Gujarat Election Results 2022: 150 ಸ್ಥಾನಗಳಲ್ಲಿ ಬಿಜೆಪಿ ಮುಂದಕ್ಕೆ, ಕಾಂಗ್ರೆಸ್ ಪಾತಾಳಕ್ಕೆ!
ಅಹಮದಾಬಾದ್, ಡಿ. 08: ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಭರ್ಜರಿ ಜಯ ಸಾಧಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ 150 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಮುನ್ನೆಡೆ ಕಾಯ್ದುಕೊಂಡಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಆದರೆ, ಕಾಂಗ್ರೆಸ್ ಸಂಪೂರ್ಣವಾಗಿ ತಳ ಹಿಡಿಯುತ್ತಿದೆ.
Recommended Video

1995 ರಿಂದ ಗುಜರಾತ್‌ನಲ್ಲಿ ಚುನಾವಣೆಯಲ್ಲಿ ಸೋಲನುಭವಿಸದ ಭಾರತೀಯ ಜನತಾ ಪಕ್ಷವು (ಬಿಜೆಪಿ), ಬೆಳಗ್ಗೆ 11 ಗಂಟೆಗೆ 182 ಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ 149 ಸ್ಥಾನಗಳ ಸಾರ್ವಕಾಲಿಕ ದಾಖಲೆಯನ್ನು ಹಿಮ್ಮೆಟ್ಟಿಸಬಹುದು. ಬಿಜೆಪಿ 27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಆದರೆ ಇಂತಹ ಬೃಹತ್ ಜನಾದೇಶದೊಂದಿಗೆ ಚುನಾವಣೆಯಲ್ಲಿ ಗೆದ್ದಿಲ್ಲ.
ಪಾಟಿದಾರ್ ಮತ್ತು ಬುಡಕಟ್ಟು ಸ್ಥಾನಗಳಲ್ಲಿ ಎಎಪಿ ಸಾಕಷ್ಟು ಲಾಭ ಗಳಿಸಿದ್ದರೂ, 2017 ರ ಚುನಾವಣೆಯಲ್ಲಿ ಗಳಿಸಿದ ಲಾಭವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಈ ಬಾರಿ ಕೆಟ್ಟ ಸ್ಪರ್ಧೆ ನೀಡಿದೆ.

ಗುಜರಾತ್ 182 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಬಹುಮತದ ಸಂಖ್ಯೆ 92 ಆಗಿದೆ. ಎಕ್ಸಿಟ್ ಪೋಲ್‌ಗಳು ಬಿಜೆಪಿಯು ಸತತ ಏಳನೇ ಅವಧಿಗೆ ಆರಾಮವಾಗಿ ಅಧಿಕಾರಕ್ಕೆ ಏರುತ್ತದೆ ಎಂದು ಭವಿಷ್ಯ ನುಡಿದಿವೆ. ಈ ಮುನ್ನಡೆಗಳು ಜಯಗಳಾಗಿ ಬದಲಾದರೇ ಈಗ ಬಿಜೆಪಿ ಗಳಿಸಿದ ಸ್ಥಾನಗಳ ವಿಷಯದಲ್ಲಿ 2002 ರ ದಾಖಲೆಯನ್ನು ಮೀರಬಹುದು. ಗುಜರಾತಿನಲ್ಲಿ ಬಿಜೆಪಿ 2002 ರ ಚುನಾವಣೆಯಲ್ಲಿ 127 ಸ್ಥಾನಗಳನ್ನು ಗೆದ್ದುಕೊಂಡಿತು.
ಆದರೆ, 1985 ರ 149 ಸ್ಥಾನಗಳನ್ನು ಗೆದ್ದು ಸಾವ್ಕಾಲಿಕ ದಾಖಲೆ ನಿರ್ಮಿಸಿರುವ ಕಾಂಗ್ರೆಸ್ ದಾಖಲೆಯನ್ನು ಮೀರಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈಗಿನ ಮುನ್ನಡೆಗಳು ಮುಂದಿನ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಹುದು.

ಇನ್ನು, ಬಿಜೆಪಿ ಅಭ್ಯರ್ಥಿಗಳ ಮುನ್ನಡೆಯಿಂದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ.












Click it and Unblock the Notifications