Gujarat Election Results 2022: ಎಎಪಿ, ಒವೈಸಿಯಿಂದ ಮುಸ್ಲಿಂ ಮತಗಳ ವಿಭಜನೆ, ಬಿಜೆಪಿಗೆ ಲಾಭ
ಅಹಮದಾಬಾದ್, ಡಿಸೆಂಬರ್ 08: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆ(Gujarat Election Results 2022) ಫಲಿತಾಂಶವು ಭಾರತೀಯ ಜನತಾ ಪಕ್ಷ(BJP) ಸಿಹಿ ನೀಡಿದೆ. ಭಾರೀ ಬಹುಮತ ಗಳಿಸಿರುವ ಬಿಜೆಪಿ, ಸತತ ಏಳನೇ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಿದೆ. ಕಳೆದ ಬಾರಿ ಬಲಿಷ್ಠ ವಿಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆಮ್ ಆದ್ಮಿ ಪಕ್ಷವು(AAP) ಖಾತೆ ತೆರೆಯುವ ಲಕ್ಷಣಗಳು ಕಾಣುತ್ತಿವೆ.
ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯಿಂದ ಯಾವುದೇ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯದಿದ್ದರೂ ಸಹ ಕೇಸರಿ ಪಕ್ಷಕ್ಕೆ ಜಯ ಸಿಕ್ಕಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಹಾಗೂ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷಗಳು.
ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇರುವ ಗುಜರಾತ್‌ನ 17 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಹೊಂದಿದೆ.
Recommended Video

10 ವರ್ಷಗಳ ಕಾಲ ಶಾಸಕರಾಗಿದ್ದ ಗ್ಯಾಸುದ್ದೀನ್ ಶೇಖ್ ಅವರು, ಬಿಜೆಪಿ ಅಭ್ಯರ್ಥಿ ಕೌಸಿಕ್ ಜೈನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇವರು ಸ್ಪರ್ಧಿಸಿದ್ದ ದರಿಯಾಪುರ ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದೆ.
ಆಮ್ ಆದ್ಮಿ ಪಕ್ಷವು (ಎಎಪಿ) ತಾನು ಸ್ಪರ್ಧಿಸಿದ 16 ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಖಾತೆಯನ್ನು ತೆರದಿಲ್ಲ. ಅಸಾದುದ್ದೀನ್ ಒವೈಸಿ ನೇತೃತ್ವದ ಪಕ್ಷವೂ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಆದರೆ, ಸಾಂಪ್ರದಾಯಿಕವಾಗಿ ಮತಗಳನ್ನು ವಿಭಜಿಸುವಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಪಾತ್ರವನ್ನು ಹೊಂದಿವೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಎಐಎಂಐಎಂ ಇಬ್ಬರು ಮುಸ್ಲಿಮೇತರ ಅಭ್ಯರ್ಥಿಗಳು ಸೇರಿದಂತೆ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರು ಜಮಾಲ್‌ಪುರ್-ಖಾಡಿಯಾ ಮತ್ತು ವಡ್ಗಾಮ್‌ನಂತಹ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಮಾಲ್‌ಪುರ-ಖಾಡಿಯಾದಲ್ಲಿ ಕಾಂಗ್ರೆಸ್‌ನ ಇಮ್ರಾನ್ ಖೇದವಾಲಾ ಸೋಲು ಅನುಭವಿಸಿದ್ದಾರೆ. ವಡ್ಗಾಮ್‌ನಲ್ಲಿ ಜಿಗ್ನೇಶ್ ಮೇವಾನಿ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ.
ಹಲವು ರಾಜ್ಯಗಳಲ್ಲಿ ಒವೈಸಿ ಅವರ ಎಐಎಂಐಎಂನಿಂದ ಕಾಂಗ್ರೆಸ್ ಹಾಗೂ ಜಾತ್ಯತೀತ ಪಕ್ಷಗಳಿಗೆ ಹಾನಿ ಉಂಟಾಗಿದೆ ಎಂಬುದು ರಾಜಕೀಯ ನಾಯಕರ ಅಭಿಪ್ರಾಯವಾಗಿದೆ. ಕೆಲ ನಾಯಕರು ಒವೈಸಿ ಪಕ್ಷವನ್ನು ಬಿಜೆಪಿಯ 'ಬಿ-ಟೀಮ್' ಎಂದೂ ಕರೆದಿದ್ದಾರೆ. ಗುಜರಾತ್ ಚುನಾವಣೆಯಲ್ಲಿಯೂ ಇದೇ ರೀತಿಯ ಫಲಿತಾಂಶಗಳು ಹೊರಬಂದಿರುವುದು ಈ ವಾದಕ್ಕೆ ಮತ್ತಷ್ಟು ಪುಷ್ಠಿ ಬಂದಂತಾಗಿದೆ.












Click it and Unblock the Notifications