ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಕಾಂಗ್ರೆಸ್‌ 2ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ 21 ಹಾಲಿ ಶಾಸಕರು

|
Google Oneindia Kannada News

ಅಹಮದಾಬಾದ್, ನ. 11: ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಇದ್ದು ಇಲ್ಲದಂತಾಗಿದೆ. ಚುನಾವಣೆಯಂತೂ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ಸ್ಪರ್ಧೆ ಎಂಬಂತೆಯೇ ಬಿಂಬಿತವಾಗುತ್ತಿದೆ. ಕಾಂಗ್ರೆಸ್ ತನ್ನ ಶಾಸಕರು, ನಾಯಕರನ್ನು ಕಳೆದುಕೊಳ್ಳುತ್ತಿದೆ.

ಇದರ ನಡುವೆಯೇ ಶುಕ್ರವಾರ ಕಾಂಗ್ರೆಸ್ ಚುನಾವಣೆಗೆ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 46 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ತನ್ನ 21 ಮಂದಿ ಹಾಲಿ ಶಾಸಕರನ್ನು ಕಣಕ್ಕಿಳಿಸಿದೆ.

ಕರ್ನಾಟಕದ ಮೇಲೆ ಗುಜರಾತ್‌ ಛಾಯೆ: ಹಿರಿಯರಿಗೆ ಕೊಕ್‌ ನೀಡಲಿದೆಯಾ ಬಿಜೆಪಿ?ಕರ್ನಾಟಕದ ಮೇಲೆ ಗುಜರಾತ್‌ ಛಾಯೆ: ಹಿರಿಯರಿಗೆ ಕೊಕ್‌ ನೀಡಲಿದೆಯಾ ಬಿಜೆಪಿ?

ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದು ಎರಡು ದಶಕಗಳಿಗೂ ಹೆಚ್ಚು ಕಾಲವಾಗಿದೆ. ಹೀಗಾಗಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಸುವ ಸಾಹಸಕ್ಕೆ ಮುಂದಾಗಿಲ್ಲ. ಈ 46 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ, ನಾಲ್ಕು ಮುಸ್ಲಿಂ ಅಭ್ಯರ್ಥಿಗಳನ್ನು ಹೆಸರಿಸಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

ಮೊದಲ ಹಂತದ 68 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ

ಮೊದಲ ಹಂತದ 68 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ

ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ನವೆಂಬರ್ 4 ರಂದು ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಮೊದಲ ಹಂತ ಮತ್ತು ಎರಡನೇ ಹಂತದ ಚುನಾವಣೆಯ 43 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಆದರೆ ಎರಡನೇ ಪಟ್ಟಿಯಲ್ಲಿರುವ ಎಲ್ಲಾ 46 ಅಭ್ಯರ್ಥಿಗಳು ಮೊದಲ ಹಂತ ಕ್ಷೇತ್ರಗಳಿಗೆ ಸೇರಿದ್ದಾರೆ.

ಕಾಂಗ್ರೆಸ್ ಇದುವರೆಗೆ ಮೊದಲ ಹಂತದ 68 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನೂ ಮೊರ್ಬಿ, ತಲಾಲಾ, ಭಾವನಗರ-ಗ್ರಾಮೀಣ, ಧಾರಿ, ಕೊಡಿನಾರ್, ರಾಪರ್, ಭರೂಚ್, ರಾಜ್‌ಕೋಟ್ ಪೂರ್ವ, ರಾಜ್‌ಕೋಟ್ ಪಶ್ಚಿಮ, ಜಂಬೂಸರ್, ನವಸಾರಿ, ಜಾಮ್‌ನಗರ ಗ್ರಾಮಾಂತರ ಸೇರಿದಂತೆ 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಾಗಿದೆ.

ಗುಜರಾತ್‌ನಲ್ಲಿ ಹೊಸ ಸಾಹಸಕ್ಕೆ ಕೈ ಹಾಕದ ಕಾಂಗ್ರೆಸ್

ಗುಜರಾತ್‌ನಲ್ಲಿ ಹೊಸ ಸಾಹಸಕ್ಕೆ ಕೈ ಹಾಕದ ಕಾಂಗ್ರೆಸ್

ಇತ್ತೀಚಿನ 46 ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ವಿರೋಧ ಪಕ್ಷದ ನಾಯಕ ಮತ್ತು ಅಮರೇಲಿ ಶಾಸಕ ಪರೇಶ್ ಧನಾನಿ, ರಾಜ್ಯ ಕಾರ್ಯಾಧ್ಯಕ್ಷ ಮತ್ತು ಟಂಕರ ಶಾಸಕ ಲಲಿತ ಕಗತಾರ ಮತ್ತು ಹಿರಿಯ ಶಾಸಕ ಪುಂಜ ವಂಶ ಸೇರಿದಂತೆ 21 ಹಾಲಿ ಶಾಸಕರಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲಿ ಯಾವುದೇ ಸಾಹಸಕ್ಕೆ ಕೈ ಹಾಕದೆ ಸುರಕ್ಷಿತವಾಗಿ ಆಟವಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಮುಂದಿನ ಪಟ್ಟಿಯಲ್ಲಿಯೂ ಹಾಲಿ ಶಾಸಕರಿಗೆ ಸ್ಥಾನ ಸಾಧ್ಯತೆ

