ಉದ್ಯೋಗ ತೊರೆದ ಎಸ್ಪಿಗೆ ಸಿಕ್ತು ಬಿಜೆಪಿ ಟಿಕೆಟ್
ಅಹಮದಾಬಾದ್, ನವೆಂಬರ್ 19: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆದವನೇ ಜಾಣ ಎಂಬ ಮಾತಿರುವಾಗ, ಬಿಜೆಪಿ ಟಿಕೆಟ್ ಸಿಗುವ ಭರವಸೆಯಲ್ಲಿ ಉದ್ಯೋಗ ತೊರೆದ ಪೊಲೀಸ್ ಎಸ್ಪಿಯೊಬ್ಬರಿಗೆ ನಿರಾಶೆಯಾಗಿಲ್ಲ. ಛೋಟಾ ಉದೇಪುರ್ ಎಸ್ಪಿ ಪಿಸಿ ಬರಾಂದ ಅವರಿಗೆ ಭಿಲೋಡಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.
ಬರಾಂದ ಅವರು ಸ್ವಯಂ ನಿವೃತ್ತಿ ಪಡೆದು ಚುನಾವಣೆ ನಿಲ್ಲಲು ಮುಂದಾಗಿದ್ದರು. ಆದರೆ, ಟಿಕೆಟ್ ಸಿಗುವ ಭರವಸೆ ಇದ್ದರೂ ರಾಜ್ಯ ಸರ್ಕಾರದಿಂದ ಅನುಮತಿ ಸಿಗುವ ಭರವಸೆ ಸಿಕ್ಕಿರಲಿಲ್ಲ.

ದಲಿತರೇ ಹೆಚ್ಚಾಗಿರುವ ತನ್ನೂರಿನ ಅಭಿವೃದ್ಧಿಗೆ ಶ್ರಮಿಸಲು ಹುದ್ದೆ ತೊರೆದಿರುವುದಾಗಿ ಬರಾಂದ ಅವರು ಘೋಷಿಸಿದ್ದರು. ಹಾಲಿ ಕಾಂಗ್ರೆಸ್ ಶಾಸಕರಿಂದ ಯಾವುದೇ ಅಭಿವೃದ್ಧಿ ಕಾರ್ಯ ಈ ಕ್ಷೇತ್ರದಲ್ಲಿ ಆಗಿಲ್ಲ, ಹೀಗಾಗಿ, ಪ್ರಧಾನಿ ಮೋದಿ ಅವರಿಂದ ಪ್ರಭಾವಿತನಾಗಿ ಚುನಾವಣೆ ಕಣಕ್ಕಿಳಿಯುತ್ತಿದ್ದೇನೆ ಎಂದು ಬಿರಾಂದ ಹೇಳಿದ್ದಾರೆ.
ಬರಾಂದ ಅವರ ರಾಜೀನಾಮೆಯನ್ನು ಬುಧವಾರದಂದು ಸರ್ಕಾರ ಅಂಗೀಕರಿಸಿದೆ. ಅರವಲ್ಲಿ ಜಿಲ್ಲೆಯ ಬಿಲೋಡಾ ಅಸೆಂಬ್ಲಿ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.
ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ 93 ಕ್ಷೇತ್ರಗಳಿಗೆ ಡಿಸೆಂಬರ್ 14ರಂದು ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications