ್ದಾರೆ.

Gujarat Election results 2022: 137 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆGujarat Election results 2022: 137 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸುತ್ತಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಗುಜರಾತ್‌ನಲ್ಲಿ ಆಡಳಿತರೂಢ ಪರ ಅಲೆ ಇದೆ. ರಾಜ್ಯದ ಜನತೆ ಪ್ರಧಾನಿ ಮೋದಿ ಮೇಲೆ ಅಪಾರ ನಂಬಿಕೆ ಇಟ್ಟಿರುವುದರಿಂದ ಗುಜರಾತ್‌ನಲ್ಲಿ ನಾವು ಹೊಸ ದಾಖಲೆಯನ್ನು ರಚಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Gujarat Election results 2022: Gujarat result compass for Lok Sabha elections: Rupala

ಇನ್ನೂ ಕರ್ನಾಟಕ ಸಂಸದ ಪಿಸಿ ಮೋಹನ್‌ ಗುಜರಾತ್‌ ಜನರು ಉಚಿತ ಭಾಗ್ಯಗಳ ಸಂಸ್ಕೃತಿಯನ್ನು ತಿರಸ್ಕರಿಸಿದ್ದಾರೆ. ಈ ಬಾರಿ ಮೋದಿ ಮ್ಯಾಜಿಕ್‌ ನಡೆದಿದೆ. ಪಿಎಂ ಮೋದಿಯಿಂದ ಎಲ್ಲವೂ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆಗೆ ನಡೆದ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು 156 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಡಿಸೆಂಬರ್‌ 1 ಹಾಗೂ 5ರಂದು ಕ್ರಮವಾಗಿ ಮೊದಲ ಹಾಗೂ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 59.11 ಹಾಗೂ ಎರಡನೇ ಹಂತದಲ್ಲಿ 63.14ರಷ್ಟು ಮತದಾನವಾಗಿತ್ತು.

ಗುಜರಾತ್ ವಿಧಾನಸಭಾ ಚುನಾವಣೆ 2022: ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಕ್ಷೇತ್ರಗಳ ಕಥೆ ಏನುಗುಜರಾತ್ ವಿಧಾನಸಭಾ ಚುನಾವಣೆ 2022: ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಕ್ಷೇತ್ರಗಳ ಕಥೆ ಏನು

1,621 ಅಭ್ಯರ್ಥಿಗಳು ಕಣದಲ್ಲಿರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಗೆ ಭಾರೀ ಭದ್ರತೆ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದಿದ್ದ ಬಿಜೆಪಿ ಈ ಭಾರಿಯೂ ಗೆಲ್ಲುವ ವಿಶ್ವಾಸದಲ್ಲಿ ಇದೆ. ಚುನಾವಣಾ ಎಕ್ಸಿಟ್‌ ಪೋಲ್‌ಗಳು ಕೂಡ ಬಿಜೆಪಿಗೆ ಪೂರಕವಾಗಿ ಇದ್ದವು. ಗುಜರಾತ್‌ನಲ್ಲಿ 182 ವಿಧಾನಸಭಾ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇ.64.33ರಷ್ಟು ಮತದಾನವಾಗಿದೆ. ಆದರೆ, ಇದು 2017ರ ಚುನಾವಣೆಯಲ್ಲಿ ದಾಖಲಾದ ಮತದಾನಕ್ಕೆ ಹೋಲಿಸಿದರೆ ಶೇ.4ಕ್ಕಿಂತ ಕಡಿಮೆಯಾಗಿದೆ.

2017ರಲ್ಲಿ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದ್ದಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಆಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಕಠಿಣ ಸ್ಫರ್ಧೆವನ್ನು ನೀಡಿತು. ಆದಾಗ್ಯೂ, ಆಮ್‌ ಆದ್ಮಿ ಪಾರ್ಟಿ ಮತ ಪಡೆಯುವ ಮೂಲಕ ಕಾಂಗ್ರೆಸ್‌ಗೆ ಪ್ರಬಲ ಹೊಡೆತ ನೀಡಬಹುದು. 2017 ರಲ್ಲಿ ಪಾಟಿದಾರ್ ಸಮುದಾಯದ ಪ್ರತಿಭಟನೆಯೊಂದಿಗೆ ಬಿಜೆಪಿ ಕೂಡ ಒತ್ತಡದಲ್ಲಿ ಸಿಲುಕಿತ್ತು. ಆದರೆ ಈ ಬಾರಿ ಪರಿಸ್ಥಿತಿಯು ಬಿಜೆಪಿಯ ಪರವಾಗಿದ್ದು, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು ಎನ್ನಲಾಗಿದೆ.

English summary
Gujarat Election results 2022: Union Minister Parashottam Rupala said that the result of 2022 Gujarat assembly elections will be a compass for 2024 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X