ಮುಂದಿನ ಪಟ್ಟಿಯಲ್ಲಿಯೂ ಹಾಲಿ ಶಾಸಕರಿಗೆ ಸ್ಥಾನ ಸಾಧ್ಯತೆ

ದಾಸದಾ, ಚೋಟಿಲಾ, ಧೋರಾಜಿ, ಕಲಾವಾಡ್ (ಎಸ್‌ಸಿ), ಖಂಭಾಲಿಯಾ, ಜಮ್ಜೋಧ್‌ಪುರ, ಜುನಾಗಢ್, ಮಂಗ್ರೋಲ್, ಸೋಮನಾಥ್, ಲಾಠಿ, ಸಾವರಕುಂಡ್ಲಾ, ರಾಜುಲಾ, ತಲಾಜಾ, ಮಾಂಡ್ವಿ (ಎಸ್‌ಟಿ), ವ್ಯಾರಾ (ಎಸ್‌ಟಿ) , ನಿಜಾರ್ (ST), ವನ್ಸ್ಡಾ (ST) ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ಈ ಕ್ಷೇತ್ರಗಳನ್ನು ಕಳೆದುಕೊಳ್ಳಬಾರದು ಎಂಬ ಲೆಕ್ಕಾಚಾರದಲ್ಲಿದೆ. ಆದರೆ, ನಿರ್ಧಾರ ಮಾತ್ರ ಮತದಾರರ ಕೈಯಲ್ಲಿದೆ.

ಡಿಸೆಂಬರ್ 1 ರಂದು ಚುನಾವಣೆ ನಡೆಯಲಿರುವ ಸ್ಥಾನಗಳಿಂದ ಯಾವುದೇ ಹಾಲಿ ಕಾಂಗ್ರೆಸ್ ಶಾಸಕರನ್ನು ಪಕ್ಷವು ಕೈಬಿಟ್ಟಿಲ್ಲ. ಹೀಗಾಗಿ ಉಳಿದ 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವಾಗಲು ಹಾಲಿ ಶಾಸಕರನ್ನು ಕೈ ಬಿಡುವುದಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಿಂದ ನಾಲ್ವರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ

ಕಾಂಗ್ರೆಸ್‌ನಿಂದ ನಾಲ್ವರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ

ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಲ್ವರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ವಾಂಕನೇರ್ ಕ್ಷೇತ್ರದ ಹಾಲಿ ಶಾಸಕ ಮೊಹಮ್ಮದ್ ಜಾವೇದ್ ಪಿರ್ಜಾದಾ ಸೇರಿದ್ದಾರೆ. ಅವರ ಹೊರತಾಗಿ, ಅಬ್ಸಾಡಾ ಸ್ಥಾನಕ್ಕೆ ಮಮದ್‌ಭಾಯ್ ಜಂಗ್ ಜಾಟ್, ವಾಗ್ರಾಕ್ಕೆ ಸುಲೇನನ್ ಪಟೇಲ್ ಮತ್ತು ಸೂರತ್ ಪೂರ್ವಕ್ಕೆ ಅಸ್ಲಾಮ್ ಸೈಕಲ್‌ವಾಲಾ ಅವರಿಗೆ ಟಿಕೆಟ್ ನೀಡಿದೆ.

ಮೊದಲ ಹಂತದ 89 ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ ಇದುವರೆಗೆ 84 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ನವೆಂಬರ್ 14 ಕೊನೆಯ ದಿನವಾಗಿದೆ.

2017 ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು. ಆದರೆ ಹಲವಾರು ಶಾಸಕರು ಆಪರೇಷನ್ ಕಮಲದಂಥ ಕಾರ್ಯಾಚರಣೆಗಳಿಗೆ ಸಿಲುಕಿ ಪಕ್ಷಾಂತರ ಮಾಡಿದ ಕಾರಣ ವಿಧಾನಸಭೆಯಲ್ಲಿ 59 ಮಂದಿಯನ್ನು ಉಳಿಸಿಕೊಂಡಿದೆ.

English summary
Gujarat assembly elections 2022: Congress has fielded 21 sitting MLAs in the Gujarat for next month's Assembly elections. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X