ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Result 2022 : ಭರ್ಜರಿ ಗೆಲುವು ಸಾಧಿಸಿದ ಸಿಎಂ ಭೂಪೇಂದ್ರ ಪಟೇಲ್

|
Google Oneindia Kannada News

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭರ್ಜರಿ ಜಯ ಸಾಧಿಸಿದ್ದಾರೆ. ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ತಮ್ಮ ಎದುರಾಳಿ ಅಮಿ ಯಾಗ್ನಿಕ್ ವಿರುದ್ಧ ಬೃಹತ್ ಅಂತರದ ಜಯ ಗಳಿಸಿದ್ದಾರೆ.

2021ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರನ್ನು ಕೆಳಗಿಳಿಸಿ ಭೂಪೇಂದ್ರ ಪಟೇಲ್‌ಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದವು. ವಿರೋಧ ಪಕ್ಷಗಳು ಈ ನಡೆಯನ್ನು ಪ್ರಶ್ನೆ ಮಾಡಿದ್ದವು. ಈ ಚುನಾವಣೆ ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಕ್ಕ ಅವಕಾಶವಾಗಿತ್ತು.

Recommended Video

Gujarat Assembly Elections: ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಲ್ಲಿ ಕಾಂಗ್ರೆಸ್

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಮಧ್ಯಾಹ್ನ 1.10 ರ ವೇಳೆಗೆ ಭೂಪೇಂದ್ರ ಪಟೇಲ್ 150193 ಮತಗಳನ್ನು ಪಡೆದರೆ, ಅವರ ಎದುರಾಳಿ ಯಾಗ್ನಿಕ್ ಕೇವಲ 16349 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಆಮ್ ಆದ್ಮಿ ಪಕ್ಷದ ವಿಜಯ್ ಪಟೇಲ್ 11833 ಮತಗಳನ್ನು ಪಡೆಯುವ ಮೂಲಕ 3ನೇ ಸ್ಥಾನಕ್ಕೆ ಕುಸಿದರು. 133,844 ಮತಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿರುವ ಭೂಪೇಂದ್ರ ಪಟೇಲ್ ಗೆಲುವು ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.

Gujarat Election Result 2022 : Chief Minister Bhupendra Patel Won By Big Margin

ಪಾಟಿದಾರ್ ಪ್ರಾಬಲ್ಯ ಹೊಂದಿರುವ ಗಾಂಧಿನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಘಟ್ಲೋಡಿಯಾ ಗುಜರಾತ್‌ಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಮೊದಲು ಇಲ್ಲಿಂದ ಸ್ಪರ್ಧಿಸಿದ್ದ ಆನಂದಿಬೆನ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಂದಿನಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ಘಟ್ಲೋಡಿಯಾದಲ್ಲಿ ಸಹಜವಾಗಿಯೇ ಭೂಪೇಂದ್ರ ಪಟೇಲ್ ಭರ್ಜರಿ ಜಯ ಸಾಧಿಸಿದ್ದಾರೆ.

ಭೂಪೇಂದ್ರ ಪಟೇಲ್ 2017 ರಲ್ಲಿ ಕೂಡ 1.17 ಲಕ್ಷ ಮತಗಳ ಭಾರಿ ಅಂತರದಿಂದ ಇಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆಯ ನಂತರ ಪಟೇಲ್ ಅವರಿಗೆ ಮತ್ತೆ ಉನ್ನತ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.

ಅಂದರೆ ಇನ್ನು 5 ವರ್ಷಗಳ ಕಾಲ ಭೂಪೇಂದ್ರ ಪಟೇಲ್‌ ಅವರೇ ಗುಜರಾತ್ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈಗಾಗಲೇ ಭೂಪೇಂದ್ರ ಪಟೇಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

English summary
Gujarat Assembly Election Results 2022 Updates, Gujrat Chief Minister Bhupendra Patel Won in Ghatlodia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X