ಮೂರ್ಖರ ಸೂತ್ರವನ್ನು ಮೂರ್ಖರು ಒಪ್ಪಿಕೊಂಡಿದ್ದಾರೆ: ನಿತಿನ್ ಪಟೇಲ್ ವ್ಯಂಗ್ಯ

Posted By: Nayana
Subscribe to Oneindia Kannada

ಅಹಮದಾಬಾದ್, ನವೆಂಬರ್23 : ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಮೂರ್ಖರು ನೀಡಿದ ಸೂತ್ರವನ್ನು ಮೂರ್ಖರು ಒಪ್ಪಿಕೊಂಡಿದ್ದಾರೆ ಎಂದು ಬುಧವಾರ (ನ.22)ರಂದು ಗುಜರಾತ್ ರಾಜ್ಯ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಎಂದು ವ್ಯಂಗ್ಯವಾಡಿದರು.

ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ

ಕಾಂಗ್ರೆಸ್ ಹಾಗೂ ಪಟೇಲ್ ಸಮುದಾಯದ ಹೋರಾಟಗಾರ ಮೈತ್ರಿ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿರುವ ನಿತಿನ್ ಪಟೇಲ್ ಅವರು ಮೂರ್ಖರು ನೀಡಿದ ಸೂತ್ರವನ್ನು ಮೂರ್ಖರು ಒಪ್ಪಿಕೊಂಡಿದ್ದಾರೆ. ಹಾರ್ದಿಕ್ ನಂತರ ದೊಡ್ಡ ಮೂರ್ಖ ವ್ಯಕ್ತಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಹಾರ್ದಿಕ್ ತಮ್ಮ ಸಮುದಾಯದಿಂದ ಪ್ರೀತಿಯನ್ನು ಪಡೆದಿರಬಹುದು. ಆದರೆ ಶೀಘ್ರದಲ್ಲೇ ಪಶ್ಚಾತಾಪ ಪಡಲಿದ್ದಾರೆ ಎಂದು ಹೇಳಿದರು.

ಬಿಜೆಪಿ-ಕಾಂಗ್ರೆಸ್ ಒಂದೇ; ಎಂದೂ ಟಿಕೆಟ್ ಕೇಳಿಲ್ಲ : ಹಾರ್ದಿಕ್ ಆಕ್ರೋಶ

Gujarat DCM Nitin criticised Hardik's formula foolish!

ಪಟೇಲ್ ಸಮುದಾಯಕ್ಕೆ ಶೇ.50ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಭರವಸೆಯನ್ನು ನೀಡಿದೆ. ಪಟೇಲ್ ಸಮುದಾಯಕ್ಕೆ ಕಾಂಗ್ರೆಸ್ ನೀಡಿರುವ ಮೀಸಲಾತಿ ಭರವಸೆ ದೊಡ್ಡ ಹಾಸ್ಯವಾಗಿದೆ. ಕಾಂಗ್ರೆಸ್ ಮತ್ತು ಪಟೇಲ್ ಮೀಸಲು ಹೋರಾಟ ನಾಯಕ ಹಾರ್ದಿಕ್ ಪಟೇಲ್ ನಡುವಿನ ಮೈತ್ರಿ ಮಾತುಕತೆ ಮುರಿದೇ ಹೋಯಿತು ಎನ್ನುವಷ್ಟರಲ್ಲಿ ಅಚ್ಚರಿಯ ಘೋಷಣೆ ಹೊರಬಿದ್ದಿದೆ.

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪಟೇಲ್ ಘೋಷಣೆ ಮಾಡಿದ್ದರು. ಈ ಮೂಲಕ 22 ವರ್ಷಗಳಿಂದ ಗುಜರಾತ್ ರಾಜ್ಯದಲ್ಲಿ ಅಧಿಕಾರದಲ್ಲ್ಇರುವ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Deputy Chief Minister Nitin Patel criticised on Patel movemnet leader Hardik Patel that fools are following a fool's formula in ongoing Patel's movement.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